ಭವಿಷ್ಯ

06 ಆಗಸ್ಟ್ ರಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಲು ಮುಂದೆ ಓದಿ

ಸೋಮವಾರ, ೦೬ ಆಗಸ್ಟ್ ೨೦೧೮
ಸೂರ್ಯೋದಯ : ೦೬:೧೭
ಸೂರ್ಯಾಸ್ತ : ೧೯:೧೦
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಆಷಾಢ

ಪಕ್ಷ : ಕೃಷ್ಣ ಪಕ್ಷ
ತಿಥಿ : ನವಮೀ – ೦೯:೫೫ ವರೆಗೆ
ನಕ್ಷತ್ರ : ಕೃತ್ತಿಕ – ೧೪:೦೮ ವರೆಗೆ
ಯೋಗ : ವೃದ್ಧಿ – ೦೯:೧೨ ವರೆಗೆ
ಸೂರ್ಯ ರಾಶಿ : ಕರ್ಕ

ಅಭಿಜಿತ್ ಮುಹುರ್ತ :೧೨:೧೮ – ೧೩:೦೯
ಅಮೃತಕಾಲ : ೧೧:೪೮ – ೧೩:೨೧
ರಾಹು ಕಾಲ:೦೭:೫೪ – ೦೯:೩೧
ಗುಳಿಕ ಕಾಲ: ೧೪:೨೦ – ೧೫:೫೭
ಯಮಗಂಡ:೧೧:೦೭ – ೧೨:೪೪

 

ಯಾವುದೇ ರೀತಿಯ ಒತ್ತಡಗಳು ಬಂದರೂ ಜಾಣತನದಿಂದ ಅದನ್ನು ನಿಭಾಯಿಸಿ. ಇದರಿಂದ ನಿಮಗೆ ಉತ್ತಮ ಮಾರ್ಗ ಗೋಚರಿಸುವುದು. ಗುರು, ಹಿರಿಯರ ಸಲಹೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ಆನೆ ನಡೆದದ್ದೇ ದಾರಿ ಎನ್ನುವಂತೆ ನೀವು ಯೋಜಿಸುವ ಮತ್ತು ಕಾರ್ಯ ಪ್ರವೃತ್ತರಾಗುವ ದಾರಿ ವಿಶಿಷ್ಟವಾಗಿರುತ್ತದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಅಭಿವೃದ್ಧಿಯಾಗುವುದು ಹಾಗೂ ಪರರಿಗೆ ಅಸೂಯೆಯನ್ನುಂಟು ಮಾಡುವುದು.

 

ಜೀವನವೇ ಒಂದು ನಾಟಕರಂಗ. ಹಾಗಾಗಿ ಭಗವಂತನ ಅಣತಿಯಂತೆ ನಾವು ವರ್ತಿಸಬೇಕಿದೆ. ಆದರೆ ದೇವರ ನ್ಯಾಯ ತೀರ್ಮಾನದಲ್ಲಿ ಎಂದು ವ್ಯತ್ಯಾಸವಾಗುವುದಿಲ್ಲ. ಹಾಗಾಗಿ ನಿಮ್ಮ ಪಾಲಿಗೆ ಬಂದ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ.

ಒಳ್ಳೆಯ ಯೋಜನೆಗಳಿಗೆ ಅವಕಾಶ ಕಂಡುಬರುವುದು. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು. ಸಂಗಾತಿ ಸಲಹೆಗಳನ್ನು ಸ್ವೀಕರಿಸಿ. ಮಗುವಿನ ಮುದ್ದು ಮಾತು ನಿಮ್ಮ ದಣಿವನ್ನು ಬಗೆಹರಿಸುವುದು. ಕೆಲಸದಲ್ಲಿ ಹೊಸ ಉತ್ಸಾಹ ಮೂಡುವುದು.

 

ಭರವಸೆ ವ್ಯವಹಾರದ ಅವಕಾಶವೊಂದು ನಿಮಗೆ ಬರುವುದು. ಇದರಿಂದ ಉತ್ತೇಜಿತರಾಗಿ ದಿನವನ್ನು ಬಹು ಖುಷಿಯಿಂದ ಕಳೆಯುವಿರಿ. ಆಹಾರ, ವಿಹಾರದಲ್ಲಿ ಸ್ವಲ್ಪ ಎಚ್ಚರ ಇರಲಿ. ಪ್ರಯಾಣದಲ್ಲಿ ಸುಖ ಕಾಣುವಿರಿ.

 

 

ಭರವಸೆ ವ್ಯವಹಾರದ ಅವಕಾಶವೊಂದು ನಿಮಗೆ ಬರುವುದು. ಇದರಿಂದ ಉತ್ತೇಜಿತರಾಗಿ ದಿನವನ್ನು ಬಹು ಖುಷಿಯಿಂದ ಕಳೆಯುವಿರಿ. ಆಹಾರ, ವಿಹಾರದಲ್ಲಿ ಸ್ವಲ್ಪ ಎಚ್ಚರ ಇರಲಿ. ಪ್ರಯಾಣದಲ್ಲಿ ಸುಖ ಕಾಣುವಿರಿ.

 

 

ಪ್ರೇಮಾನುಬಂಧಗಳು ಬಲವಾಗುತ್ತವೆ. ಸರಿಯಾದ ದಿಕ್ಕಿನಲ್ಲಿ ಚಿಂತಿಸುವಿರಿ. ನಿಮ್ಮ ಗಟ್ಟಿ ನಿರ್ಧಾರಗಳು ಜೀವನದ ಗತಿಯನ್ನೆ ಬದಲಾಯಿಸುವುದು. ಇದಕ್ಕೆ ಪೂರಕವಾಗಿ ಕೌಟುಂಬಿಕ ಬೆಂಬಲ ವ್ಯಕ್ತವಾಗುವುದು. ಸಂತಸ ಹೊಂದುವಿರಿ.

 

 

ನೀವು ಸರಿಯಾದ ದಾರಿಯಲ್ಲಿ ಕ್ರಮಿಸುತ್ತಿರುವುದರಿಂದಲೇ ನಿಮ್ಮನ್ನು ಕಂಡರೆ ಎಲ್ಲರಿಗೂ ಗೌರವ ಪ್ರೀತಿ. ಇದನ್ನು ಕಾಪಾಡಿಕೊಂಡು ಹೋಗುವುದು ನಿಮ್ಮ ಜವಾಬ್ದಾರಿ. ನಿಮ್ಮ ಬುದ್ಧಿವಂತಿಕೆ ಬಗ್ಗೆ ಎಲ್ಲೆಡೆ ಚರ್ಚೆ ಆಗುವುದು.

 

ನಿಮ್ಮ ಕಾರ್ಯ ಯೋಜನೆಗಳು ನೀವು ಬಯಸಿದಂತೆ ಆಗುವುದರಿಂದ ವಿರೋಧಿಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸುವುದು. ನಿಮ್ಮ ಸಹೋದ್ಯೋಗಿಗಳು ನಿಮ್ಮ ಬೆನ್ನು ತಟ್ಟಿ ನಿಮ್ಮನ್ನು ಹುರಿದುಂಬಿಸುವರು.

 

ಆಶಾವಾದವೇ ಜೀವನ. ನಿರಾಶಾವಾದವೇ ಮರಣ ಎನ್ನುವಂತೆ ಇಂದು ಆಶಾವಾದದಿಂದ ಇರುವ ದಿನ. ನಿಮ್ಮ ಎಲ್ಲಾ ಧನಾತ್ಮಕ ಕಾರ್ಯಗಳು ಕೈಗೂಡುವವು. ಅದರಿಂದ ಸಂತಸವಾಗುವುದು. ಆಂಜನೇಯ ಸ್ತೋತ್ರ ಪಠಿಸಿ.

 

ಸರಿ ಕಂಡಿದ್ದನ್ನು ಧೈರ್ಯವಾಗಿ ಮಾತನಾಡಿ, ನಿಮ್ಮ ನೇರ ನಿಷ್ಠೂರ ನುಡಿಯಿಂದಾಗಿ ಕೆಲವೇ ಉತ್ತಮ ಸ್ನೇಹಿತರು ದೊರೆಯುವರು. ಕುಲದೇವತಾ ಪ್ರಾರ್ಥನೆ ಮಾಡಿ. ಸಂಗಾತಿ ಬೆಂಬಲವಿದೆ.

 

ಯಾರೊಂದಿಗೂ ಅಸಮಾಧಾನ ವ್ಯಕ್ತಪಡಿಸುವುದು ಒಳ್ಳೆಯದಲ್ಲ. ಇನ್ನೊಬ್ಬರ ವ್ಯಾಜ್ಯದಲ್ಲಿ ಮೂಗು ತೂರಿಸದಿರಿ. ವೈಯಕ್ತಿಕ ಕಾರ್ಯ ಕಲಾಪಗಳಲ್ಲಿ ಯಶಸ್ಸು ದೊರೆಯುವುದು. ಮಕ್ಕಳ ಪ್ರಗತಿ ಮಾನಸಿಕ ನೆಮ್ಮದಿಯನ್ನುಂಟು ಮಾಡುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top