ಸಿನಿಮಾ

ಕುರುಕ್ಷೇತ್ರ ಆಡಿಯೋ ರಿಲೀಸ್ ಸಮಾರಂಭಕ್ಕೆ ಹೋಗ್ತಾರಾ ಕಿಚ್ಚ ಸುದೀಪ್

ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರಂತೆಯೇ ಕುಚಿಕ್ಕೂ ಗಳೆಯರಾಗಿ ಪ್ರಸಿದ್ಧರಾಗಿದ್ದವರು ದರ್ಶನ್ ಮತ್ತು ಸುದೀಪ್. ಆದರೆ ಅದೇನು ಸಂಭವಿಸಿತೋ… ಕಳೆದ ವರ್ಷಗಳಿಂದೀಚೆಗೆ ಇವರಿಬ್ಬರ ನಡುವೆ ಮುನಿಸೊಂದು ಹಬ್ಬಿಕೊಂಡಿತ್ತು. ಆದರೆ ಇವರಿಬ್ಬರ ಅಭಿಮಾನಿಗಳು ಸಹ ಮತ್ತೆ ತಮ್ಮ ಇಷ್ಟದ ನಟರು ಒಂದಾಗೋ ಕಾಲಕ್ಕಾಗಿ ತುದಿಗಾಲಲ್ಲಿ ಕಾದು ಕೂತಿದ್ದಾರೆ.. ಇದೀಗ ಈ ಇಬ್ಬರ ಮುನಿಸಿನ ಮಬ್ಬು ಕರಗೋ ಕಾಲ ಹತ್ತಿರದಲ್ಲಿದೆಯಾ? ಅಂತೊಂದು ಪ್ರಶ್ನೆ ದರ್ಶನ್ ಹಾಗೂ ಸುದೀಪ್ ಅಭಿಮಾನಿ ವಲಯದಲ್ಲಿ ಮೂಡಿಕೊಂಡಿದೆ!

ಬಹುನಿರೀಕ್ಷಿತ ಸಿನಿಮಾ ಕುರುಕ್ಷೇತ್ರದಲ್ಲಿ ದರ್ಶನ್ ಹಾಗೂ ನಿಕಿಲ್ ನಡುವೆ ನಡೆಯುತ್ತಿರುವ ಕೆಲ ಮನಸ್ತಾಪ ಹೇಗೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಚರ್ಚೆ ಆಗುತ್ತಿದೆಯೋ, ಅದಕ್ಕಿಂತ ಹೆಚ್ಚಾಗಿ ಕುರುಕ್ಷೇತ್ರದ ಹಾಡುಗಳ ಹಬ್ಬಕ್ಕೆ ದರ್ಶನ್‌ ಅವರ ಒಂದು ಕಾಲದ ಆಪ್ತ ಗೆಳೆಯ ಸುದೀಪ ಬರುತ್ತಾರಾ, ಬರಲ್ವಾ ಎನ್ನುವ ವಿಷಯ ಚರ್ಚೆಯಾಗ್ತಿದೆ. ಇದಕ್ಕೆ ಕಾರಣ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ.

 

 

ಅಂಬಿ ನಿಂಗ್ ವಯಸ್ಸಾಯ್ತೋ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ಸ್ಟಾರ್ ಗಳು ಆಗಮಿಸುತ್ತಿದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ ಕೂಡ ಆಗಮಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ದರ್ಶನ ಹಾಗು ಸುದೀಪ್ ಅಭಿಮಾನಿಗಳಲ್ಲಿ ಕೂಡ ಇವರಿಬ್ಬರು ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಒಂದಾಗಲಿ ಎಂಬ ಬಯಕೆ ಇದೆ.

ಇನ್ನು ಕುರುಕ್ಷೇತ್ರ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರನ್ನು ಆಹ್ವಾನಿಸಲು ಮುನಿರತ್ನ ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸಹಜವಾಗಿಯೇ ಕಿಚ್ಚ ಅವರಿಗೂ ಕೂಡ ಆಹ್ವಾನ ನೀಡುತ್ತಾರೆ. ಹಾಗಾಗಿ ಸುದೀಪ್ ಅವರು ಕುರುಕ್ಷೇತ್ರ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಎಲ್ಲರಲ್ಲೂ ಮನೆಮಾಡಿದೆ. ಆಗಸ್ಟ್ 27ಕ್ಕೆ, ವರಮಹಾಲಕ್ಷ್ಮೀ ಹಬ್ಬಕ್ಕೆ ಅದ್ಧೂರಿಯಾಗಿ ಆಡಿಯೋ ಬಿಡುಗಡೆಯಾಗಲಿವೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top