ಮನೋರಂಜನೆ

‘I Love you’ ಅಂತ ಹೇಳಿದ ಅಭಿಮಾನಿಗೆ ಕಿರಿಕ್ ಹುಡುಗಿ ರಶ್ಮಿಕಾ ಮಾಡಿದ್ದೇನು ಗೊತ್ತಾ?

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಭಾರೀ ಹೆಸರು, ಅವಕಾಶ ಪಡೆದುಕೊಂಡಿರೋ ನಟಿ ರಶ್ಮಿಕಾ ಮಂದಣ್ಣ. ದರ್ಶನ್, ಗಣೇಶ್ ಪುನೀತ್ ರಾಜ್ ಕುಮಾರ್ ಸೇರಿದಂತೆ ಕನ್ನಡದ ಸ್ಟಾರ್ ನಟರ ಜೊತೆ ನಟಿಸೋ ಅವಕಾಶ ಪಡೆದುಕೊಂಡಿರೋ ರಶ್ಮಿಕಾ ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು ಸಿನಿಮಾರಂಗದಲ್ಲೂ ಮಿರಮಿರ ಮಿಂಚುತ್ತಿದ್ದಾಳೆ. ರಶ್ಮಿ ಮಂದಣ್ಣ ಬಾಚಿಕೊಳ್ಳುತ್ತಿರೋ ಅವಕಾಶ ಕಂಡು ಖಾಲಿ ಕೂತಿರುವ ನಟಿಯರೆಲ್ಲಾ ನಟಿಕೆ ಮುರಿಯಲಾರಂಭಿಸಿದ್ದಾರೆ. ಯಾಕೆಂದರೆ ಈ ಹುಡುಗಿಗೆ ಸಾಲು ಸಾಲಾಗಿ ಸ್ಟಾರ್‌ಗಳ ಚಿತ್ರದಲ್ಲೇ ಅವರಕಾಶಗಳ ಸುರಿಮಳೆಯಾಗುತ್ತಿದೆ!

 

 

ಇಂಥಾ ರಶ್ಮಿಕಾ ಮಂದಣ್ಣ ಅಪರೂಪಕ್ಕೆ ಮೊನ್ನೆ ಫೇಸ್ಬುಕ್ ಲೈವ್ ಬಂದಿದ್ದಳು. ಈ ವೇಳೆ ತಮ್ಮ ಹೊಸ ಚಿತ್ರಗಳು, ಮದುವೆ ಹೀಗೆ ಕೆಲ ವಿಚಾರಗಳನ್ನು ತಮ್ಮ ಅಭಿಮಾನಿಗಳ ಜತೆ ಹಂಚಿಕೊಂಡರು. ಹಾಗೆಯೇ ಕಿಕ್ಕಿರಿದು ಲೈವ್ ನೋಡುತ್ತಿದ್ದ ಅವರ ಅಭಿಮಾನಿಗಳು ಸರಣಿಯೋಪಾದಿಯಾಗಿ ನಾನಾ ರೀತಿಯ ಪ್ರಶ್ನೆ ಕೇಳಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬನು ”I Love you, ನೀವು ಅಂದ್ರೆ ನನಗೆ ಸಕತ್ ಇಷ್ಟ’ ಎಂದು ಕಾಮೆಂಟ್ ಮಾಡಿದ್ದ. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ರಶ್ಮಿಕಾ ‘I Love you too’ ಎಂದು ಹೇಳಿದರು..

ಸದ್ಯ ರಶ್ಮಿಕಾ ಕನ್ನಡದ ಯಜಮಾನ ಮತ್ತು ವೃತ್ರ ಎಂಬ ಕನ್ನಡ ಸಿನಿಮಾಗಳ ಮತ್ತು ತೆಲುಗಿನ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ .ಅವರ ನಟನೆಯ ಎರಡನೇ ತೆಲುಗು ಸಿನಿಮಾ ಗೀತಾ ಗೋವಿಂದಂ ಇದೇ ತಿಂಗಳು 15ರಂದು ಬಿಡುಗಡೆಯಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top