fbpx
ಸಿನಿಮಾ

ಸಮುದ್ರ ಮಟ್ಟದಿಂದ 9000 ಅಡಿ ಎತ್ತರದಲ್ಲಿರುವ ಈ ಜಾಗದಲ್ಲಿ ನಡೆಯುತ್ತಿದೆ ಅಂಬಾನಿ ಸುಪುತ್ರನ ಮದುವೆ

ರಿಲಾಯನ್ಸ್ ಇಂಡಸ್ಟ್ರೀಸ್ ಚೇರ್ಮನ್, ದೇಶದ ಆಗರ್ಭ ಶ್ರೀಮಂತ ಮುಕೇಶ್ ಅಂಬಾನಿ ಅವರ ಹಿರಿಯ ಮಗನಾಗಿರುವ ಆಕಾಶ್ ಅಂಬಾನಿ ಗೃಹಸ್ಥಾಶ್ರಮಕ್ಕೆ ಪ್ರವೇಶ ಮಾಡಲಿದ್ದಾರೆ. ಆಕಾಶ್ ಅಂಬಾನಿ ಮದುವೆ ಪ್ರಸಿದ್ಧ ವಜ್ರೋದ್ಯಮಿ ರೋಸಿ ಬ್ಲೂ ಡೈಮಂಡ್ಸ್​ನ ಮುಖ್ಯಸ್ಥ ರಸೆಲ್ ಮೆಹ್ತಾ ಮಗಳಾದ ಶ್ಲೋಕಾ ಮೆಹ್ತಾ ಜೊತೆಗೆ ನಡೆಯಲಿದೆ. ಕೆಲವು ತಿಂಗಳ ಹಿಂದೆ ನಿಶ್ಚಿತಾರ್ಥ ಗೋವಾದ ಪಂಚತಾರಾ ಹೋಟೆಲ್​ನಲ್ಲಿ ನಡೆದಿತ್ತು.

ಈಗ ಇವರ ಮದುವೆಯು ಸಮುದ್ರ ಮಟ್ಟದಿಂದ 9000 ಅಡಿ ಎತ್ತರದಲ್ಲಿರುವ ಜಾಗದಲ್ಲಿ ನಡೆಯಲಿದೆ. ಈ ಜಾಗ ಎಲ್ಲಿದೆ ಎಂದು ನೀವು ಯೋಚನೆ ಮಾಡುತ್ತಿದಿದ್ದಾರಾ ಹಾಗಾದರೆ ಮುಂದೆ ಓದಿ.

 

 

ಉತ್ತರಾಖಂಡ ರಾಜ್ಯದ ತ್ರಿಯುಗಿನಾರಾಯಣ ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ತಿಳಿದು ಬಂದಿದೆ. ಸಮುದ್ರ ಮಟ್ಟದಿಂದ 9000 ಅಡಿ ಎತ್ತರದಲ್ಲಿ ಇರುವ ತ್ರಿಯುಗಿನಾರಾಯಣ ದೇವಾಲಯದಲ್ಲಿ ಶಿವ-ಪಾರ್ವತಿಯರ ಮದುವೆ ನಡೆದಿತ್ತು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ತ್ರಿಯುಗಿನಾರಾಯಣ ದೇವಾಲಯದಲ್ಲಿ ಅನೇಕ ದಿಗ್ಗಜರ ಮದುವೆ ಕೂಡ ನಡೆದಿದೆ. ತ್ರಿಯುಗಿ ನಾರಾಯಣ ದೇವಸ್ಥಾನವನ್ನು ಅಲ್ಲಿನ ಸರ್ಕಾರ ಮದುವೆ ತಾಣವಾಗಿ ಘೋಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಆಕಾಶ್ ಅಂಬಾನಿ ಪ್ರಸ್ತುತ ವೇಗವಾಗಿ ಬೆಳೆಯುತ್ತಿರುವ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋದ ಆಡಳಿತ ಮಂಡಳಿಯಲ್ಲಿ ಇದ್ದಾರೆ. ಶ್ಲೋಕಾ ಮೆಹ್ತಾ 2009ರಲ್ಲಿ ಧೀರೂಭಾಯ್ ಅಂಬಾನಿ ಇಂಟರ್​ನ್ಯಾಷನಲ್ ಸ್ಕೂಲ್​ ನಲ್ಲಿ ವಿದ್ಯಾಭ್ಯಾಸ ಪೂರೈಸಿಕೊಂಡು ಪ್ರಿನ್ಸ್​ಟನ್ ಯೂನಿವರ್ಸಿಟಿಗೆ ತೆರಳಿ ಆಂತ್ರಪಾಲಜಿಯಲ್ಲಿ ಪದವಿ ಪಡೆದರು. ಅದಾಗಿ, ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಆಂಡ್ ಪೊಲಿಟಿಕಲ್ ಸೈನ್ಸ್​ನಲ್ಲಿ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 2014ರ ಜುಲೈ ಬಳಿಕ ಅವರು ರೋಸಿ ಬ್ಲೂ ಫೌಂಡೇಷನ್​ನ ನಿರ್ದೇಶಕರಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top