ಭವಿಷ್ಯ

07 ಆಗಸ್ಟ್ : ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಮಂಗಳವಾರ, ೦೭ ಆಗಸ್ಟ್ ೨೦೧೮
ಸೂರ್ಯೋದಯ : ೦೬:೧೮
ಸೂರ್ಯಾಸ್ತ : ೧೯:೦೯
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಆಷಾಢ

ಪಕ್ಷ : ಕೃಷ್ಣ ಪಕ್ಷ
ತಿಥಿ : ದಶಮೀ – ೦೭:೫೨ ವರೆಗೆ
ನಕ್ಷತ್ರ : ರೋಹಿಣಿ – ೧೨:೪೪ ವರೆಗೆ
ಯೋಗ : ಧ್ರುವ – ೦೬:೩೦ ವರೆಗೆ
ಸೂರ್ಯ ರಾಶಿ : ಕರ್ಕ

ಅಭಿಜಿತ್ ಮುಹುರ್ತ : ೧೨:೧೮ – ೧೩:೦೯
ಅಮೃತಕಾಲ : ೦೯:೪೩ – ೧೧:೧೪
ರಾಹು ಕಾಲ:೧೫:೫೬ – ೧೭:೩೩
ಗುಳಿಕ ಕಾಲ: ೧೨:೪೪ – ೧೪:೨೦
ಯಮಗಂಡ:೦೯:೩೧ – ೧೧:೦೭

 

ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಆಹಾರ ವಿಹಾರದಲ್ಲಿ ಎಚ್ಚರಿಕೆ ಇರಲಿ. ಕೆಲವೊಮ್ಮೆ ಸೇವಿಸಿದ ಆಹಾರದಿಂದಲೇ ಅನಾರೋಗ್ಯ ಬರುವ ಸಾಧ್ಯತೆ ಇದೆ.

ಜೀವನದಲ್ಲಿ ಯಾರೂ ಕೆಲಸಕ್ಕೆ ಬಾರದವರಲ್ಲ. ಭಗವಂತ ಒಬ್ಬೊಬ್ಬರಲ್ಲಿ ಒಂದು ವಿಶಿಷ್ಟ ಶಕ್ತಿ ಕೊಟ್ಟಿರುತ್ತಾನೆ. ಹಾಗಂತ ಪರರ ವೈಫಲ್ಯವನ್ನು ಎತ್ತಿ ಆಡುವುದು ಅಷ್ಟು ಸಮಂಜಸವಲ್ಲ. ನಿಮ್ಮನ್ನು ನೀವು ಅರ್ಥಮಾಡಿ ಕೊಳ್ಳಿ.

 

ಬಂಧುಗಳೊಂದಿಗೆ ಬಿಟ್ಟು ಹೋಗಿದ್ದ ಸಂಬಂಧ ಮತ್ತೆ ಚಿಗುರಲಿದೆ. ಇದರಿಂದ ಮನೆಯಲ್ಲಿ ಎಲ್ಲರಿಗೂ ಸಂತೋಷ ಉಂಟಾಗುವುದು. ಚಿಕ್ಕ ಮಕ್ಕಳ ಅನಾರೋಗ್ಯಕ್ಕೆ ಹೆಚ್ಚಿನ ಖರ್ಚಾಗುವುದು. ಆದರೆ ಇದಕ್ಕೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಜಾಗ್ರತೆ ವಹಿಸದಿದ್ದರೆ ಆಹಾರ ಸಂಬಂಧಿ ಉದರ ಸಮಸ್ಯೆ ನಿಮ್ಮನ್ನು ಕಾಡುವುದು.

ಸ್ನೇಹಿತರ ಹಾಗೂ ಅನುಭವಿಗಳ ಮಾರ್ಗದರ್ಶನ ತುಂಬಾ ಅವಶ್ಯಕ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಕಾಡುವುದು. ಸೂಕ್ತ ಚಿಕಿತ್ಸೆ ಮಾಡಿಸಿ. ನಿಮ್ಮ ಶ್ರಮಕ್ಕೆ ಹಾಗೂ ದುಡಿಮೆಗೆ ತಕ್ಕ ಪ್ರತಿಫಲ ದೊರೆಯಲಿದೆ. ಮತ್ತೊಬ್ಬರ ಜೀವನದ ಆಗುಹೋಗುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ.

 

ಎದುರಾಗುವ ಸನ್ನಿವೇಶಗಳನ್ನು ನಾಜೂಕಾಗಿ ನಿಭಾಯಿಸುವಿರಿ. ನಿಮ್ಮ ಪರವಾಗಿ ನಿಮ್ಮ ವಕೀಲರು ವಾದ ಮಾಡಿ ಜಯ ತಂದುಕೊಡುವರು. ಹಿತ ಶತ್ರುಗಳ ವಿಷಯದಲ್ಲಿ ಉದಾಸೀನ ಬೇಡ. ಸಾಲ ತೆಗೆದುಕೊಳ್ಳುವಾಗ ಇದ್ದ ಉತ್ಸಾಹ ತೀರಿಸುವಾಗ ಇಲ್ಲದಿದ್ದರೆ ಮರ್ಯಾದೆ ಹೋಗುವುದು.

 

 

ಮಾತಿನಲ್ಲಿ ಬಲು ಚತುರರಾದ ನೀವು ವಿಷಯ ತಿಳಿದಿದ್ದರೂ ಮುಗ್ಧರಂತೆ ಇರುವುದು ಉತ್ತಮ. ಬೇರೆಯವರ ವೈಯಕ್ತಿಕ ವಿಚಾರಗಳಲ್ಲಿ ಅತಿ ಕುತೂಹಲ ಬೇಡ. ಇದರಿಂದ ವೈಯಕ್ತಿಕ ಕೀರ್ತಿಗೆ ಕಳಂಕ ಬರುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿ ಮನಸ್ಸಿಗೆ ನೆಮ್ಮದಿ ನೀಡುವುದು. ಆದಾಯ ಹೆಚ್ಚಾಗುವುದು. ಸ್ಥಿರಾಸ್ತಿ ಖರೀದಿ ವಿಚಾರದಲ್ಲಿ ಆಶಾಕಿರಣ ಮೂಡುವುದು.

 

 

ಕುಟುಂಬದ ಸೌಹಾರ್ದತೆ ಕಾಪಾಡಿಕೊಳ್ಳಲು ಹೆಣಗಾಡುವಿರಿ. ನೀವು ಯಾರ ಪರವಾಗಿ ಮಾತನಾಡಿದರೂ ಮತ್ತೊಬ್ಬರ ಅಸಹನೆಗೆ ಕಾರಣವಾಗುವುದು. ಸಮನ್ವಯತೆ ಕಾಪಾಡಲು ಪ್ರಯತ್ನಿಸಿ. ನಿಮ್ಮ ಯಾವುದೇ ಪ್ರಯತ್ನಗಳಿಗೆ ಮನೆ ಸದಸ್ಯರ ಸಹಕಾರ ಸಿಗದೆ ಕಳವಳ ಪಡುವಿರಿ. ಆದರೆ ನಿಮ್ಮ ಛಲ ಸ್ವಭಾವ ಅವೆಲ್ಲವನ್ನೂ ಮೆಟ್ಟಿ ನಿಲ್ಲುವುದು.

 

 

ಶ್ರಮ ಜೀವಿಗಳಿಗೆ ಹೆಚ್ಚಿನ ದುಡಿಮೆಯಿಂದ ಅಧಿಕ ಧನಲಾಭವಾಗಲಿದೆ. ಮತ್ತೊಬ್ಬರಿಗೆ ಹಾಸ್ಯ ಮಾಡಲು ಹೋಗಿ ನೀವೇ ಅಪಹಾಸ್ಯಕ್ಕೆ ಗುರಿಯಾಗುವಿರಿ.

 

ಸೋತು ಗೆದ್ದಿರುವ ನೀವು ಹೊಸ ಸ್ಥಳದಲ್ಲಿ ಕೆಲಸ ಮಾಡಲು ಆತ್ಮವಿಶ್ವಾಸ ಮತ್ತು ಧೈರ್ಯ ರೂಢಿಸಿಕೊಳ್ಳಿ. ಬಾಕಿ ಸಮಸ್ಯೆಗಳೆಲ್ಲವೂ ಕ್ರಮೇಣ ಬಗೆಹರಿದು ನೆಮ್ಮದಿ ಮೂಡಲಿದೆ. ಆಸ್ತಿಗೆ ಸಂಬಂಧಪಟ್ಟಂತೆ ನೆರೆಹೊರೆಯವರಿಂದ ತಗಾದೆ ಬರುವುದು. ಇದು ವಿಕೋಪಕ್ಕೆ ಹೋಗುವ ಮುನ್ನ ಮಾತುಕತೆಯಿಂದ ಬಗೆಹರಿಸಿಕೊಳ್ಳಿ.

 

ನೀವು ಮೇಲೇರಲು ಸೂಕ್ತ ಸಮಯವಾಗಿದ್ದು, ಜನರ ನಡುವೆ ವಿಶಿಷ್ಟ ಸ್ಥಾನ ಪಡೆದು ಪ್ರಶಂಸೆ ಗಿಟ್ಟಿಸಿಕೊಳ್ಳುವಿರಿ. ಕೆಲವು ಯೋಜನೆಗಳಿಗೆ ಸೂಕ್ತ ವಹಿವಾಟುದಾರರು ದೊರೆಯುವರು.

 

ಆರ್ಥಿಕ ವಿಚಾರದಲ್ಲಿ ನಿಮ್ಮನ್ನು ಬೆಸ್ತು ಬೀಳಿಸುವ ಜನರು ನಿಮ್ಮ ಸುತ್ತಲೂ ಇರುವರು. ನಿಮಗೆ ಅವರು ಮಂಕುಬೂದಿ ಎರಚಿ ಹಣ ಲಪಟಾಯಿಸುವ ಕೆಲಸದಲ್ಲಿ ತೊಡಗಿದ್ದಾರೆ. ಆಂಜನೇಯ ಸ್ತೋತ್ರ ಪಠಿಸಿ.

 

ನಿಮ್ಮ ಸಕಾರಾತ್ಮಕ ಚಿಂತನಾ ಶಕ್ತಿಯ ವಿಚಾರದಲ್ಲಿ ಎಲ್ಲವೂ ಸರಿ ಇದೆ ಎಂದುಕೊಳ್ಳುತ್ತಿರುವಾಗಲೇ ಬಾಯಿ ತಪ್ಪಿ ಆಡಿದ ಮಾತಿನಿಂದಾಗಿ ಎಲ್ಲವೂ ಹೊಳೆಯಲ್ಲಿ ಹುಣಸೆ ಹಣ್ಣು ಕದಡಿದಂತೆ ಆಗುವುದು. ದುರ್ಗಾದೇವಿಯನ್ನು ಪ್ರಾರ್ಥಿಸಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top