ಸಮಾಚಾರ

ಮೊದಲ ಬಾರಿ ಮಗಳ ಬಾಯಲ್ಲಿ ಈ ಮಾತು ಕೇಳಿ ಬೆರಗಾದ್ರಂತೆ ಐಶು,ಏನ್ ಆ ಮಾತು ,ನೀವೇ ನೋಡಿ .

ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮದುವೆ ಆದ ಬಳಿಕ ಅದರಲ್ಲೂ ಮಗಳು ಆರಾಧ್ಯ ಹುಟ್ಟಿದ ನಂತರ ಚಿತ್ರಗಳಲ್ಲಿ ನಟಿಸುವುದಕ್ಕೆ ಹೆಚ್ಚಿಗೆ ಆದ್ಯತೆ ನೀಡದೆ ಸಂಪೂರ್ಣವಾಗಿ ಫುಲ್ ಟೈಮ್ ಅಮ್ಮನಾಗಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಇನ್ಸ್ಟ್ರಾಗ್ರಾಮ್ ನಲ್ಲಿ ಐಶ್ವರ್ಯ ರೈ ಬಚ್ಚನ್ ಆಗಾಗ ಮಗಳ ಜೊತೆಗಿರುವ ಫೋಟೋವೊಂದನ್ನು ಅಪ್ ಲೋಡ್ ಮಾಡುತ್ತಲೇ ಇರುತ್ತಾರೆ.

ಪುಟಾಣಿ ಆರಾಧ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದಾಳೆ. ಆರಾಧ್ಯ ಈಗ ತಾಯಿ ಅಭಿನಯ ಮಾಡಿರುವ ಫನ್ನೇಖಾನ್​ ಸಿನಿಮಾ ನೋಡಿ ಹೇಳಿದ್ದೇನು ಗೊತ್ತಾ? ಮುಂದೆ ಓದಿ


ಮದುವೆಯಾದ ಬಳಿಕ ಐಶ್ವರ್ಯ ಸಿನಿಮಾ ಮಾಡುವುದು ಕಡಿಮೆಯಾಗಿದೆ. ಇತ್ತೀಚಿಗೆ ಐಶು ಫನ್ನೇಖಾನ್​ ಸಿನಿಮಾ ಮಾಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ಆರಾಧ್ಯ ​ ಥಿಯೇಟರ್​ಗೆ ಹೋಗಿ ಐಶ್ವರ್ಯ ಅಭಿನಯದ ಫನ್ನೇಖಾನ್​ ಸಿನಿಮಾ ನೋಡಿದ್ದಾರೆ. ಚಿತ್ರ ವೀಕ್ಷಣೆ ಮಾಡಿದ ಬಳಿಕ ಪುಟಾಣಿ ತಾಯಿಯ ಬಗ್ಗೆ ಸಿಕ್ಕಾಪಟ್ಟೆ ಸಂತೋಷ ಆಗಿದ್ದಾರೆ. ನೂರಕ್ಕೆ ನೂರು ಅಂಕ ಕೊಟ್ಟು ವೆರಿ ಗುಡ್​ ಅಮ್ಮ ಎಂದು ಹೇಳಿದ್ದಾರೆ.

ಇನ್ನೊಂದು ವಿಶೇಷತೆ ಎಂದರೆ ಆರಾಧ್ಯ ಇದೆ ಮೊದಲ ಬಾರಿಗೆ ಥೇಟರ್ ನಲ್ಲಿ ತಾಯಿ ಐಶ್ವರ್ಯ ಸಿನಿಮಾ ನೋಡಿದ್ದಾರೆ ಎಂದು ತಿಳಿದು ಬಂದಿದೆ. ಅದಕ್ಕೂ ಮೊದಲು ಕೇವಲ ಸಿನಿಮಾ ಹಾಡುಗಳನ್ನು ಮನೆಯಲ್ಲಿ ನೋಡಿ ಖುಷಿ ಪಟ್ಟಿದ್ದಳಂತೆ. ತಾಯಿ ತನ್ನನ್ನು ಸಿನಿಮಾ ನೋಡಲು ಕರೆದುಕೊಂಡು ಹೋಗುತ್ತಿದ್ದಾಳೆ ಎಂದು ತಿಳಿದ ತಕ್ಷಣ ತನ್ನ ಶಾಲೆಯ ಸ್ನೇಹಿತರು ಹಾಗು ಅವರ ಪೋಷಕರನ್ನು ಕೂಡ ಕರೆದುಕೊಂಡು ಹೋಗೋಣ ಎಂದು ಆಸೆ ಪಟ್ಟಿದ್ದಾಳೆ. ಆರಾಧ್ಯ ಆಸೆಯಂತೆ ತನ್ನ ಸ್ನೇಹಿತರು ಹಾಗು ಅವರ ಪೋಷಕರ ಜೊತೆಗೆ ಕುಳಿತುಕೊಂಡು ಸಿನಿಮಾ ವೀಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top