ಸಮಾಚಾರ

ನಾಪತ್ತೆಯಾಗಿದ್ದ ರಾಧಿಕಾಕುಮಾರಸ್ವಾಮಿ ಮತ್ತೆ ಈ ವಿಶೇಷ ವ್ಯಕ್ತಿ ಜೊತೆ ಕಣ್ಣಿಗೆ ಬಿದ್ದಿದು ಹೀಗೆ

ರಾಧಿಕಾ ಅವರು ಚಿಕ್ಕ ವಯಸ್ಸಿನಲ್ಲೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. 2002 ರಲ್ಲಿ ಇವರು 9 ನೇ ಕ್ಲಾಸ್ ಓದುತ್ತಿರುವಾಗಲೇ “ನೀಲ ಮೇಘ ಶಾಮ” ಸಿನೆಮಾದಲ್ಲಿ ಅಭಿನಯ ಮಾಡಿದರು. ಬಳಿಕ ಇವರು ನಾಯಕಿಯಾಗಿ “ನಿನಗಾಗಿ”, “ತವರಿಗೆ ಬಾ ತಂಗಿ”, ಅನೇಕ ಸಿನೆಮಾಗಳಲ್ಲಿ ಅಭಿನಯ ಮಾಡಿ ಸ್ಯಾಂಡಲ್ವುಡ್ ನಲ್ಲಿ ಸೈ ಎನಿಸಿಕೊಂಡಿದ್ದಾರೆ. ರಾಧಿಕಾ ಅಭಿನಯಿಸಿದ “ತಾಯಿ ಇಲ್ಲದ ತಬ್ಬಲಿ”, ಸಿನೆಮಾಗೆ ಕರ್ನಾಟಕದ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು. ಇವರು ನಟನೆಯ ಜೊತೆಗೆ ನಿರ್ಮಾಪಕಿ ಅಗಿ ಕೂಡ ಕನ್ನಡ ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದಾರೆ. ಅನಾಥರು, ಲಕ್ಕಿ ಹೀಗೆ ಅನೇಕ ಚಿತ್ರಗಳಿಗೆ ಇವರು ನಿರ್ಮಾಪಕರಾಗಿಯು ಕೂಡ ಕಾರ್ಯ ನಿರ್ವಹಿಸಿದ್ದಾರೆ.

ಆದರೆ ರಾಧಿಕಾ ಇತ್ತೀಚಿನ ದಿನಗಳಲ್ಲಿ ಯಾವುದೇ ಸಿನೆಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಹಿಂದೆ ಚಿರಂಜೀವಿ ಸರ್ಜಾ ಜೊತೆ ‘ರುದ್ರ ತಾಂಡವ’ ಸಿನಿಮಾದಲ್ಲಿ ಅಭಿನಯ ಮಾಡಿದ್ದ ರಾಧಿಕಾ ಆ ಬಳಿಕ ನಾಪತ್ತೆಯಾಗಿದ್ದರು. ಅವರು ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಸಣ್ಣ ಕ್ಲೂ ಕೂಡ ಯಾರಿಗೂ ಕೂಡ ಸಿಕ್ಕಿರಲಿಲ್ಲ.

 

 

 

ಮಹಿಳಾ ಪ್ರಧಾನ ಚಿತ್ರವಾದ ದಮಯಂತಿಯಲ್ಲಿ ಅಭಿನಯಿಸಲು ರಾಧಿಕಾ ಕುಮಾರಸ್ವಾಮಿ ಒಪ್ಪಿಗೆ ನೀಡಿದ್ದಾರೆ ಎನ್ನುವ ಬಗ್ಗೆ ನಿನ್ನೆ ಅಷ್ಟೇ ಸುದ್ದಿಯಾಗಿತ್ತು. ಆದರೆ ರಾಧಿಕಾ ಎಲ್ಲಿದ್ದಾರೆ ಎಂಬ ಮಾಹಿತಿ ಇರಲಿಲ್ಲ. ಕೊನೆಗೆ ರಾಧಿಕಾ ಎಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಹೌದು ರಾಧಿಕಾ ಮಗಳ ಜೊತೆಗೆ ವಿದೇಶ ಪ್ರವಾಸ ಹೋಗಿ ಬಂದಿದ್ದಾರೆ. ವಿದೇಶದಲ್ಲಿ ಮಗಳ ಜೊತೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡ್ತಿರೋ ಒಂದು ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಂದಹಾಗೆ ಒಂದಷ್ಟು ಬ್ಯುಸಿ ವರ್ಕ್‌ ಜೊತೆಗೆ ಒಂದು ಜಾಲಿ ಟ್ರಿಪ್‌ ಮುಗಿಸಿ ಬಂದಿರೋ ರಾಧಿಕಾ ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳೋದಕ್ಕೆ ಸಜ್ಜಾಗ್ತಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top