ಸಿನಿಮಾ

ವೈರಲ್ ಆಯಿತು ಈ ವಿಡಿಯೋ ”ಅಯೋಗ್ಯ ಸಾಂಗ್” ನಲ್ಲಿ ಯಶ್ -ರಾಧಿಕಾ ಮಿಂಚಿದು ಹೀಗೆ,ನೀವು ನೋಡಿ ಈ ವಿಡಿಯೋ

ನಿನಾಸಂ ಸತೀಶ್ ಮತ್ತು ರಚಿತಾ ರಾಮ್ ನಟಿಸಿರುವ ‘ಅಯೋಗ್ಯ’ ಚಿತ್ರ ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದ್ದು. ಸಿನಿಮಾದ ಹಾಡುಗಳು ಸಖತ್ ಸೌಂಡ್ ಮಾಡ್ತಿದೆ. ಯೂಟ್ಯೂಬ್ ನಲ್ಲಿ ಕೂಡ ಟ್ರೆಂಡ್ ಮಾಡಿವೆ ಎಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿರುವ ಏನಮ್ಮಿ ಏನಮ್ಮಿ ಹಾಡು ಸಿಕ್ಕಾಪಟ್ಟೆ ವೈರಲ್​ ಆಗಿದ್ದು. ಈ ಹಾಡಿಗೆ ಅಭಿಮಾನಿಯೊಬ್ಬರು ರಾಧಿಕಾ ಹಾಗು ಯಶ್ ಮದುವೆ ವಿಡಿಯೋ ತುಣುಕು ಸೇರಿಸಿದ್ದು ಸೊಗಸಾಗಿ ಮೂಡಿಬಂದಿದೆ.

ಈ ವಿಡಿಯೋದಲ್ಲಿ ರಾಧಿಕಾ ಮುದ್ದಾಗಿ ಕಾಣುತ್ತಿದ್ದು ವಿಡಿಯೋ ನೋಡಿದ ಎಲ್ಲರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ನೀವು ಈ ವಿಡಿಯೋ ಇನ್ನು ನೋಡಿಲ್ಲ ಅಂದ್ರೆ ಇನ್ಯಾಕೆ ತಡ ಈಗಲೇ ನೋಡಿ ಆನಂದಿಸಿ.

 

ಈ ವಿಡಿಯೋ ನೋಡಿ:

#nimmayash #yash_ricky @iamradhikapandit @dimple___ranju____

A post shared by чαѕh❤️rαdíkα (@yash______official) on


 

ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು. ಇನ್ನು ಹಾಡಿನ ಬಗ್ಗೆ ಹೇಳುವುದಾದರೆ ಭರ್ಜರಿ ಚೇತನ್ ಕುಮಾರ್ ರಚಿಸಿದ್ದಾರೆ. ವಿಜಯ ಪ್ರಕಾಶ್ ಮತ್ತು ಪಾಲಕ್ ಮುಚ್ಚಾಲ್ ಅವರು ಹಾಡಿದ್ದಾರೆ. ಹಾಡಿನಲ್ಲಿ ನೀನಾಸಂ ಸತೀಶ್ ಹಾಗು ರಚಿತಾ ರಾಮ್ ಅವರು ಸಖತ್ತಾಗಿಯೇ ಡ್ಯಾನ್ಸ್ ಮಾಡಿರುವುದು ವಿಶೇಷವಾಗಿದೆ. “ಏನಮ್ಮಿ, ಏನಮ್ಮಿ’ ಹಾಡು ಡಬ್‌ಸ್ಮ್ಯಾಷ್‌ನಲ್ಲಿ ದಾಖಲೆ ಬರೆದಿದೆ. ಇದುವರೆಗೆ 16000 ಕ್ಕೂ ಅಧಿಕ ಡಬ್‌ಸ್ಮ್ಯಾಷ್‌ ಆಗಿದ್ದು ವಿಶೇಷ. ಆನಂದ್‌ ಆಡಿಯೋ ಸಂಸ್ಥೆ ಪ್ರಕಾರ, ಕನ್ನಡದಲ್ಲಿ ಈ ಹಾಡಿಗೆ ಆದಂತಹ ಡಬ್‌ಸ್ಮ್ಯಾಷ್‌ ಬೇರೆ ಯಾವ ಹಾಡಿಗೂ ಆಗಿಲ್ಲ. ಅದೂ ಕಡಿಮೆ ಅವಧಿಯಲ್ಲಿ. ”

ಇನ್ನು ಸತೀಶ್ ನೀನಾಸಂ ಅಭಿನಯದ ‘ಅಯೋಗ್ಯ’ ಚಿತ್ರದ ಡಬ್ಬಿಂಗ್ ರೈಟ್ಸ್ ಭಾರಿ ಮೊತ್ತಕ್ಕೆ ಮಾರಾಟ ಆಗಿದೆ. ಹೌದು ಬಾಲಿವುಡ್ ಅಂಗಳಕ್ಕೆ ಕೂಡ ಅಯೋಗ್ಯ’ ಕಾಲಿಡುತ್ತಿದ್ದಾನೆ. ಪ್ರೇಮ್ ವ್ಯಾಸ್ ಎನ್ನುವವರು ಹಿಂದಿ ಡಬ್ಬಿಂಗ್ ರೈಟ್ಸ್ ಅನ್ನು 81 ಲಕ್ಷಕ್ಕೆ ಖರೀದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top