ಭವಿಷ್ಯ

04 ಆಗಸ್ಟ್ : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಶನಿವಾರ, ೦೪ ಆಗಸ್ಟ್ ೨೦೧೮
ಸೂರ್ಯೋದಯ : ೦೬:೧೭
ಸೂರ್ಯಾಸ್ತ : ೧೯:೧೧
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಆಷಾಢ

ಪಕ್ಷ : ಕೃಷ್ಣ ಪಕ್ಷ
ತಿಥಿ : ಸಪ್ತಮೀ – ೧೨:೦೪ ವರೆಗೆ
ನಕ್ಷತ್ರ : ಅಶ್ವಿನಿ – ೧೫:೦೦ ವರೆಗೆ
ಯೋಗ : ಶೂಲ – ೧೩:೦೦ ವರೆಗೆ
ಸೂರ್ಯ ರಾಶಿ : ಕರ್ಕ

ಅಭಿಜಿತ್ ಮುಹುರ್ತ : ೧೨:೧೮ – ೧೩:೧೦
ಅಮೃತಕಾಲ : ೦೭:೩೭ – ೦೯:೧೬
ರಾಹು ಕಾಲ:೦೯:೩೦ – ೧೧:೦೭
ಗುಳಿಕ ಕಾಲ: ೦೬:೧೭ – ೦೭:೫೩
ಯಮಗಂಡ:೧೪:೨೧ – ೧೫:೫೮

 

ನೀವು ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೊದಲು ಎರಡೆರಡು ಬಾರಿ ಯೋಚಿಸಿ ಕಾರ್ಯ ಪ್ರವೃತ್ತರಾಗಿ. ತಪ್ಪು ಕಲ್ಪನೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಿರಿ. ಆರೋಗ್ಯ ಸದೃಢವಾಗಿರುವುದು.

ಚಿತ್ತ ಚಾಂಚಲ್ಯದಿಂದಾಗಿ ಕೆಲಸ ಕಾರ್ಯಗಳಲ್ಲಿ ತಪ್ಪುಗಳು ನುಸುಳುವವು. ಮಕ್ಕಳೊಡನೆ ಕೆಲ ಸಮಯ ಕಳೆಯಿರಿ. ಮಧ್ಯಾಹ್ನದ ವೇಳೆಗೆ ಗೊಂದಲದ ಮನಸ್ಥಿತಿ ಅಂತ್ಯಗೊಳ್ಳುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ದೇಹದಲ್ಲಿ ಉತ್ತಮ ಚೈತನ್ಯವಿದ್ದರೂ ದೇಹ ಮನಸ್ಸು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದರಿಂದ ಇಂದಿನ ಕಾರ್ಯದಲ್ಲಿ ಅಪಯಶಸ್ಸು ಕಾಣುವಿರಿ. ಆಂಜನೇಯ ಸ್ತೋತ್ರ ಪಠಿಸಿ. ಇದರಿಂದ ಕಾರ್ಯದಲ್ಲಿ ಯಶಸ್ಸು ದೊರೆಯುವುದು.

ಖರ್ಚು, ವೆಚ್ಚಗಳು ಹೆಚ್ಚಾಗಲಿವೆ. ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ. ಷೇರು ವಹಿವಾಟುದಾರರಿಗೆ ಶುಭಯೋಗವಿದೆ. ಬಂಧುಮಿತ್ರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಒಳ್ಳೆಯದು.

 

ವ್ಯಾಪಾರ, ವ್ಯವಹಾರದಲ್ಲಿ ನಿಮ್ಮ ಎಣಿಕೆಯಂತೆ ಲಾಭ ಕಂಡುಬರುವುದು. ಇಷ್ಟಕಾರ್ಯ ಸಿದ್ಧಿಯಾಗಲಿದ್ದು ದೇಹದ ಆರೋಗ್ಯಉತ್ತಮವಾಗಿರುತ್ತದೆ. ಬಂಧು, ಮಿತ್ರರೊಡನೆ ಭೋಜನಕೂಟದಲ್ಲಿ ಭಾಗವಹಿಸುವಿರಿ. ಅವಿವಾಹಿತರಿಗೆ ಶುಭಯೋಗವಿದೆ.

 

 

ಆರೋಗ್ಯದಲ್ಲಿ ಚೇತರಿಕೆ ಕಂಡುಬಂದು ಮನಸ್ಸು ಉಲ್ಲಸಿತವಾಗಿರುವುದು. ಸಜ್ಜನರೊಡನೆ ಸಹವಾಸ, ಸರ್ವರಿಂದ ಮಾನ ಮನ್ನಣೆ ಉಂಟಾಗುವುದು. ನಾನಾ ಮೂಲಗಳಿಂದ ಹಣಕಾಸು ಬರುವುದು. ಸ್ನೇಹಿತರ ಸಹಕಾರ ದೊರೆಯುವುದು.

 

 

ದೂರದ ಸಂಬಂಧಿಗಳು ಅಥವಾ ಹಳೆಯ ಸ್ನೇಹಿತರು ನಿಮ್ಮನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಅವರಿಗೆ ಅಗತ್ಯವಾದ ಸಲಹೆ ಸಹಕಾರ ನೀಡಿ ಸಂತೋಷ ಪಡಿಸುವಿರಿ.

 

 

ಯಾರನ್ನೂ ದಿಢೀರನೆ ನಂಬಬೇಡಿ. ಅಂತೆಯೇ ನಿಮ್ಮ ಕಾರ್ಯ ಯೋಜನೆಗೆ ಸಹಾಯವಾಗುವ ವಿಷಯವನ್ನು ಖಂಡಿತವಾಗಿ ಪರಿಶೀಲಿಸಿ. ಮನೆ ಸದಸ್ಯರೊಡನೆ ಮತ್ತು ನೆರೆಹೊರೆ ಜನರೊಂದಿಗೆ ಉತ್ತಮ ಬಾಂಧವ್ಯಇರಿಸಿಕೊಳ್ಳುವುದು ಕ್ಷೇಮ.

 

ಕಾರ್ಯಾರಂಭ ಮುನ್ನವೇ ನಾನು ಸೋಲಬಹುದು ಎಂಬ ಭಯವನ್ನು ನೀವು ಬಿಡುವುದು ಒಳ್ಳೆಯದು. ಭಗವಂತನ ನಾಮಸ್ಮರಣೆಯೊಂದಿಗೆ ಕಾರ್ಯ ಆರಂಭಿಸಿ. ನಿಮ್ಮ ಸದೀಚ್ಛೆಯಂತೆ ಭಗವಂತ ಕರುಣೆ ತೋರುವನು.

 

ನಿಮ್ಮ ಅದೃಷ್ಟ ನಿಮ್ಮ ಬಾಗಿಲಿಗೆ ಬರುವಾಗ ಅದನ್ನು ಹೊರತಳ್ಳುವುದು ತರವಲ್ಲ. ಬರಬೇಕಾಗಿದ್ದ ಹಣ ನಿಮ್ಮ ಕೈಸೇರುವುದು. ಕುಟುಂಬ ಸದಸ್ಯರ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಿ.

 

ಹಣಕಾಸಿನ ವಿಷಯದಲ್ಲಿ ಬಿಗಿ ಹಿಡಿತ ಸಾಧಿಸಿರುವ ನೀವು ಕೆಲವೊಮ್ಮೆ ಧಾರಾಳತನವನ್ನೂ ತೋರಿಸಬೇಕಾಗುತ್ತದೆ. ಇದರಿಂದ ಸಾಮಾಜಕವಾಗಿ ನೀವು ಗೌರವಿಸಲ್ಪಡುವಿರಿ. ಆರೋಗ್ಯ ಉತ್ತಮವಾಗಿರುತ್ತದೆ. ಸಂಗಾತಿ ಬೆಂಬಲವಿದೆ.

 

ಅನಗತ್ಯ ವಸ್ತುಗಳ ಖರೀದಿಗೆ ದುಂದುವೆಚ್ಚ ಮಾಡದಿರಿ. ನಿಮಗೆ ಬರಬೇಕಾಗಿದ್ದ ಹಣ ಸಕಾಲದಲ್ಲಿ ಬರುವುದಿಲ್ಲ. ಹಾಗಾಗಿ ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top