ಸಿನಿಮಾ

ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ ವಿರುದ್ದ ದೂರು ,ಏನ್ ಆ ದೂರು ,ಅದಕ್ಕೆ ರಕ್ಷಿತ್ ಪ್ರತಿಕ್ರಿಯೆ ಏನು ,ನೀವೇ ನೋಡಿ

ಖ್ಯಾತ ಕನ್ನಡ ನಟ ಕಿರಿಕ್ ಪಾರ್ಟಿ ಖ್ಯಾತಿಯ ರಕ್ಷಿತ್ ಶೆಟ್ಟಿಯ ವಿರುದ್ಧ ಜನರು ಟ್ವಿಟ್ಟರ್ ಮೂಲಕ ಟ್ರಾಫಿಕ್ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ಜೆಪಿ ನಗರದ ನಿವಾಸಿ ಆಗಿರುವ ಧನಂಜಯ್ ಪದ್ಮನಾಭಾಚಾರ್ ಈ ಬಗ್ಗೆ ಸಂಚಾರ ಪೊಲೀಸರಿಗೆ ದೂರು ನೀಡಿದ್ದಾರೆ. ಜೆಪಿ ನಗರದ 6ನೇ ಹಂತದ 28ನೇ ಎ ಮೇನ್ ರೋಡ ನಲ್ಲಿ ಅಪಾರ್ಟ್ ಮೆಂಟ್ ಮುಂಭಾಗದ ನೋ ಪಾರ್ಕಿಂಗ್ ಜಗದಲ್ಲಿ ಪದೇ ಪದೇ ಆಡಿ ಕಾರನ್ನು ಪಾರ್ಕ್ ಮಾಡಲಾಗುತ್ತದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

 

ಕಾರನ್ನು ಕಳೆದ 2 ದಿನಗಳಿಂದ ನೋ ಪಾರ್ಕಿಂಗ್ ಜಾನ್ ನಲ್ಲಿ ಪಾರ್ಕಿಂಗ್ ಮಾಡಲಾಗಿದೆ. ರಸ್ತೆಯ ಮೂಲೆಯಲ್ಲಿ ಈ ರೀತಿ ನೋ ಪಾರ್ಕಿಂಗ್ ವಲಯದಲ್ಲಿ ಕಾರು ನಿಲ್ಲಿಸಿದರೆ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂದು ಭದ್ರತಾ ಸಿಬ್ಬಂದಿ ಹಲವು ಬಾರಿ ಕಾರಿನ ಚಾಲಕರಿಗೆ ಸಲಹೆ ನೀಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಯಾವಾಗೆಲ್ಲ ಈ ಕಾರು ಈ ಪ್ರದೇಶಕ್ಕೆ ಬರುತ್ತದೋ ಇಲ್ಲಿ ನಿಲ್ಲಿಸಿ ಹೋಗುತ್ತಾರೆ. ನೀತಿ, ನಿಯಮವೆಂಬುದು ಕೇವಲ ಸಾಮಾನ್ಯ ಜನರಿಗೆ ಮಾತ್ರ ಇರುವುದೇ, ಸ್ಯಾಂಡಲ್ ವುಡ್ ನಟರಿಗೆ ಬೇರೆ ನಿಯಮ ಇದೆಯೇ ಎಂದು ವೃತ್ತಿಯಲ್ಲಿ ಟೆಕ್ಕಿ ಆಗಿರುವ ಧನಂಜಯ್ ಟ್ವಿಟ್ಟರ್ ನಲ್ಲಿ ಪ್ರಶ್ನೆ ಮಾಡಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಕ್ಷಿತ್ ಶೆಟ್ಟಿ ಕಾರು ನನ್ನದಲ್ಲ ಎಂದು ಹೇಳಿದ್ದಾರೆ. ಹಾಗೂ ಕಾರನ್ನ ನಟ-ನಿರ್ದೇಶಕ ರಿಷಬ್ ಶೆಟ್ಟಿಗೆ ಒಂದು ವರ್ಷದ ಹಿಂದೆ ಮಾರಲಾಗಿದ್ದು, ರಿಷಬ್ ಶೆಟ್ಟಿ ಅವರನ್ನು ಕೇಳಿದ್ರೆ, ಅಲ್ಲಿ ಯಾವುದೇ ನೋ ಪಾರ್ಕಿಂಗ್ ಜೋನ್ ಇಲ್ಲ ಮತ್ತು ಆಕ್ಸಿಡೆಂಟ್ ಕೂಡಾ ಆಗಿಲ್ಲ.. ಪಕ್ಕದಲ್ಲೇ ನಮ್ಮ ಸ್ಟುಡಿಯೋ ಇದೆ, ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ರಾದ್ದಾಂತ ಮಾಡೋ ಬದಲು ನಮಗೆ ನೇರವಾಗಿ ಹೇಳಿದ್ರೆ, ಬೇರೆ ಕಡೆ ಕಾರ್ ಪಾರ್ಕ್ ಮಾಡ್ತಿದ್ವಿ ಎಂದು ರಿಷಬ್‌ ಶೆಟ್ಟಿ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top