ಮನೋರಂಜನೆ

ಸಾಮಾಜಿಕ ಮಾದ್ಯಮದಲ್ಲಿ ಹೊಸ ಚಾಲೆಂಜ್ ಹುಟ್ಟುಹಾಕಿದ ಪುನೀತ್- ಏನಿದು ಹೊಸ ಚಾಲೆಂಜ್.

ಸಾಮಾಜಿಕ ಜಾಲತಾಣಗಲ್ಲಿ ಸಲೆಬ್ರೆಟಿಗಳ ದೆಸೆಯಿಂದ ಜನ್ಮ ಪಡೆದುಕೊಳ್ಳುವ ವೆರೈಟಿ ಚಾಲೆಂಜುಗಳ ಹಂಗಾಮ ಯಾವುದೇ ಅಡೆ ತಡೆಗಳಿಲ್ಲದೆ ಭರ್ಜರಿಯಾಗಿ ಮುಂದುವರೆದಿದೆ. ಸಿನಿಮಾ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಒಬ್ಬರಿಗೊಬ್ಬರು ಸವಾಲು ಹಾಕಿಕೊಂಡು ಅದರ ಮೂಲಕ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಹವ್ಯಾಸ.

 

 

ಈ ಹಿಂದೆ ಸ್ಯಾನಿಟರಿ ಪ್ಯಾಡ್‌‌‌‌‌‌‌‌‌‌‌‌‌‌ಗಳನ್ನು ಕೈಯಲ್ಲಿ ಹಿಡಿದು ಆ ಫೊಟೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್‌‌ಲೋಡ್ ಮಾಡಿದ್ದ ಮತ್ತು ಇತ್ತೀಚಿಗೆ ಹಮ್ ಫಿಟ್ ತೋ ಇಂಡಿಯಾ ಫಿಟ್ ಎಂಬ ಫಿಟ್ನೆಸ್ ಚಾಲೆಂಜ್ ವೈರಲ್ ಆಗಿದ್ದು ಗೊತ್ತೇ ಇದೆ. ಅಷ್ಟೇ ಅಲ್ಲದೆ ಇತ್ತೀಚಿಗೆ ಕಿರಿಕಿರಿ ಉಂಟುಮಾಡಿದ್ದ ಕಿಕಿ ಡಾನ್ಸ್ ಚಾಲೆಂಜ್ ವೈರಲ್ ಆಗಿತ್ತು. ಇದೀಗ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಾವೂ ಕೂಡ ಹೊಸ ಚಾಲೆಂಜನ್ನ ಕಂಡುಹಿಡಿದಿದ್ದಾರೆ.

ಅಪರಿಚಿತರನ್ನೂ ಪರಿಚಿತರನ್ನಾಗಿ ಮಾಡಿಕೊಳ್ಳಲು ಪುನೀತ್ ರಾಜ್‌ಕುಮಾರ್ ಹೊರಟಿದ್ದು ಇದಕ್ಕೆ ಹ್ಯಾಂಡ್ ಶೇಕ್ ಚಾಲೆಂಜ್ ಎಂದು ಹೆಸರಿಟ್ಟಿದ್ದಾರೆ. ‘ಕಾನ್ಫಿಡೆನ್ಸ್’ ಎಂದರೆ ಹ್ಯಾಂಡ್‌ಶೇಕ್, ನೀವು ಕಾನ್ಫಿಡೆನ್ಸನಿಂದ ಕೈಕುಲುಕಿದ ಫೋಟೋ ಪೋಸ್ಟ್ ಮಾಡಿ’ ಎಂದು ಪುನೀತ್ ಅವ್ರು ನಿರ್ದೇಶಕ ಸಂತೋಷ್ ಆನಂದ್ ರಾಮ್, ನಟ ರಕ್ಷಿತ್ ಶೆಟ್ಟಿ ಮತ್ತು ನಿರೂಪಕ ಡ್ಯಾನಿಶ್ ಸೇಠ್ ಅವರಿಗೆ ಚಾಲೆಂಜ್ ಸ್ವೀಕರಿಸುವಂತೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕೋರಿಕೊಂಡಿದ್ದಾರೆ.

ಇನ್ನು ಈ ಸವಾಲನ್ನು ಯಾರು ಬೇಕಾದರೂ ಸ್ವೀಕರಿಸಿಬಹುದು. ನಿಮಗೆ ಪರಿಚಯವಿಲ್ಲದವರ ಜತೆ ಹ್ಯಾಂಡ್ ಶೇಕ್ ಮಾಡುತ್ತಿಯುವ ಫೋಟೋವೊಂದನ್ನ ಅಪ್ಲೋಡ್ ಮಾಡಿ #handshakechallange ಎಂದು ಬರೆದು ಪೋಸ್ಟ್ ಮಾಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top