ಆರೋಗ್ಯ

ಅಯ್ಯೋ ಆಗಲ್ಲ ಗುರು ತುಂಬಾ ಸೊಂಟ ನೋವು ಯಾವ ಕೆಲಸನ್ನು ಮಾಡಕ್ಕೆ ಆಗ್ತಿಲ್ಲ ಅನ್ನೋರು ತಪ್ಪದೆ ಈ ಮನೆಮದ್ದನ್ನು ಬಳಸಿ ಪಟ್ ಪಟ್ ಅಂತ ಪರಿಹಾರ ಕಂಡ್ಕೊಳ್ಳಿ

 

 

ಶಲಭಾಸನವು ಇಡೀ ಬೆನ್ನು ಮೂಳೆಗೆ ಶಕ್ತಿಯನ್ನು ಮತ್ತು ನಮ್ಯತೆಯನ್ನು ನೀಡುವ ಆಸನವಾಗಿದೆ. ಬೆನ್ನಿಗೆ ಸಂಬಂಧಪಟ್ಟ ನೋವುಗಳಿಂದ ಬಳಲುತ್ತಿರುವವರಿಗೆ ಈ ಆಸನವು ಬಹು ಉಪಯೋಗಕಾರಿ.

ಇದು ಬೆನ್ನಿಗೆ ಬಲವನ್ನು ನೀಡುತ್ತದೆ ಮತ್ತು ಕೆಳ ಬೆನ್ನಿಗೆ ಉತ್ತಮ ನಮ್ಯತೆಯನ್ನು ಒದಗಿಸುತ್ತದೆ.
ಇದು ಕೆಳ ಬೆನ್ನು ಭಾಗದ ಸ್ನಾಯುಗಳಿಗೆ ಉತ್ತಮ ಬಲವನ್ನು ನೀಡುತ್ತದೆ. ಹಾಗಾಗಿ ತುಂಬಾ ಹೊತ್ತು ಕುಳಿತು ಕೆಲಸ ಮಾಡುವವರಿಗೆ (ಐಟಿ
ಉದ್ಯೋಗಿಗಳು, ಬ್ಯಾಂಕ್ ಉದ್ಯೋಗಿಗಳು ಇತ್ಯಾದಿ ಜನಗಳಿಗೆ) ಈ ಆಸನವು ಉತ್ತಮವಾಗಿ ಸಹಾಯ ಮಾಡುತ್ತದೆ.
ಇದು ಹೊಟ್ಟೆಯ, ಸೊಂಟ, ತೊಡೆ ಮತ್ತು ಪೃಷ್ಠದ ಭಾಗದಲ್ಲಿನ ಕೊಬ್ಬನ್ನು ಕರಗಿಸುತ್ತದೆ.

ನಿಂಬೆ ರಸ ಮತ್ತು ಉಪ್ಪು.

ಅರ್ಧ ಚಮಚ ನಿಂಬೆ ರಸಕ್ಕೆ ಚಿಟಿಕೆ ಉಪ್ಪು ಸೇರಿಸಿ ಸೇವಿಸುತ್ತಾ ಬನ್ನಿ ಇದು ನಿಮ್ಮ ಸೊಂಟ ನೋವನ್ನು ಕೆಲವು ದಿನಗಳ ಒಳಗೆ ಮಾಯ ಮಾಡುತ್ತದೆ .

ಬೆಳ್ಳುಳ್ಳಿ:

ಬೆನ್ನು ನೋವಿಗೆ ಬೆಳ್ಳುಳ್ಳಿ ಉತ್ತಮ ಮನೆ ಔಷಧಿ. ಎರಡು ಅಥವಾ ಮೂರು ಕಾಳು ಲವಂಗವನ್ನು ಬೆಳಗ್ಗೆ ಸೇವಿಸಿದರೆ ಉತ್ತಮ. ಬೆಳ್ಳುಳ್ಳಿ ಎಣ್ಣೆಯನ್ನು ಬೆನ್ನು ನೋವಿರುವಲ್ಲಿಗೆ ಹಚ್ಚಿ ಮಸಾಜ್ ಮಾಡಿದರೆ ನೋವು ಬೇಗನೆ ಶಮನವಾಗುವುದು.

ಹರಳೆಣ್ಣೆ:

ನಾಲ್ಕು ಚಮಚ ಹರಳೆಣ್ಣೆಯನ್ನು ತಗೆದುಕೊಂಡು ಚೆನ್ನಾಗಿ ಕುಡಿಸಿ ಆ ಎಣ್ಣೆಗೆ ನಾಲ್ಕೈದು ಬೆಳ್ಳುಳ್ಳಿ ಎಸಳನ್ನು ಸೇರಿಸಿ , ಚೆನ್ನಾಗಿ ಉರಿದು ನಂತ್ರ ಆ ಎಣ್ಣೆಯನ್ನು
ನೋವಿರುವ ಜಾಗಕ್ಕೆ ಹಚ್ಚಿಕೊಳ್ಳಿ ಹೀಗೆ ಮಾಡಿದರೆ ಸ್ವಲ್ಪ ದಿನದಲ್ಲೇ ನೋವು ದೂರವಾಗುತ್ತದೆ .

ಸೈನ್ಧವ ಲವಣ:

ಸೈನ್ಧವ ಲವಣವನ್ನು ಪ್ರತಿ ದಿನ ಸ್ಥಾನದ ನೀರಿನಲ್ಲಿ ಬೆರೆಸಿ ಸ್ನಾನ ಮಾಡಿ.

ಶುಂಠಿ.

ದಿನವೂ ಕನಿಷ್ಠ ಪಕ್ಷ ಒಂದುಬಾರಿಯಾದರು ಒಂದು ಲೋಟ ಬಿಸಿ ನೀರಿನಲ್ಲಿ ಸಣ್ಣ ತುಂಡು ಶುಂಠಿಯನ್ನು ಸೇರಿಸಿ ಶುಂಠಿ ಟೀಯನ್ನು ಮಾಡಿಕೊಂಡು ಕುಡಿಯಬೇಕು ಬೇಕಾದರೆ ಸ್ವಲ್ಪ ಜೇನು ತುಪ್ಪವನ್ನು ಬೆರಸಿ ಕುಡಿಯಬಹುದು , ಶುಂಠಿಯಲ್ಲಿ ನೋವು ನಿವಾರಕ ಗುಣಗಳು ಅಧಿಕವಾಗಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top