ಸಮಾಚಾರ

ಸಾಂಸಾರಿಕ ಜೀವನಕ್ಕೆ ಕಾಲಿಡಲಿದ್ದಾಳೆ ಬಿಗ್‌ಬಾಸ್ ಬ್ಯೂಟಿ ಗೌತಮಿ ಗೌಡ

ಚಿ ಸೌ ಸಾವಿತ್ರಿ’ ಎಂಬ ಸೀರಿಯಲ್ ಮೂಲಕ ಗುರುತಿಸಿಕೊಂಡು ನಂತರ ಬಿಗ್ ಬಾಸ್ ಶೋನ ಸ್ಪರ್ಧಿಯಾಗೋ ಮೂಲಕವೇ ಖ್ಯಾತಿ ಗಳಿಸಿದ್ದಾಕೆ ನಟಿ ಗೌತಮಿ ಗೌಡ.. ಉತ್ತಮ ನಟಿಯಾಗಲು ಇರಬೇಕಾದ ಕ್ವಾಲಿಟಿಗಳೆಲ್ಲಾ ಇದ್ದರೂ ಅದೃಷ್ಟ ಕೈಗೂಡದ ಕಾರಣದಿಂದಾಗಿ ಚಿತ್ರರಂಗದಲ್ಲಿ ನೆಲೆ ನಿಲ್ಲದೆ ಕೇವಲ ಪೋಷಕ ಪಾತ್ರಗಳಿಗೆ ಮಾತ್ರ ಸೀಮಿತಗೊಂಡಿರುವ ಗೌತಮಿ, ಸದ್ಯ ಸಾಂಸಾರಿಕ ಜೀವನಕ್ಕೆ ಕಾಲಿಡುವ ಸಂತೋಷದಲ್ಲಿದ್ದಾರೆ.

 

 

ಇದೇ ತಿಂಗಳು 19ರಂದು ತನ್ನ ಬಹುಕಾಲದ ಗೆಳೆಯ ಜಾರ್ಜ್ ಕ್ರಿಸ್ಟ್ ಜೊತೆ ಗೌತಮಿ ಹಸೆಮಣೆಯೇರಲಿದ್ದಾಳೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಗಸ್ಟ್ ಈ ವಿವಾಹ ಮಹೋತ್ಸವ ನಡೆಯಲ್ಲಿದ್ದು ಮದುವೆಯಲ್ಲಿ ಎರಡೂ ಕುಟುಂಬದ ಸಂಭಂದಿಗಳು ಒಳಗೊಂಡಂತೆ ಕೆಲವು ಸಿನಿಮಾರಂಗದ ಗಣ್ಯರು, ಕಿರುತೆರೆ ಕಲಾವಿದರು ಕೂಡ ಭಾಗಿಯಾಗಲಿದ್ದಾರೆ.. ಸದ್ಯ ಎರಡು ಕುಟುಂಬಗಳು ಮದುವೆ ತಯಾರಿಯಲ್ಲಿವೆ.

ಗೌತಮಿ ಮತ್ತು ಜಾರ್ಜ್ ಕ್ರಿಸ್ಟ್ ತುಂಬಾ ವರ್ಷಗಳಿಂದ ಸ್ನೇಹಿತರಾಗಿದ್ದರು, ಬಳಿಕ ಲವ್ವಲ್ಲಿ ಬಿದ್ದು ಇಬ್ಬರೂ ಕೂಡ ತಂತಮ್ಮ ಮನೆಯರನ್ನು ಒಪ್ಪಿಸಿ ಲವ್ ಕಮ್ ಅರೇಂಜ್ ಮ್ಯಾರೇಜ್ ಮಾಡಿಕೊಳ್ಳುತ್ತಿದ್ದಾರೆ.ತಾವು ಪ್ರೀತಿಸಿದ ಹುಡುಗನ ಜೊತೆ ಮದುವೆಯಾಗುವ ಖುಷಿಯಲ್ಲಿರುವ ಗೌತಮಿಯವರ ನಿಶ್ಚಿತಾರ್ಥ ಇದೆ ವರ್ಷ ಏಪ್ರಿಲ್ ನಲ್ಲಿ ಎರಡೂ ಕುಟುಂಬಗಳ ಹುರುಹಿರಿಯರ ಸಮ್ಮುಖದಲ್ಲಿ ನೆರವೇರಿತ್ತು. ವರ್ಷಾಂತರಗಳಿಂದಲೂ ಪ್ರೀತಿ ಕಾಪಿಟ್ಟುಕೊಂಡು ಅಂತಿಮವಾಗಿ ಮದುವೆಯಾಗುತ್ತಿರುವ ಈ ಯುವ ಜೋಡಿ ನೂರ್ಕಾಲ ಸುಖವಾಗಿ ಬಾಳಲಿ, ಬದುಕು ಬಂಗಾರವಾಗಿರಲಿ ಅಂತ ಮನಃಪೂರ್ವಕವಾಗಿ ಹಾರೈಸೋಣ

ಅಂದಹಾಗೆ ಗೌತಮಿ ಅವ್ರು ‘ಅಂಬಿ ನಿಂಗ್ ವಯ್ಯಸ್ಸಾಯ್ತೋ’ ಹಾಗೂ ‘ಪೂರ್ಣ ಸತ್ಯ’ ಎಂಬೆರಡು ಸಿನಿಮಾದಲ್ಲಿ ನಟಿಸಿದ್ದು, ಮದುವೆ ನಂತರವೂ ಸಿನಿಮಾಗಳಲ್ಲಿ ಮುಂದುವರೆಯಲಿದ್ದಾರಂತೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top