ಭವಿಷ್ಯ

09 ಆಗಸ್ಟ್ : ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಗುರುವಾರ, ೦೯ ಆಗಸ್ಟ್ ೨೦೧೮
ಸೂರ್ಯೋದಯ : ೦೬:೧೮
ಸೂರ್ಯಾಸ್ತ : ೧೯:೦೮
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಆಷಾಢ

ಪಕ್ಷ : ಕೃಷ್ಣ ಪಕ್ಷ
ತಿಥಿ : ತ್ರಯೋದಶೀ – ೨೨:೪೫ ವರೆಗೆ
ನಕ್ಷತ್ರ : ಆರಿದ್ರ – ೦೮:೨೫ ವರೆಗೆ
ಯೋಗ : ವಜ್ರ – ೧೯:೫೫ ವರೆಗೆ
ಸೂರ್ಯ ರಾಶಿ : ಕರ್ಕ

ಅಭಿಜಿತ್ ಮುಹುರ್ತ : ೧೨:೧೮ – ೧೩:೦೯
ಅಮೃತಕಾಲ : ೨೭:೩೬+ – ೨೯:೦೨+
ರಾಹು ಕಾಲ:೧೪:೨೦ – ೧೫:೫೬
ಗುಳಿಕ ಕಾಲ: ೦೯:೩೧ – ೧೧:೦೭
ಯಮಗಂಡ:೦೬:೧೮ – ೦೭:೫೫

ಆತ್ಮಸಾಕ್ಷಿಯನ್ನು ಕಾಪಾಡಿಕೊಳ್ಳಿ. ಅಶಿಸ್ತನ್ನು ಎಂದೂ ಸಹಿಸದ ನೀವು ನಿಮ್ಮ ಪ್ರಾಮಾಣಿಕತೆಗೆ ಪ್ರಶಂಸೆ ಗಳಿಸುವಿರಿ. ಬಂಧು ಬಾಂಧವರೊಡನೆ ಉತ್ತಮ ಸ್ನೇಹವನ್ನು ವೃದ್ಧಿಸಿಕೊಳ್ಳುವಿರಿ. ಬರಬೇಕಾಗಿದ್ದ ಹಣಕಾಸು ನಿಮ್ಮ ಕೈಸೇರುವ ಸಾಧ್ಯತೆ ಇದೆ.

ಇದ್ದಕ್ಕಿದ್ದಂತೆ ಆಪ್ತ ವಲಯವೇ ನಿಮ್ಮ ವಿರುದ್ಧ ತಿರುಗಿ ಬೀಳವ ಸಾಧ್ಯತೆ ಇದೆ. ಆದರೆ ಅವರನ್ನು ಎದುರಿಸುವ ಕಲೆಗಾರಿಕೆ ನಿಮ್ಮಲ್ಲಿರುವುದರಿಂದ ಹೆದರುವ ಅವಶ್ಯಕತೆ ಇಲ್ಲ. ಈ ಬಗ್ಗೆ ಹಿರಿಯರೊಬ್ಬರ ಸಲಹೆ ನಿಮಗೆ ಸಹಕಾರಿಯಾಗುವುದು.

 

ಆತುರಗಾರನಿಗೆ ಬುದ್ಧಿಮಟ್ಟ ಎಂಬ ಗಾದೆ ಮಾತು ನಿಮಗೆ ಅರಿವಾಗುವುದು. ಆತುರದಿಂದ ಮಾಡಿದ ವಾದ ನಿಮಗೆ ಮುಖಭಂಗವನ್ನುಂಟು ಮಾಡುವುದು. ಹಾಗಾಗಿ ತಾಳ್ಮೆಯಿಂದ ಎದುರಾಳಿಯ ಮಾತನ್ನು ಆಲಿಸಿ ವಾದ ಮಾಡಿದಲ್ಲಿ ಜಯ ನಿಮ್ಮದಾಗುವುದು.

ಶತಾಯ ಗತಾಯ ಹಿಡಿದ ಕೆಲಸ ಪೂರೈಸಬೇಕೆಂಬ ತುಡಿತಕ್ಕೆ ಭಗವಂತ ಸಹಾಯ ಮಾಡುವನು. ಇದರ ಸಾಫಲ್ಯಗಾಗಿ ಹೊಸದಾದ ದಾರಿಗಳು ಗೋಚರಿಸುವವು. ಆದರೆ ಇದಕ್ಕೂ ಮುನ್ನ ಸಂಗಾತಿಯ ಒಪ್ಪಿಗೆ ಪಡೆಯಿರಿ.

 

ಅಪಮಾನ ಮಾಡುವ ಜನರನ್ನು ಅಸಮಾಧಾನ ತೋರದೆ ಉಪೇಕ್ಷಿಸಿ. ಧೈರ್ಯಂ ಸರ್ವತ್ರ ಸಾಧನಂ. ಅಪಮಾನವಾದರೆ ಒಳ್ಳೆಯದು ಎಂದು ದಾಸರು ಹಾಡಿದ್ದಾರೆ. ಇದರಿಂದ ನಿಮಗೆ ಸತ್ಯದ ದಾರಿ ತಿಳಿಯುವುದು.

 

ನಿಮ್ಮಿಂದ ನಿಮ್ಮ ಕುಟುಂಬದ ಜನರು ನಾಲ್ಕು ಒಳ್ಳೆಯ ಮಾತುಗಳನ್ನು ನಿರೀಕ್ಷಿಸಿರುತ್ತಾರೆ. ಆದರೆ ಎಲ್ಲಾ ವಿಷಯದಲ್ಲೂ ತಪ್ಪನ್ನು ಹುಡುಕುವ ನಿಮ್ಮ ಸ್ವಭಾವದಿಂದಾಗಿ ನಿಮ್ಮ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುವಿರಿ. ಹಾಗಾಗದಂತೆ ಎಚ್ಚರ ವಹಿಸಿ.

 

 

ಸಮಯ ಬಂದಾಗ ಹುಲ್ಲುಕಡ್ಡಿ ಸಹಾಯವೂ ಬೇಕಾಗುತ್ತದೆ. ಹಾಗಾಗಿ ಯಾರನ್ನು ತಿರಸ್ಕರಿಸಬೇಡಿ ಮತ್ತು ಯಾರ ಬಗ್ಗೆಯೂ ಅಪಪ್ರಚಾರ ಮಾಡದಿರಿ. ಕೆಲವೊಮ್ಮೆ ನೀವು ಶತ್ರು ಎಂದು ತಿಳಿದ ವ್ಯಕ್ತಿಯಿಂದಲೇ ನಿಮಗೆ ಸಹಾಯ ದೊರೆಯುವುದು.

 

 

ಬಹಳ ದಿನಗಳಿಂದ ದೊಡ್ಡ ಸ್ವರೂಪದಲ್ಲಿ ತಲೆ ತಿನ್ನುತ್ತಿದ್ದ ವಿಚಾರವೊಂದು ಮಂಜುಗಡ್ಡೆಯಂತೆ ಕರಗಿ ಹೋಗಲಿದೆ. ಇದರಿಂದ ಮಾನಸಿಕ ಸದೃಢತೆ ಉಂಟಾಗುವುದು. ಕೆಲವರಿಗೆ ವೃತ್ತಿಯಲ್ಲಿ ಬಡ್ತಿ ದೊರೆಯುವುದು.

 

ತಪ್ಪು ಮಾಹಿತಿ ನೀಡುವವರ ಬಗ್ಗೆ ಎಚ್ಚರವಿರಲಿ. ತುಸುವಾದರೂ ಬಿಗಿ ಮನೋಭಾವ ತೋರುವುದು ಒಳ್ಳೆಯದು. ತೀರ ಒಳ್ಳೆಯತನ ಒಳ್ಳೆಯದಲ್ಲ. ಸ್ನೇಹಿತರು ನಿಮಗೆ ಸಹಾಯ ಹಸ್ತ ನೀಡುವರು.

ಕುಟುಂಬ ಬಗೆಗಿನ ಜವಾಬ್ದಾರಿಗಳನ್ನು ನಿರ್ವಹಿಸಲು ಮರೆಯದಿರಿ. ಮನೆ ಗೆದ್ದು ಮಾರು ಗೆಲ್ಲು ಎಂದರು ಹಿರಿಯರು. ಹಾಗಾಗಿ ಮನೆತನ ಆಗುಹೋಗುಗಳ ಕಡೆ ಗಮನ ಕೊಟ್ಟಲ್ಲಿ ಹೆಚ್ಚಿನ ಲಾಭವಾಗುವುದು.

 

ಅತಿಯಾದ ಲಾಭಾಂಶದ ಆಸೆಗೆ ಬಿದ್ದು ನಿಮ್ಮ ಶಕ್ತಿಗೆ ಮೀರಿ ಕೆಲಸ ಕಾರ್ಯಗಳನ್ನು ಪೂರೈಸಿಕೊಡುತ್ತೇನೆ ಎಂದು ಭಾವಿಸಿ ಏಕಕಾಲಕ್ಕೆ ಕೆಲಸಗಳನ್ನು ಕೈಗೆತ್ತಿಕೊಳ್ಳದಿರಿ. ಇದರಿಂದ ಮಾನಸಿಕ ಕ್ಷೋಭೆ ಮತ್ತು ಹಣಕಾಸಿನ ತೊಂದರೆ ಎದುರಿಸಬೇಕಾಗುವುದು.

 

ತುಂಬಾ ಭಾವನಾತ್ಮಕವಾಗಿ ಬಂಧುಗಳೊಡನೆ ಸ್ಪಂದಿಸುವಿರಿ. ಆದರೆ ಹೊರ ಜಗತ್ತಿನಲ್ಲಿ ಅತಿಯಾದ ಭಾವನಾತ್ಮಕತೆ ತೊಂದರೆಯನ್ನುಂಟು ಮಾಡುವುದು. ಹಿರಿಯರ ಸಲಹೆಯಂತೆ ನಡೆದಲ್ಲಿ ನಿಮಗೆ ಅನ್ಯಾಯವಾಗುವುದು ತಪ್ಪುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top