ಮನೋರಂಜನೆ

ಸ್ಯಾಂಡಲ್‌ವುಡ್‌ ಇತಿಹಾಸದಲ್ಲೇ ಮತ್ತೊಂದು ಮೈಲಿಗಲ್ಲು ಸೃಷ್ಟಿಸಲಿರುವ ‘ದಿ ವಿಲನ್’.

ಸೆಟ್ಟೇರಿ ಎರಡು ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಕ್ರಿಯೇಟ್ ಮೆಂಟೇನ್ ಮಾಡಿಕೊಂಡು ಬಂದಿರೋ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಮೇಲಿನ ನಿರೀಕ್ಷೆ ದಿನೇ ದಿನೇ ಹೆಚ್ಚಾಗುತ್ತಲೇ ಇದೇ. ಈಗಾಗಲೇ ಬಿಡುಗಡೆಯಾಗಿರೋ ಟೀಸರ್ ಮತ್ತು ಮೂರು ಹಾಡುಗಳ ಅಬ್ಬರವನ್ನು ಕಂಡು ಅನೇಕರು ಬೆಚ್ಚಿಬಿದ್ದಾರೆ.. ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಿದ್ದ ವಿಲನ್ ಚಿತ್ರಕ್ಕಾಗಿ ಪ್ರೇಕ್ಷಕರು ಕಾದು ಕಾದು ಸುಸ್ತೇದ್ದಿದ್ದಾದ್ದು ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿಮಾನಿಗಳ ಕಾತರ ಮತ್ತು ತನ್ನ ವಿರುದ್ಧ ಹರಿದಾಡುತ್ತಿರುವ ಮೂದಲಿಕೆಯ ಮಾತುಗಳನ್ನೆಲ್ಲಾ ಥಂಡಾ ಹೊಡೆಸುವಂತೆ ಪ್ರೇಮ್ ಕೆಲಸ ಮಾಡುತ್ತಿದ್ದಾರೆ..

 

 

ಸದ್ಯ ಬಿಡುಗಡೆಗೊಂಡಿರೋ ಟೀಸರ್ ಮತ್ತು ಹಾಡುಗಳ ಮೂಲಕವೇ ದಾಖಲೆ ಬರೆದಿರುವ ದಿ ವಿಲನ್ ಸಿನಿಮಾ ಕನ್ನಡ ಸಿನಿಮಾ ಇತಿಹಾಸದಲ್ಲಿ ಮತ್ತೊಂದು ಮೈಲಿಗಳನ್ನು ನಿರ್ಮಿಸಲು ಹೊರಟಿದೆ. ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವನ್ನು ದೊಡ್ಡ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದು ಇದೇ ಆಗಸ್ಟ್ 17ರಂದು ದೂರದ ದುಬೈನಲ್ಲಿ ದಿ ವಿಲನ್ ಹಾಡುಗಳು ಲೋಕಾರ್ಪಣೆಗೊಳ್ಳಲಿವೆ. ಈ ಹಿಂದೆ ತಮಿಳಿನ ರಜಿನಿಕಾಂತ್ ಅವರ 2.0 ಚಿತ್ರದ ಆಡಿಯೊ ಬಿಡುಗಡೆಯಾದ ಸ್ಥಳದಲ್ಲಿಯೇ ದಿ ವಿಲನ್ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆಯಂತೆ., ಈ ಮೂಲಕ ಕನ್ನಡ ಸಿನಿಮಾ ಇತಿಹಾಸದಲ್ಲೇ ದೇಶದ ಹೊರಭಾಗದಲ್ಲಿ ಆಡಿಯೋ ರಿಲೀಸ್ ಆದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ‘ದಿ ವಿಲನ್’ ಸಿನಿಮಾ ಪಾತ್ರವಾಗಲಿದೆ.

ದಿ ವಿಲನ್ ಬಗ್ಗೆ ಹೇಳ್ಬೇಕಂದ್ರೆ ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತು ಶಿವಣ್ಣನಿಗೆ ನಾಯಕಿಯಾಗಿ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ನಟಿಸುತ್ತಿದ್ದಾರೆ,,ಚಿತ್ರಕ್ಕೆ ಸಿ.ಮನೋಹರ್ ಬಂಡವಾಳ ಹಾಕಿದ್ದು ಅರ್ಜುನ್ಯ ಜನ್ಯರವರು ಸಂಗೀತ ಸಂಯೋಜನೆ ಮಾಡಿದ್ದಾರೆ…ಉಳಿದಂತೆ ಗಿರಿಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ. ಸೆಪ್ಟೆಂಬರ್ 13ರಂದು ಗೌರಿಗಣೇಶ ಹಬ್ಬದ ಪ್ರಯುಕ್ತ ಚಿತ್ರ ತೆರೆಕಾಣುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top