ಸಮಾಚಾರ

ಕೇವಲ 7 ನಿಮಿಷದ ಪ್ರಮಾಣವಚನ ಕಾರ್ಯಕ್ರಮಕ್ಕೆ ಖರ್ಚಾಗಿದ್ದು ಎಷ್ಟು ಅಂತ ಗೊತ್ತಾದ್ರೆ ಬೆಚ್ಚಿ ಬೀಳ್ತಿರಾ.

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಗುಲಿರುವ ಖರ್ಚು ವೆಚ್ಚದ ಮಾಹಿತಿ ಇದೀಗ ಬಹಿರಂಗವಾಗಿದೆ. ವಸತಿ ಇಲಾಖೆಯಿಂದ RTI ಮಾಹಿತಿ ಪಡೆದಿದ್ದು, 7 ನಿಮಿಷಗಳ ಕಾರ್ಯಕ್ರಮಕ್ಕೆ ಬರೋಬ್ಬರಿ 42 ಲಕ್ಷ ಖರ್ಚಾಗಿದೆ ಎಂಬ ಮಾಹಿತಿ ಬಯಲಾಗಿದೆ.

ತಾಜ್ ವೆಸ್ಟ್ ಎಂಡ್ ಹಾಗೂ ಶಾಂಗ್ರಿಲಾ ಹೋಟೆಲ್’ಗಳಲ್ಲಿ ಗಣ್ಯರು ಉಳಿದುಕೊಳ್ಳುವುದಕ್ಕೆ ಮತ್ತು ಊಟ-ತಿಂಡಿಗೆ 37.53 ಲಕ್ಷ ಖರ್ಚಾಗಿದ್ದರೆ, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್’ನಲ್ಲಿ ನಡೆದ ಟೀ- ಪಾರ್ಟಿಗೆ 4.35 ಲಕ್ಷ ಖರ್ಚಾಗಿದೆ. ಪ್ರಮಾಣವಚನ ಹೂಗುಚ್ಚಕ್ಕೆ 65 ಸಾವಿರ ರೂ. ಖರ್ಚಾಗಿದೆ.

RTI ಪ್ರಕಾರ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸಿದ್ದ ಗಣ್ಯರ ಆತಿಥ್ಯಕ್ಕೆ ಖರ್ಚು ಮಾಡಿರುವ ವಿವರಗಳು ಇಂತಿವೆ.

ಅಖಿಲೇಶ್ ಯಾದವ್(ಉ.ಪ್ರ. ಮಾಜಿ ಮುಖ್ಯಮಂತ್ರಿ): Rs 1,02,400

ಮಾಯಾವತಿ(ಬಹುಜನ ಸಮಾಜ ಪಕ್ಷ ಮುಖ್ಯಸ್ಥೆ ): Rs 1,41,443

ಪಿನರಾಯಿ ವಿಜಯನ್(ಕೇರಳ ಮುಖ್ಯಮಂತ್ರಿ): Rs 1,02,400

ಅಶೋಕ್ ಗೆಹ್ಲೋಟ್(ಕಾಂಗ್ರೆಸ್ ಮುಖಂಡ): Rs 1,02,400

ಸೀತಾರಾಮ್ ಯಚೂರಿ(ಸಿಪಿಎಂ ಮುಖಂಡ ): Rs 64,000

ಹೇಮಂತ್ ಸೋರೆನ್(ಜಾರ್ಖಂಡ್ ಮಾಜಿ ಸಿಎಂ ): Rs 38,400

ಶರದ್ ಪವಾರ್(ಎನ್‍ಸಿಪಿ ಮುಖಂಡ): Rs 64,000

ಅಸಾದುದ್ದೀನ್ ಓವೈಸಿ(ಎಐಎಂಐಎಂ ಮುಖ್ಯಸ್ಥ ): Rs 38,400

ಬಾಬುಲಾಲ್ ಮರಾಂಡಿ(ಜಾರ್ಖಂಡ್ ಮಾಜಿ ಸಿಎಂ ): Rs 45,952

ಮಮತಾ ಬ್ಯಾನರ್ಜಿ ಖರ್ಚಿನ ಬಗ್ಗೆ ವಸತಿ ಇಲಾಖೆ ಮಾಹಿತಿ ಇಲ್ಲ (ಕುಮಾರಕೃಪಾ ಗೆಸ್ಟ್ ಹೌಸ್‍ನಲ್ಲಿ ತಂಗಿದ್ದರು.)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top