ಸಮಾಚಾರ

ರೈತರಿಗೆ ಸಿಹಿಸುದ್ದಿ ಪಹಣಿ ಪತ್ರಕ್ಕಾಗಿ ತಹಶೀಲ್ದಾರ್ ಕಚೇರಿಗೆ ಅಲೆಯಬೇಕಿಲ್ಲ

ರೈತರಿಗಾಗಿ ಸಿಹಿಸುದ್ದಿಯನ್ನು ರಾಜ್ಯ ಸರ್ಕಾರ ನೀಡುವ ನಿರೀಕ್ಷೆ ಇದೆ. ಇನ್ನು ಮುಂದೆ ಪಹಣಿಗಾಗಿ ರೈತರು ತಹಶೀಲ್ದಾರ್ ಕಚೇರಿಗೆ ಅಲೆದಾಡಿ ತೊಂದರೆ ಅನುಭವಿಸುವ ಪರಿಸ್ಥಿತಿ ದೂರವಾಗಲಿದೆ. ಬದಲಾಗಿ ರೈತರ ಮನೆಗೇ ನೇರವಾಗಿ ಪಹಣಿ ಬರಲಿದೆ ಅದು ಹೇಗೆ ಅಂತೀರಾ ಮುಂದೆ ಓದಿ.

ಆನ್​ಲೈನ್ ನಲ್ಲಿ ಅಥವಾ ನೇರವಾಗಿ ತಹಸೀಲ್ದಾರ್ ಕಚೇರಿಗಳಲ್ಲಿ ಅರ್ಜಿ ಸಲ್ಲಿಕೆ ಮಾಡಿದ ರೈತರು ಪಹಣಿ ಪತ್ರದ ಶುಲ್ಕದ ಜತೆ ಅಂಚೆ ವೆಚ್ಚ ಪಾವತಿ ಮಾಡಿದ್ದಾರೆ ಅಧಿಕೃತ ವಿಳಾಸಕ್ಕೆ ತಲುಪಲಿದೆ ಎಂದು ತಿಳಿದು ಬಂದಿದೆ.

 

ಈ ಹೊಸ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಭೂಮಿ ವಿಭಾಗ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ ಎಂದು ತಿಳಿದು ಬಂದಿದೆ, ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂಚೆ ಮೂಲಕ ಪಹಣಿ ಪತ್ರ ತಲುಪಿಸುವ ವ್ಯವಸ್ಥೆ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಪರಿಚಯ ಮಾಡಲಾಗುತ್ತಿದೆ. ರೈತರು ಮ್ಯುಟೇಷನ್ ಆಧಾರಿತ ಪಹಣಿ ಪತ್ರ ಬೇಕೆಂದು ಸಲ್ಲಿಕೆ ಮಾಡುವ ಅರ್ಜಿ ಜತೆ ಅಂಚೆ ವೆಚ್ಚ ಪಾವತಿಸಿದರೆ ಪಹಣಿ ಪತ್ರದಲ್ಲಿ ದಾಖಲಾದ ವಿಳಾಸ ಆಧರಿಸಿ ಪಹಣಿ ನೇರವಾಗಿ ರೈತರ ಮನೆಗೆ ತಲುಪಲಿದೆ..

ಪಹಣಿ ಪತ್ರದ ವೆಚ್ಚ 15 ರೂ. ಹಾಗೂ ಸಾಮಾನ್ಯ ಅಂಚೆ ವೆಚ್ಚ 10 ಸೇರಿ 25 ರೂ. ಪಾವತಿಸಿದರೆ ಸಾಮಾನ್ಯ ಅಂಚೆ ಮೂಲಕ ಪಹಣಿ ತಲುಪುತ್ತದೆ. ಇನ್ನು ಪಹಣಿ ಪತ್ರದ ಶುಲ್ಕ 15 ರೂ. ಜತೆಗೆ ರಿಜಿಸ್ಟರ್ಡ್ ಅಂಚೆ ವೆಚ್ಚ 20 ರೂ. ಸೇರಿ ಒಟ್ಟು 35 ರೂ. ಪಾವತಿ ಮಾಡಿದರೆ ರಿಜಿಸ್ಟರ್ಡ್ ಅಂಚೆ ಮೂಲಕ ಪಹಣಿ ಪಡೆಯಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top