fbpx
ಸಮಾಚಾರ

ತನ್ನ ಮಗನ ಕಷ್ಟದ ದಿನಗಳನ್ನು ನೆನೆದು ಗಳಗಳ ಕಣ್ಣೀರಿಟ್ಟ ಖ್ಯಾತ ನಟನ ತಾಯಿ,ಏನ್ ಇದು ಕಣ್ಣೀರಿನ ಕಥೆ,ನೀವೇ ನೋಡಿ

ನಟ ಶಾಹಿದ್ ಕಪೂರ್ ತಮ್ಮ ವಿಭಿನ್ನ ಅಭಿನಯ ಕೌಶಲ್ಯದಿಂದ ಹೆಸರುವಾಸಿಯಾದವರು. ಸದ್ಯ ಬಾಲಿವುಡ್ ಟಾಪ್ ನಟರಲ್ಲಿ ಒಬ್ಬರಾಗಿರುವ ಶಾಹಿದ್ ಕಪೂರ್ ಸಿನಿಮಾ ಜೀವನದ ಪ್ರಾರಂಭದ ದಿನಗಳು ಅಷ್ಟೊಂದು ಸುಲಭದಾಯಕ ಆಗಿರಲಿಲ್ಲ. ಆದರೆ ಶಾಹಿದ್ ಛಲಗಾರ ಆ ಕಷ್ಟದ ದಿನಗಳಲ್ಲಿ ಬಾಲಿವುಡ್ ದೈತ್ಯ ಸಮುದ್ರದಲ್ಲಿ ಈಜುವ ಮೂಲಕ ದಡ ಸೇರಿದ್ದಾರೆ. ಸದ್ಯ ಶಾಹಿದ್ ಕಪೂರ್ ಗೆ ಸಾಲು ಸಾಲು ಆಫರ್ ಸಿಗುತ್ತಿವೆ. ಶಾಹಿದ್ ಕಷ್ಟದ ದಿನಗಳ ಬಗ್ಗೆ ತಾಯಿ ಏನು ಹೇಳಿದ್ದಾರೆ ನೋಡೋಣ ಬನ್ನಿ.

ಶಾಹೀದ್ ಹುಟ್ಟಿದ್ದು ನಟ ಪಂಕಜ್ ಕಪೂರ್ ಮಗನಾಗಿ. ಅಮ್ಮ ನೀಲಿಮಾ ಅಜೀಮ್ ಶಾಸ್ತ್ರೀಯ ನೃತ್ಯಗಾರ್ತಿ ಆಗಿದ್ದರು. ಶಾಹೀದ್ ಕಪೂರ್ ಚಿಕ್ಕ ವಯಸ್ಸಿನವನಿದ್ದಾಗಲೇ ಕೆಲಸ ಆರಂಭಿಸಿದ್ದ ಎಂದಿರುವ ತಾಯಿ, ಶಾಹೀದ್ 7 ವರ್ಷ ಪ್ರಾಯದವನಿದ್ದಾಗ ದೆಹಲಿಗೆ ಹೋಗಬೇಕಾಯಿತು ಎಂದರು. ಚಿಕ್ಕವನಿದ್ದಾಗಲೇ ಡಾನ್ಸ್ ಆಗಿದ್ದ ಶಾಹೀದ್ , ಮೊದಲ ನೃತ್ಯ ಕಾರ್ಯಕ್ರಮ ನೋಡಿದ ನಾವೆಲ್ಲಾ ದಂಗಾಗಿದ್ದೇವು. ಅದ್ಬುತ ಡಾನ್ಸ್ ಷೋ ನೋಡಿ ನಾವು ಬೆರಗಾಗಿದ್ದೆವು. ಆತನಿಂದಾಗಿ ನಾವು ಮುಂಬೈಗೆ ಹೋಗಬೇಕಾಯಿತು. ನಾವೀಗ ಐಶಾರಾಮಿ ಜೀವನ ನಡೆಸುತ್ತಿದ್ದೇವೆ.

 

 

ಶಾಹಿದ್ ಎಷ್ಟೇ ಬ್ಯುಸಿ ಇದ್ದರು ಕೂಡ ನಮ್ಮ ಕಾಳಜಿ ಮಾಡುತ್ತಾನೆ. ಆತ ಕಷ್ಟಪಟ್ಟು ಕೆಲಸ ಮಾಡುತ್ತಾನೆ ಯಾವುದೇ ಸಂಧರ್ಭದಲ್ಲೂ ಹಿಡಿದ ಕೆಲಸ ಬಿಡುವುದಿಲ್ಲ. ಒಮ್ಮೆ ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡುವುದಿಲ್ಲ ಅವನು ಇಂದು ಈ ಮಟ್ಟಕ್ಕೆ ಬೆಳೆದಿದ್ದಾನೆ ಅಂದರೆ ಅದಕ್ಕೆ ಪರಿಶ್ರಮವೇ ಕರಣ ಎಂದು ತಾಯಿ ಹೇಳಿದ್ದಾರೆ

ಸಹೋದರ ಇಶಾನ್ ಕಟ್ಟರ್ ಚಿತ್ರರಂಗದ ಪ್ರವೇಶಕ್ಕೂ ಶಾಹಿದ್ ಬಹಳ ಪ್ರಯತ್ನ ಮಾಡಿದ್ದಾರೆ. ಸಹೋದರನಿಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ತಾಯಿ ಹೇಳಿದ್ದಾರೆ. ಇಶಾನ್ ಕಟ್ಟರ್ ಈಗ ಧಡಕ್ ಸಿನೆಮಾದಲ್ಲಿ ನಾಯಕನಾಗಿ ಅಭಿನಯ ಮಾಡಿದ್ದಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top