ಸಿನಿಮಾ

6 ಪ್ಯಾಕ್ ಮೇನಿಯಾ , 6 ಪ್ಯಾಕ್ ಗಾಗಿ ಜಿಮ್ನಲ್ಲಿ ಬೆವರಿಳಿಸುತ್ತಿರುವ ನಟಿ ,ಹಳೆಯ ಬಿಗ್ ಬಾಸ್ ಸ್ಪರ್ಧಿ,ಯಾರ್ ಆ ಸ್ಪರ್ಧಿ ನೀವೇ ನೋಡಿ

ಸೈಕೋ ಚಿತ್ರದ ನಾಯಕಿಯಾಗಿ ಈ ಹುಡುಗಿ ಎಂಟ್ರಿ ಕೊಟ್ಟಾಗ ಈಕೆ ಚಿತ್ರರಂಗದಲ್ಲಿ ನೆಲೆ ನಿಲ್ಲುತ್ತಾರೆಂಬ ಮಾತುಗಳೇ ವ್ಯಾಪಕವಾಗಿ ಕೇಳಿ ಬಂದಿದ್ದವು. ಆದರೆ ಅದೇಕೋ ಆ ಬಳಿಕ ತನ್ನ ಬಗ್ಗೆ ಹುಟ್ಟಿಕೊಂಡಿದ್ದ ನಿರೀಕ್ಷೆಯ ಮಟ್ಟಕ್ಕೆ ಮುಟ್ಟಲಾಗದಂತೆ ಕಾಣಿಸಿಕೊಂಡಿದ್ದ ಅನಿತಾ ಭಟ್ ಮತ್ತೆ ಭರ್ಜರಿಯಾಗಿಯೇ ಫಾರ್ಮಿಗೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.

`ಸೈಕೋ ‘ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಅಂಗಳಕ್ಕೆ ಕಾಲಿಟ್ಟ ನಟಿ ನಗು ಮೊಗದ ಚೆಲುವೆ ಅನಿತಾ ಭಟ್ ಅವರು ಅನೇಕ ಚಿತ್ರಗಳಲ್ಲಿ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ನಟಿ ಅನಿತಾ ಜಿಮ್ ನಲ್ಲಿ ವರ್ಕೌಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

A post shared by Anita Bhat (@iamanitabhat) on

 

ಕನ್ನಡ ಸಿನಿಮಾ ರಂಗದಲ್ಲಿ ಸಿಕ್ಸ್ ಪ್ಯಾಕ್ ಹೊಂದಿರುವ ನಟಿಯರು ಬಹಳ ಕಡಿಮೆ ಎಂದೇ ಹೇಳಬಹುದು. ಕೆಲವರು ಕ್ರೇಜ್​​ಗಾಗಿ ಸಿಕ್ಸ್ ಪ್ಯಾಕ್ ಗಳಿಸಿಕೊಂಡರೆ ಮತ್ತೆ ಕೆಲವರು ಅಭಿನಯಕ್ಕೆ ಅಗತ್ಯ ಎಂದು ಸಿಕ್ಸ್ ಪ್ಯಾಕ್​​​​​​​ಗಾಗಿ ವರ್ಕೌಟ್ ಮಾಡುತ್ತಾರೆ. ಟಗರು ಸಿನಿಮಾದಲ್ಲಿ ನೆಗೆಟಿವ್ ರೋಲ್​​ನಲ್ಲಿ ಹಾಗೂ ಡೇಸ್​ ಆಫ್​ ಬೋರಾಪುರ ಸಿನಿಮಾದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ಅನಿತಾ ಭಟ್ ಈಗ ವೈಶಾಕಿನಿ ಹಾಗೂ ಅಭಿರಾಮಿ ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿದ್ದಾರೆ.

ಸಿನಿಮಾ ಮಾತ್ರವಲ್ಲದೆ ಈ ಹಿಂದೆ ಬಿಗ್​ ಬಾಸ್ ಸೀಸನ್ -2 ನಲ್ಲಿ ಕೂಡ ಅನಿತಾ ಸ್ಪರ್ಧಿಯಾಗಿ ಭಾಗವಹಿಸಿದ್ದರು. ತಮ್ಮ ಮುಂದಿನ ಸಿನಿಮಾಗಾಗಿ ಅವರು ಕಳೆದ 4 ತಿಂಗಳಿಂದ ಜಿಮ್​ನಲ್ಲಿ ಬೆವರಿಳಿಸುತ್ತಿದ್ದಾರೆ. ಅನಿತಾಗೆ ಜಿಮ್​ ಟ್ರೈನರ್ ವರ್ಕೌಟ್ ಟ್ರೈನಿಂಗ್ ನೀಡುತ್ತಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಅನಿತಾಗೆ ಈಗ ತುಳು ಸಿನಿಮಾ ಆಫರ್ ಕೂಡ ಲಭಿಸಿದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top