ಸಿನಿಮಾ

ಶುರು ಆಯಿತು ನೆನಪಿರಲಿ ಪ್ರೇಮ್ ಮಗನ ಸಿನಿ ಪಯಣ ,ಅಪ್ಪನ ಕುರಿತು ಮಗ ಹೇಳಿದಾದ್ರು ಏನು ,ನೋಡಿ ನೀವೇ.

ನೆನಪಿರಲಿ ಪ್ರೇಮ್ ಮಗ ಮಾಸ್ಟರ್ ಏಕಾಂತ್ ರವರ ಸಿನಿ ಪಯಣ ಶುರು ಆಗಿದೆ. ಪ್ರೇಮ್ ಮಗನ ‘ರಾಮರಾಜ್ಯ’ ಸಿನಿಮಾ. ಸಾಮಾನ್ಯವಾಗಿ ಮಕ್ಕಳ ಸಿನಿಮಾ ಎಂದರೆ ಬರೋದು, ಹೋಗೋದು ಗೊತ್ತಾಗಲ್ಲ. ಪ್ರಚಾರದಿಂದಲೂ ಆ ಚಿತ್ರಗಳು ದೂರವೇ ಇರುತ್ತವೆ. ಆದರೆ, “ರಾಮರಾಜ್ಯ’ ಚಿತ್ರ ಮಾತ್ರ ಅದರಿಂದ ಭಿನ್ನ. ಎಲ್ಲಾ ಕಮರ್ಷಿಯಲ್‌ ಚಿತ್ರಗಳಂತೆ ಪ್ರಚಾರ ಮಾಡಲು ಹಾಗೂ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ.

ಅದರ ಮೊದಲ ಅಂಗವಾಗಿ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಈ ಚಿತ್ರವನ್ನು ನೀಲ್‌ ಕೆಂಗಾಪುರ ನಿರ್ದೇಶಿಸಿದ್ದು, ಆರ್‌.ಶಂಕರ್‌ ಗೌಡ ನಿರ್ಮಿಸಿದ್ದಾರೆ. ಈ ಚಿತ್ರ ಆಗಸ್ಟ್‌ 10 ರಂದು ಬಿಡುಗಡೆಯಾಗುತ್ತಿದೆ ಎಂದು ತಿಳಿದು ಬಂದಿದೆ. ಗಾಂಧೀಜಿ ಅವರ ರಾಮರಾಜ್ಯದ ಕನಸನ್ನು ನನಸು ಮಾಡಲು ಹೋರಾಡುವ ನಾಲ್ಕು ಮಕ್ಕಳ ಸುತ್ತ ಈ ಸಿನಿಮಾ ಸಾಗುತ್ತದೆ. ಅದೇ ಕಾರಣದಿಂದ ಈ ಚಿತ್ರಕ್ಕೆ “ಗಾಂಧಿ ತಾತನ ಕನಸು’ ಎಂಬ ಟ್ಯಾಗ್‌ಲೈನ್‌ ಕೂಡಾ ಇದೆ. ನಿರ್ದೇಶಕ ನೀಲ್‌ ಹೇಳುವಂತೆ, ಈ ಚಿತ್ರದಲ್ಲಿ ದೊಡ್ಡವರು ಕಲಿಯುವಂತಹ ಸಾಕಷ್ಟು ಅಂಶ ಇವೆ ಎನ್ನಲಾಗಿದೆ.

 

 

ಚಿತ್ರದಲ್ಲಿ ನಾನು ಚೆನ್ನಾಗಿ ನಟಿಸಲು ಅಪ್ಪನೇ ಕಾರಣ. ಅವರು ನನಗೆ ಫ್ರೆಂಡ್​ ಥರಾ ಅಡವೈಸ್​ ಮಾಡ್ತಿದ್ರು. ಮತ್ತೆ ನನ್ನೆಲ್ಲಾ ಕೆಲಸಳಿಗೂ ಸಹಕರಿಸಿದ್ದಾರೆ. ಅಪ್ಪನಿಗೆ ಥ್ಯಾಂಕ್ಸ್​ ಹೇಳುತ್ತೇನೆ ಎಂದಿದ್ದಾರೆ. ಬಾಲ ಪ್ರತಿಭೆ ಏಕಾಂತ್​ ಗೆ ತಂದೆ ಪ್ರೇಮ್​ ಟಿಪ್ಸ್​ ಕೊಡುತ್ತಲೇ ಇರುತ್ತಾರೆ. ಅವನಿಗೆ ಕ್ಯಾಮೆರಾ ಎದುರಿಸುವುದು ಹೇಗೆ ಎಂದು ಹೇಳಿಕೊಟ್ಟಿದ್ದೆ, ಡೈಲಾಗ್​ ಹೇಳುವುದು ಹೇಗೆ ಎಂದಿದ್ದೆ. ಅವನಿಗೆ ಕಾನ್ಫಿಡೆನ್ಸ್​ ಲೆವೆಲ್​ ಚೆನ್ನಾಗಿದೆ ಅವನಿಗೆ ಒಳ್ಳೆಯದಾಗಲೀ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top