ಮನೋರಂಜನೆ

ಬಾಕ್ಸ್ಆಫೀಸ್’ನಲ್ಲಿ ಬಾಹುಬಲಿಯನ್ನೇ ಹಿಂದಿಕ್ಕಿದ ಸಂಜು.

ಬಾಲಿವುಡ್‌ನ ಈ ಹಿಂದಿನ ತಲೆಮಾರಿನ ನಟರಲ್ಲಿ ವೈವಿಧ್ಯಮಯ ವ್ಯಕ್ತಿತ್ವ ಹೊಂದಿದ್ದ, ಸದಾ ಒಂದಿಲ್ಲೊಂದು ವಿವಾದಗಳಿಗೆ ಸಿಕ್ಕಿಕೊಳ್ಳುತ್ತಿದ್ದ ನಟ ಸಂಜಯ್ ದತ್. ತನ್ನ ಯೌವನದ ಹುಮ್ಮಸ್ಸಿನಲ್ಲಿ ಧಾರಾಳವಾಗಿಯೇ ಅಡ್ಡದಾರಿಯನ್ನೂ ಹಿಡಿದು ಆ ಹುರುಪಿನಲ್ಲಿ ಮಾಡಿಕೊಂಡಿದ್ದ ಯಡವಟ್ಟೊಂದಕ್ಕೆ ವರ್ಷಗಳ ಕಾಲ ಜೈಲು ಹಕ್ಕಿಯಾಗಿಯೂ ಹೊರ ಬಂದಿದ್ದಾನೆ. ಇಂಥಾ ಹಿನ್ನೆಲೆ ಇರುವ ಸಂಜಯ್ ದತ್ ಜೀವನವನ್ನು ಆಧರಿಸಿದ ‘ಸಂಜು’ ಚಿತ್ರದ ಯಶಸ್ಸಿನ ಓಟ ಅಡೆತಡೆಯಿಲ್ಲದೇ ಮುಂದುವರೆಯುತ್ತಿದೆ.

 

 

ಬಿಡುಗಡೆಯಾದ ಮೊದಲ ದಿನವೇ 35 ಕೋಟಿ ಕಲೆಕ್ಷನ್ ಮಾಡಿ ಮೂರ್ ದಿನದಲ್ಲಿ ನೂರು ಕೋಟಿ ಗಡಿ ದಾಟಿದ್ದ ರಣಬೀರ್ ಕಪೂರ್ ಅಭಿನಯದ ಈ ಚಿತ್ರ ಈ ವರ್ಷದ ಎಲ್ಲಾ ಬಾಲಿವುಡ್ ಬಾಕ್ಸ್ ಆಫೀಸ್ ರೆಕಾರ್ಡ್ ಗಳನ್ನೂ ಅಳಿಸಿಹಾಕಿದೆ. ಸದರಿ ಚಿತ್ರ ಗಳಿಕೆಯಲ್ಲಿ 500 ಕೋಟಿಯನ್ನು ದಾಟಿಕೊಂಡಿದ್ದು ಕೇವಲ 14 ದಿನಗಳಿಗೆ 500 ಕೋಟಿ ಕ್ಲಬ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.. ಇಂಥಾ ಸಂಜು ಸಿನಿಮಾ ಇದೀಗ ಬಾಹುಬಲಿ ಚಿತ್ರದ ಗಳಿಕೆಯನ್ನು ಹಿಂದಿಕ್ಕಿದೆ.

ಬಾಹುಬಲಿ-2 ಭಾರತೀಯ ಚಿತ್ರರಂಗದಲ್ಲೇ ಅತೀ ಹೆಚ್ಚು ಆದಾಯ ಗಳಿಸಿದ ಮೂರನೇ ಸಿನಿಮಾ ಎಂಬ ದಾಖಲೆ ಹೊಂದಿತ್ತು. ಆದರೆ ಸಂಜು ಚಿತ್ರ ಹಿಂದಿ ಅವತರಣಿಕೆಯಲ್ಲಿ ಈ ದಾಖಲೆಯನ್ನು ಮುರಿದು ಅತೀ ಹೆಚ್ಚು ಗಳಿಕೆ ಮಾಡಿದ ಮೂರನೇ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೇ ಆಸ್ಟ್ರೇಲಿಯಾದಲ್ಲಿ ಅತಿಹೆಚ್ಚು ಹಣಗಳಿಸಿದ್ದ ಪಟ್ಟಿಯಲ್ಲಿ ಬಾಹುಬಲಿ-೨ ಮೊದಲ ಸ್ಥಾನದಲ್ಲಿಟ್ಟು ಆದರೆ ಸಂಜು ಚಿತ್ರ ಆ ದಾಖಲೆಯನ್ನೂ ಮುರಿದಿದ್ದು ಮೊದಲನೇ ಸ್ಥಾನಕ್ಕೇರಿದೆ.

ಸಂಜಯ್ ದತ್ ಮಾಡಿಕೊಂಡಿರೋ ಯಡವಟ್ಟುಗಳು, ಡ್ರಗ್ಸ್, ಗರ್ಲ್ ಫ್ರೆಂಡ್, ಎಕೆ47 ರೈಫಲ್ಇಟ್ಟುಕೊಂಡಿದ್ದಕ್ಕೆ ವರ್ಷಗಳ ಕಾಲ ಜೈಲು ಹಕ್ಕಿಯಾಗಿ ಹೊರ ಬಂದ ಘಟನೆಗಳನ್ನು ಚಿತ್ರದಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ.. ರಣ್ಬೀರ್ ಕಪೂರ್, ಪರೇಶ್ ರಾವಲ್, ಮೋನಿಶಾ ಕೊಯಿರಾಲ, ಸೋನಂ ಕಪೂರ್, ಅನುಷ್ಕಾ ಶರ್ಮಾ ಸೇರಿದಂತೆ ಹಲವರು ಅಭಿನಯಿಸಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top