ದೇವರು

ಪ್ರಪಂಚದಲ್ಲೆಲ್ಲೂ ನೋಡೋಕೆ ಸಿಗದ ಸರ್ಪ ರೂಪ ಶಯನ ದತ್ತಾತ್ರೇಯನ ಈ ದೇವಾಲಯಕ್ಕೆ ಇಷ್ಟೊಂದು ಮಹತ್ವ ಯಾಕೆ ಬಂತು ಗೊತ್ತಾ

ವಾರದವೆಲ್ಲಿ ಗ್ರಾಮವು ಚರಿತ್ರೆಯಲ್ಲಿ ಬಹಳ ಪ್ರಸಿದ್ದಿ ಹೊಂದಿದ ಗ್ರಾಮವಾಗಿದೆ. ಇದೆ ಸ್ಥಳದಲ್ಲಿ ಪ್ರಾಂಗಣದಲ್ಲಿ ದತ್ತಾತ್ರೇಯರು ದತ್ತಾತ್ರೇಯ ವೆಂಕಟರಮಣ ಸ್ವಾಮಿಯಾಗಿ ನೆಲೆಸಿದ್ದಾರೆ. ನೀರು ಹಾಗು ನೈಸರ್ಗಿಕ ಸಂಪನ್ಮೂಲಗಳಿಂದ ಕೂಡಿದ್ದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ , ಮೊದಲಿಗೆ ಗುಡ್ಡದ ಮೇಲಿನ ದತ್ತಾತ್ರೇಯ ಸ್ವಾಮಿಯ ದರ್ಶನ ಪಡೆದ ನಂತರ , ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಆನಂತರ ಭೀಮಲ ರಾಜರಾಜೇಶ್ವರ ಸ್ವಾಮಿಯನ್ನು ದರ್ಶನ ಮಾಡಬೇಕೆಂಬ ಆಚರಣೆಯನ್ನು ಮಾಡಿಕೊಂಡು ಬರುತ್ತಿದ್ದರು ಆದರೆ ಕಾಲಕ್ರಮೇಣ ಈ ಆಚರಣೆಯನ್ನು ಕೈಬಿಡಲಾಗಿದೆ.

ಸ್ಥಳ ಪುರಾಣ :

ಸ್ಥಳ ಪುರಾಣದ ಪ್ರಕಾರ ಸುಮಾರು 9000 ವರ್ಷಗಳ ಹಿಂದೆ ದೇಶ ಪರ್ಯಟನೆಯ ಭಾಗವಾಗಿ ವೆಂಕಟವಧೂತ ಎನ್ನುವ ಪುಟ್ಟ ಬಾಲಕ ಈ ಬೆಟ್ಟದ ಮೇಲೆ ಬಂದು ನೆಲೆ ನಿಲ್ಲುತ್ತಾನೆ , ಮೊದಲು ವೇಮುಲವಾಡಕ್ಕೆ ಬಂದು ಆನಂತರ ವರದವೆಲ್ಲಿ ಗ್ರಾಮಕ್ಕೆ ಬಂದನೆಂಬ ಪ್ರತೀತಿ ಇದೆ , ಅಲ್ಲಿ ಬೆಟ್ಟದ ಮೇಲಿದ್ದ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಅನುಗ್ರಹಕ್ಕಾಗಿ 12 ವರ್ಷ ಘೋರ ತಪಸ್ಸನ್ನು ಆಚರಣೆ ಮಾಡುತ್ತಾನೆ , ಹಾಗೆಯೇ ಬಾಲಕ ದತ್ತಾತ್ರೇಯರ ಪರಮ ಭಕ್ತನಾಗಿರುತ್ತಾನೆ , ವೆಂಕಟವಧೂತನ ಭಕ್ತಿಗೆ ಮೆಚ್ಚಿ ವೆಂಕಟೇಶ್ವರ ದತ್ತಾತ್ರೇಯರ ಅವತಾರದಲ್ಲಿ ದರ್ಶನ ಕೊಟ್ಟ ಎಂದು ಪುರಾಣಗಳು ಹೇಳುತ್ತವೆ , ಇದರಿಂದ ಸಂತುಷ್ಟನಾದ ಬಾಲಕ ಮತ್ತೊಮ್ಮೆ 28 ವರ್ಷ ಘೋರ ತಪಸ್ಸನ್ನು ಮಾಡುತ್ತಾನೆ ಆಗ ದತ್ತಾತ್ರೇಯನು ಏಕ ಮುಖನಾಗಿ ಗುರುವಾರದ ದಿನ ದರ್ಶನವನ್ನು ನೀಡುತ್ತಾರೆ .

 

 

‘ವರವೇನು ಬೇಕು ಕೋರಿಕೊ’ ಎಂದು ಕೇಳಲು ವೆಂಕಟವಧೂತ ‘ನಿನ್ನಲ್ಲಿ ನಾನು ಐಕ್ಯವಾಗಬೇಕು’ ಎನ್ನುತ್ತಾನೆ ಆಗ ದತ್ತಾತ್ರೇಯರು ‘ನಾನು ಮಹಾಸಮುದ್ರ ನನ್ನಲ್ಲಿ ಐಕ್ಯವಾದರೆ ಒಂದು ಸಮುದ್ರದ ಸಣ್ಣ ಹನಿಯಾಗುತ್ತೀಯ ಅಷ್ಟೇ ಎಂದಾಗ ಅದು ಬಿಟ್ಟು ನನಗೆ ಬೇರೆ ಆಸೆ ಇಲ್ಲ’ ಎನ್ನುತ್ತಾನೆ ಆಗ ದತ್ತಾತ್ರೇಯರು, ‘ನೀನು ಹುಟ್ಟಿರುವುದು ರಾಹುಕಾಲದಲ್ಲಿ ಉಳಿದೆಲ್ಲ ಗ್ರಹಗಳು ನೇರವಾಗಿ ಮನುಷ್ಯನಿಗೆ ಕಷ್ಟಗಳನ್ನು ಕೊಟ್ಟರು ರಾಹು ಮಾತ್ರ ಬಹಳ ಆಟ ಆಡಿಸುತ್ತಾನೆ, ನೀನು ರಾಹು ನೀಡುವ ಕಷ್ಟನಷ್ಟಗಳನ್ನು ಅನುಭವಿಸೆಯೇ ತೀರಬೇಕು, ಕರ್ಮಫಲಗಳನ್ನು ಮುಗಿಸಿಕೊಂಡ ಮೇಲಷ್ಟೇ ನಿನಗೆ ಮುಕ್ತಿ ಸಿಗುವುದು’ ಎನ್ನುತ್ತಾರೆ .

ಆಗ ವೆಂಕಟವಧೂತ ‘ನನ್ನ ಜನ್ಮ ಕುಂಡಲಿಯಲ್ಲಿ ರಾಹು ದೆಸೆಯು ನಡೆಯುತ್ತಿದ್ದು ರಾಹು ನಿಮ್ಮಲ್ಲಿ ಐಕ್ಯನಾಗಲು ಬಿಡುವುದಿಲ್ಲ’ ಎನ್ನಲು ದತ್ತಾತ್ರೇಯರು ರಾಹುವನ್ನು ಬರಲು ಆಜ್ಞಾಪಿಸುತ್ತಾರೆ , ಆಗ ಪ್ರತ್ಯಕ್ಶನಾದ ರಾಹುಹು ಕರೆಸಿದ ಕಾರಣವನ್ನು ಕೇಳಲು ವೆಂಕಟವಧೂತರ ಕರ್ಮಫಲಗಳನ್ನು ತೀರಿಸಲು ಹೇಳುತ್ತಾರೆ ಆಗ ರಾಹು ‘ನಿಮ್ಮ ಮುಂದೆ ನಾನು ತೃಣ ಮಾತ್ರ ನನಗೆ ಆ ಶಕ್ತಿ’ ಎನ್ನಲು , ಸ್ವತಃ ದತ್ತಾತ್ರೇಯರು ಸರ್ಪ ರೂಪ ರಾಹುವಿನ ಅವತಾರವೆತ್ತಿ ವೆಂಕಟವಧೂತನ ಕರ್ಮಗಳನ್ನು ಕಳೆಯುತ್ತಾರೆ .

ಆ ಪವಿತ್ರ ಕ್ಷೇತ್ರದಲ್ಲಿ ಈ ರೀತಿಯಾಗಿ ದತ್ತಾತ್ರೇಯರು ರಾಹು ಸರ್ಪ ರೂಪದಲ್ಲಿ ನೆಲೆನಿಂತು ಭಕ್ತರನ್ನು ಪೊರೆಯಲು ಶುರು ಮಾಡುತ್ತಾರೆ .

ಸ್ಥಳ:

ಈ ದೇವಸ್ಥಾನವು ಆಂಧ್ರ ಪ್ರದೇಶ ರಾಜ್ಯದ ಕರೀಮ್ ನಗರ ಜಿಲ್ಲೆಯ ಬೊಯಿನ್ಪಲ್ಲಿ ತಾಲೂಕಿನ ವರದೇವಲ್ಲಿ ಗ್ರಾಮದಲ್ಲಿ ಮುಲಾವುಗು ನದಿಯ ಪಕ್ಕದಲ್ಲಿ ಇದೆ.  ವರದವೆಲ್ಲಿ ದೇವಸ್ಥಾನವು ಪ್ರಸಿದ್ಧವಾದ ವೆಮುಲವಾಡ ಶ್ರೀ ರಾಜರಾಜೇಶ್ವರಸ್ ಸ್ವಾಮಿ ದೇವಾಲಯದ ಸಮೀಪದಲ್ಲಿದೆ. ವೆಮುಲಾವಾಡಾದಿಂದ ಕೇವಲ 6.5 ಕಿ.ಮೀ. ದೂರದಲ್ಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top