ಆರೋಗ್ಯ

ಕಡಲೆ ಕಾಯಿ ಹಸಿಯಾಗಿ ತಿನ್ನೋ ಬದ್ಲು ಬೇಯಿಸ್ಕೊಂಡು ತಿಂದ್ರೆ ಈ 13 ಲಾಭಗಳು ಪಡ್ಕೊಬಹುದು ಅಂತಾ ಗೊತ್ತಾದ್ರೆ ಆಶ್ಚರ್ಯ ಆಗ್ದೇ ಇರಲ್ಲ

ಬೇಯಿಸಿದ ಕಡಲೆ ಕಾಯಿಯ ಉಪಯೋಗಗಳು :

ಒಂದು ಕಪ್ ಬೇಯಿಸಿದ ಕಡಲೆ ಕಾಯಿಯಲ್ಲಿ 90 ಕ್ಯಾಲೊರಿ ಇದ್ದರೆ ಹಸಿ ಒಂದು ಕಪ್ ಕಡಲೆ ಕಾಯಿಯಲ್ಲಿ 120 ಕ್ಯಾಲೊರಿ ಇರುತ್ತದೆ , ಕಡಲೆಕಾಯಿ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಫೈಬರ್, ವಿಟಮಿನ್, ಮಿನರಲ್ಸ್, ಆಂಟಿ ಆಕ್ಸಿಡಂಟ್ಸ್ ಇರುತ್ತದೆ.

 

 

ಪ್ರತಿ ದಿನ ಸುಮಾರು 10 ಗ್ರಾಂ ನಷ್ಟು ಕಡಲೆಕಾಯಿ ಬೀಜ ತಿನ್ನುವುದರಿಂದ ಮಾರಣಾಂತಿಕ ಕಾಯಿಲೆಗಳಿಂದ ಉಂಟಾಗುವ ಅಪಮೃತ್ಯುವಿನಿಂದ ಪಾರಾಗಬಹುದು.

ಬೇಯಿಸಿದ ಕಡಲೆ ಬೀಜದಲ್ಲಿ ಪ್ಲಾವಿನೋಯ್ಡ್ಸ್ ಹಾಗು ಪಾಲಿ ಫಿನೋಲ್ಸ್ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ ಇದು ಹೃದಯದ ಸಮಸ್ಯೆ , ಕ್ಯಾನ್ಸರ್ ಯಿಂದ ಕಾಪಾಡುತ್ತದೆ.

ಒಂದು ಕಪ್ ಬೇಯಿಸಿದ ಕಡಲೆ ಬೀಜದಲ್ಲಿ ೨.೫ ಗ್ರಾಂ ಫೈಬರ್ ಇದ್ದು ಇದು ಜೀರ್ಣಕ್ರಿಯೆ , ಮಲಬದ್ಧತೆ ಸಮಸ್ಯೆಗಳಿಂದ ಕಾಪಾಡುತ್ತದೆ.

ಕಡಲೆಕಾಯಿ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಫೈಬರ್, ವಿಟಮಿನ್, ಮಿನರಲ್ಸ್, ಆಂಟಿ ಆಕ್ಸಿಡಂಟ್ಸ್ ಇರುತ್ತದೆ.

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ :

ಕಡಲೆಬೀಜದಲ್ಲಿ ಹೆಚ್ಚಿನ ಮಟ್ಟದಲ್ಲಿ ಪಾಲಿಫೆನಾಲ್ ಆಂಟಿಯಾಕ್ಸಿಡಂಟ್ ಇದೆ. ಅದರಲ್ಲೂ ಕಡಲೆ ಬೀಜದಲ್ಲಿರುವ ಪಿ-ಕೌಮ್ಯಾರಿಕ್ ಆಸಿಡ್ ದೇಹಕ್ಕೆ ಹೆಚ್ಚು ಅವಶ್ಯಕ.

ಪೈಲ್ಸ್ ಸಮಸ್ಯೆಯಿಂದ ರಕ್ಷಿಸುತ್ತದೆ :

ಕಡಲೆ ಕಾಯಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ ಪೈಲ್ಸ್ ಸಮಸ್ಯೆಯಿಂದ ರಕ್ಷಿಸುತ್ತದೆ , ಜೀರ್ಣಕ್ರಿಯೆ , ಮಲಬದ್ಧತೆ ಸಮಸ್ಯೆಗಳಿಂದ ಕಾಪಾಡುತ್ತದೆ.

ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ :

ಕಡಲೆಕಾಯಿಯಲ್ಲಿ ಕಬ್ಬಿಣಾಂಶ ಹೇರಳವಾಗಿದೆ ಇದು ಕೆಂಪು ರಕ್ತಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ

ಪಾರ್ಶ್ವವಾಯು ತಡೆಯುತ್ತದೆ :

ಕಡೆಲೆಕಾಯಿ ಬೀಜ ಸೇವನೆಯಿಂದ ಪಾರ್ಶ್ವವಾಯು ರೋಗ ತಡೆಯುತ್ತದೆ , ಬಯೋಫ್ಲೇವನಾಯ್ಡ್ ಅಂಶ ಮೆದುಳಿನಲ್ಲಿ ರಕ್ತಸಂಚಲನವನ್ನು ಶೇಕಡಾ 30 ರಷ್ಟು ಹೆಚ್ಚಿಸುತ್ತದೆ.

ಹೃದಯ ಸಂಬಂಧಿ ಕಾಯಿಲೆ ತಡೆಯುತ್ತದೆ :

ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಿರಿಸುವಲ್ಲಿ ಹೆಚ್ಚು ಸಹಾಯಕ ,ರಕ್ತದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ.

ಕಿಡ್ನಿ ಕಲ್ಲು ತಡೆಯುತ್ತದೆ :

ಕಿಡ್ನಿಯಲ್ಲಿ ಸಂಗ್ರಹವಾಗುವ ಕಲ್ಲುಗಳನ್ನು ಸಹ ಕರಗಿಸುತ್ತದಂತೆ ಕಡಲೇ ಬೀಜ.

ಮೂಳೆ ಬಲಗೊಳಿಸುತ್ತದೆ :

ಕಡಲೆ ಕಾಯಿ ಸೇವನೆ ಮೂಳೆ, ಎಲುಬುಗಳು ಗಟ್ಟಿಯಿರುವಂತೆ ನೋಡಿಕೊಳ್ಳುತ್ತದೆ.

ಸಂತಾನ ಫಲವತ್ತತೆ ಹೆಚ್ಚಿಸಲು ಸಹಾಯ ಮಾಡುತ್ತದೆ:

ಕಡಲೆ ಕಾಯಿಯಲ್ಲಿ  ಫೋಲೇಟ್ ಉತ್ತಮ ಪ್ರಮಾಣದಲ್ಲಿ ಇರುತ್ತದೆ . ಪುನರಾವರ್ತಿತ ಅಧ್ಯಯನಗಳು ಆರಂಭಿಕ ಗರ್ಭಾವಸ್ಥೆಯಲ್ಲಿ ಫೋಲಿಕ್ ಆಮ್ಲದ ತಿನಿಸುಗಳನ್ನು  400 ಮೈಕ್ರೋಗ್ರಾಂಗಳಷ್ಟು ಸೇವನೆ ಮಾಡಿದ್ದ ಮಹಿಳೆಯರಲ್ಲಿ  70%  ಗಂಭೀರ ನರ ನಾಳದ ನ್ಯೂನತೆ  ಹೊಂದಿರುವ  ಮಗುವನ್ನು ಹೆರುವ ಅಪಾಯ ಕಡಿಮೆ ಇರುತ್ತದೆ ಎಂದು ತೋರಿಸಿವೆ.

ಕ್ಯಾಲೊರಿಯ ಆಗರ:

ಶಕ್ತಿ ಶ್ರೀಮಂತ ಪ್ರತಿ  100 ಗ್ರಾಂ 567 ಕ್ಯಾಲೊರಿಗಳನ್ನು ಮತ್ತು ಆರೋಗ್ಯ ಉಪಯೋಗಿ ಪೋಷಕಾಂಶಗಳು, ಖನಿಜಗಳು ಮತ್ತು ಜೀವಸತ್ವಗಳನ್ನು  ಹೊಂದಿರುತ್ತವೆ.

ನಿಯಾಸಿನ್ನ  ಉತ್ತಮ ಮೂಲ:

ಕಡಲೆ ಕಾಯಿ ವಿಟಮಿನ್  ಬಿ – ಸಂಕೀರ್ಣದ ಜೀವಸತ್ವ ನಿಯಾಸಿನ್ ಹೊಂದಿರುತ್ತವೆ.

ನಿಮ್ಮ ಜೀವಕೋಶಗಳು ರಕ್ಷಿಸಲು:

ನೆಲಗಡಲೆಯಲ್ಲಿರುವ ವಿಟಮಿನ್ ಇ  ಕಂಡುಬರುತ್ತದೆ ಇದು ಆಂಟಿಆಕ್ಸಿಡೆಂಟ್ ಗಳ ಆಗರವಾಗಿದ್ದು   ಜೀವಕೋಶಗಳನ್ನು ರಕ್ಷಿಸಲು ಸಹಾಯಕವಾಗಿದೆ

ಹೆಚ್ಚು ಮ್ಯಾಂಗನೀಸ್:

ನೆಲಗಡಲೆ ಮ್ಯಾಂಗನೀಸ್ನ ಒಂದು ಉತ್ತಮ ಮೂಲವಾಗಿದೆ ಅವು ಮಾನವ ದೇಹದಲ್ಲಿ ಪಚನ ಚಟುವಟಿಕೆಯ ಸಹ-ಕಿಣ್ವದಂತೆ  ವರ್ತಿಸುತ್ತದೆ.

 ಬೊಜ್ಜು ಕಡಿಮೆ ಮಾಡಲು:

ನೆಲಗಡಲೆ ಹೊಂದಿರುವ ಫೈಟೊಸ್ಟೆರೊಲ್ಸ್ಗಳು ಬೊಜ್ಜು  ಕಡಿಮೆ ಮಾಡಲು ಸಹಾಯಕವಾಗಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top