ಆರೋಗ್ಯ

ಕಡಿಮೆ ವಯಸ್ಸಿನಲ್ಲಿ ಬರೋ ಬಿಳಿ ಕೂದಲಿನ ಸಮಸ್ಯೆಗೆ ಮನೆಯಲ್ಲಿ ಸಿಗೋ ಈ 8 ಪದಾರ್ಥ ಬಳ್ಸ್ಕೊಂಡು ಕಪ್ಪು ಕೂದ್ಲು ಮಾಡ್ಕೋಬಹುದು.

ಕಡಿಮೆ ವಯಸ್ಸಿನಲ್ಲಿ ಬರೋ ಬಿಳಿ ಕೂದಲಿನ ಸಮಸ್ಯೆಗೆ ಮನೆಯಲ್ಲಿ ಸಿಗೋ ಈ 8 ಪದಾರ್ಥ ಬಳ್ಸ್ಕೊಂಡು ಕಪ್ಪು ಕೂದ್ಲು ಮಾಡ್ಕೋಬಹುದು.

ಅತಿ ಚಿಕ್ಕ ವಯಸ್ಸಿಗೆ ಕಾಣಿಸಿಕೊಳ್ಳುವ ಬಿಳಿ ಕೂದಲಿನ ಸಮಸ್ಯೆಗೆ ನೈಸರ್ಗಿಕವಾದ ಪರಿಹಾರಗಳು ಈಗಿನ ಕಾಲದಲ್ಲಿ ಇಪ್ಪತ್ತು ಮೂವತ್ತು ವರ್ಷಕ್ಕೆ ಬಿಳಿ ಕೂದಲು ಬಂದು ನೋಡಲು ವಯಸ್ಸಾದವರಂತೆ ಕಾಣುತ್ತಾರೆ ಇದು ಎಲ್ಲರನ್ನು ಬೇಸರಗೊಳಿಸುತ್ತದೆ.

ಇದಕ್ಕೆ ಹಲವಾರು ಕಾರಣಗಳಿವೆ ಹಾರ್ಮೋನುಗಳ ಒತ್ತಡ ಸರಿಯಾಗಿಲ್ಲದ ಆಹಾರ ಕ್ರಮ ಖಿನ್ನತೆ ವಂಶವಾಹಿ ಇನ್ನಿತರ ರಾಸಾಯನಿಕಗಳು ಹಾಗೂ ಯಾವುದಾದರೂ ಬೇರೆ ರೋಗದಿಂದ ಉಂಟಾದ ಅಡ್ಡ ಪರಿಣಾಮ ಸಹ ಆಗಿರಬಹುದು , ಕಡಿಮೆ ಮಟ್ಟದ ಮೆಲಾನಿನ್ ಸಹ ಇದಕ್ಕೆ ಮುಖ್ಯ ಕಾರಣ

ಬನ್ನಿ ಈ ಸಮಸ್ಯೆಗಳಿಗೆ ಪರಿಹಾರ ಏನೆಂದು ತಿಳಿದುಕೊಳ್ಳೋಣ

ಬೆಟ್ಟದ ನೆಲ್ಲಿಕಾಯಿ

ಬೆಟ್ಟದ ನೆಲ್ಲಿಕಾಯಿ ಬಹಳ ವರ್ಷಗಳಿಂದ ಉಪಯೋಗಿಸುತ್ತಿರುವ ನೈಸರ್ಗಿಕ ವಿಧಾನ ,ಇದು ಕೂದಲನ್ನು ಕಪ್ಪಾಗಿ ಕಾಂತಿಯುತವಾಗಿ ಬೆಳೆಯಲು ಸಹಾಯ ಮಾಡುತ್ತದೆ
ಕೂದಲು ಉದುರುವ ಮತ್ತು ಇನ್ನಿತರ ಕೂದಲಿನ ಸಮಸ್ಯೆಗಳಿಗೆ ಇದು ರಾಮಬಾಣ ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿದ್ದು ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ

ಕೊಬ್ಬರಿ ಎಣ್ಣೆಯನ್ನು ಕಾಯಿಸಿ ನಂತರ ಅದರಲ್ಲಿ ಬೆಟ್ಟದ ನಲ್ಲಿ ಕಾಯಿಯ ಚೂರುಗಳನ್ನು ಹಾಕಿ ,ಒಂದು ಬಾಟಲಿನಲ್ಲಿ ಹಾಕಿ ತಲೆಗೆ ಹಚ್ಚಿಕೊಳ್ಳಿ, ಹಚ್ಚಿಕೊಂಡು ಐದರಿಂದ ಆರು ಗಂಟೆಗಳ ಕಾಲ ಹಾಗೇ ಬಿಟ್ಟು ನಂತರ ತಲೆ ಸ್ನಾನ ಮಾಡುವುದರಿಂದ ಈ ಸಮಸ್ಯೆಗೆ ಪರಿಣಾಮಕಾರಿ ಎರಡು ಬಾರಿ ವಾರದಲ್ಲಿ ಮುಂದುವರಿಸಿದರೆ ಉತ್ತಮ

ಅಗತ್ಯವಿದ್ದಲ್ಲಿ ಬೆಟ್ಟದ ನಲ್ಲಿಯೇ ಕಾಯಿಯ ಚೂರುಗಳ ಜೊತೆ ಸ್ವಲ್ಪ ನಿಂಬೆ ರಸವನ್ನು ಸಹ ಸೇರಿಸಿ ರಾತ್ರಿ ತಲೆಗೆ ಹಚ್ಚಿ ಬೆಳಿಗ್ಗೆ ಸ್ನಾನ ಮಾಡಿಕೊಳ್ಳಬಹುದು

ಕರಿಬೇವಿನ ಸೊಪ್ಪು

ಒಂದು ಹಿಡಿ ಕರಿಬೇವಿನ ಸೊಪ್ಪನ್ನು ಸ್ವಲ್ಪ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕಾಯಿಸಬೇಕು
ನಂತರ ಈ ಎಣ್ಣೆಯನ್ನು ತಲೆಗೆ ಹಚ್ಚಿಕೊಂಡರೆ ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ ತಲೆಸ್ನಾನ ಮಾಡುವ ನಲವತ್ತೈದು ನಿಮಿಷಗಳ ಮುಂಚೆ ಈ ಕ್ರಿಯೆಯನ್ನು ಮಾಡಬೇಕು ವಾರದಲ್ಲಿ ಎರಡರಿಂದ ಮೂರು ಬಾರಿ ಇದನ್ನು ಮಾಡಿದರೆ ಉತ್ತಮ ಪರಿಹಾರ ಕಾಣಬಹುದು

ಮೆಹಂದಿ

ಮೆಹಂದಿ ಎಲೆಗಳನ್ನು ಚೆನ್ನಾಗಿ ರುಬ್ಬಿ ಅದಕ್ಕೆ ಎರಡರಿಂದ ಮೂರು ನೆಲ್ಲಿಕಾಯಿಯ ಪುಡಿಯನ್ನು ಸೇರಿಸಿ ಸ್ವಲ್ಪ ಕಾಫಿ ಪುಡಿಯನ್ನು ಬೆರೆಸಿ ಮೊಸರನ್ನು ಸೇರಿಸಿ ತಲೆಗೆ ಹಚ್ಚಿಕೊಂಡರೆ ಬಿಳಿ ಕೂದಲ ಸಮಸ್ಯೆ ಮಾಯವಾಗುತ್ತದೆ ವಾರದಲ್ಲಿ ಅಥವಾ ನಾಲ್ಕರಿಂದ ಐದು ವಾರಕ್ಕೊಮ್ಮೆ ಈ ಕರೆಯನ್ನು ಮುಂದುವರಿಸಿ

ಕೊಬ್ಬರಿ ಎಣ್ಣೆ ಮತ್ತು ನಿಂಬೆ ರಸ

ಈ ಎರಡು ಮಿಶ್ರಣ ಅದ್ಭುತ ದಂತೆ ನಿಮ್ಮ ತಲೆಕೂದಲಿನ ಮೇಲೆ ಕೆಲಸ ಮಾಡುತ್ತದೆ ತಲೆ ಕೂದಲನ್ನು ಸೊಂಪಾಗಿ ಬೆಳೆಸುವುದರ ಜೊತೆಗೆ ಕೂದಲು ಉದುರುವ ಸಮಸ್ಯೆಗಳಿಗೆ ರಾಮಬಾಣ

ಈರುಳ್ಳಿ ರಸ

ಕೂದಲು ಬಿಳಿ ಆಗಲು ಪ್ರಮುಖ ಕಾರಣ ಎಂದರೆ ಹೈಡ್ರೋ ಫೆರಾ ಆಕ್ಸೈಡ್ ಆದರೆ ಈರುಳ್ಳಿ ಯಲ್ಲಿರುವ ಸಂಯುಕ್ತ ಇದರ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ

ಕಪ್ಪು ಚಹಾ

ಕಪ್ಪು ಚಹಾವನ್ನು ಹೆಚ್ಚಿಗೆ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಅಲ್ಲದೇ ಕೂದಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ,ದಿನಕ್ಕೆ ಎರಡು ಬಾರಿ ಸೇವಿಸಿ .

ದಂಟಿನ ಸೊಪ್ಪು

ಕೂದಲನ್ನು ಚೆನ್ನಾಗಿ ತೊಳೆದ ನಂತರ ದಂಟಿನ ಸೊಪ್ಪಿನ ಎಲೆಗಳನ್ನು ನುಣ್ಣಗೆ ರುಬ್ಬಿ ತಲೆಗೆ ಹಚ್ಚಿಕೊಂಡರೆ ಇದು ಸಹ ಕೂದಲು ಉದುರುವ ಸಮಸ್ಯೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ .

ಕಪ್ಪು ಎಳ್ಳು

ಕಪ್ಪು ಎಳ್ಳಿನಲ್ಲಿ ಪ್ರೊಟೀನ್ ಕಬ್ಬಿಣಾಂಶ ಕ್ಯಾಲ್ಸಿಯಂ, ಫಾಸ್ಪರಸ್, ಮೆಗ್ನೇಷಿಯಂ ಹಾಗೂ ಕಾಪರ್ ಅಂಶಗಳು ಹೆಚ್ಚಾಗಿದೆ ಆದ್ದರಿಂದ ಇದು ನಮ್ಮ ಕೂದಲಿನ ಸಮಸ್ಯೆಯನ್ನು ಆದಷ್ಟು ಬೇಗ ತೊಡೆದು ಹಾಕುತ್ತದೆ ದಿನವೂ ಒಂದು ಅರ್ಧ ಚಮಚದಷ್ಟು ಕಪ್ಪು ಎಳ್ಳನ್ನು ತಿಂದರೆ ಕೂದಲಿನ ಸಮಸ್ಯೆಗೆ ಪರಿಣಾಮ ಕಾಣಬಹುದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top