ಮನೋರಂಜನೆ

ಟಗರು ಬೆಳ್ಳಿಹಬ್ಬವನ್ನು ವಿಶೇಷವಾಗಿ ಆಚರಿಸಲು ಮುಂದಾದ ಶಿವಣ್ಣನ ಅಭಿಮಾನಿಗಳು.

ಸೂರಿ ನಿರ್ದೇಶನದ ಟಗರು ಚಿತ್ರ ಭರಪೂರ ಗೆಲುವನ್ನು ತನ್ನದಾಗಿಸಿಕೊಂಡಿದೆ. ನಮ್ಮ ನಡುವಿನವೆ ಅನ್ನಿಸುವಂಥಾ ಪಾತ್ರಗಳು, ಭಿನ್ನವದ ನಿರೂಪಣಾ ಶೈಲಿ, ಅಚ್ಚರಿಯಾಗುವಂಥಾ ಪಾತ್ರಗಳಿಂದ ಕನ್ನಡದ ಗಡಿಯಾಚೆಗೂ ಟಗರಿನ ಖದರ್ ಹರಡಿಕೊಂಡಿದೆ. ಶಿವಣ್ಣನ ಎನರ್ಜಿಟಿಕ್ ನಟನೆ, ಮಾನ್ವಿತಾ, ಧನಂಜಯ್, ವಸಿಷ್ಠರಂತಹ ಮನೋಜ್ಞ ಅಭಿನಯ, ಸೂರಿಯ ಪಾತ್ರಕಟ್ಟುವ ಕುಸುರಿಗೆ ಪ್ರೇಕ್ಷಕರು ಮನಸೋತಿದ್ದಾರೆ. ಅಭಿಮಾನದಾಚೆಗೆ ನೋಡಿಸಿಕೊಳ್ಳುತ್ತಿರುವ ಟಗರು ಇದೀಗ ಯಶಸ್ವಿ 175ನೇ ದಿನಗಳನ್ನು ಕಂಪ್ಲೀಟ್ ಮಾಡಿ 25ನೇ ವಾರವನ್ನು ಪೂರ್ಣಗೊಳಿಸಿದೆ.. ಅಷ್ಟೇ ಅಲ್ಲದೆ ಕಳೆದ ಸಾಕಷ್ಟು ವರ್ಷಗಳಲ್ಲಿ ಅತಿ ದೀರ್ಘ ಸಮಯ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿರುವ ಸಿನಿಮಾ ಎನಿಸಿಕೊಂಡಿದೆ..

 

 

ಇಂಥಾದ್ದೊಂದು ಪುಷ್ಕಳ ಗೆಲುವನ್ನು ಕಂಡಿರುವ ಟಗರು ಚಿತ್ರದ ಯಶಸ್ಸಿನ ಇನ್ನೂ ಮುಂದುವರೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾಗಳು ಚಿತ್ರಮಂದಿರದಲ್ಲಿ ಒಂದೆರೆಡು ವಾರಗಳು ಪ್ರದರ್ಶನಗೊಳ್ಳುವುದೇ ಹೆಚ್ಚು ಹೀಗಿರುವಾಗ ಟಗರು ಚಿತ್ರ ಬರೋಬ್ಬರಿ ಇಪ್ಪತ್ತೈಸು ವಾರಗಳನ್ನು ಪೂರೈಸಿರುವ ಚಿತ್ರದ ಸಂಭ್ರಮಾಚರಣೆಯನ್ನು ಅಭಿಮಾನಿಗಳು ವಿಶೇಷವಾಗಿ ಆಯೋಜಿಸಿದ್ದಾರೆ..

ಮೈಸೂರಿನಲ್ಲಿ ಪಾರ್ವತಮ್ಮ ರಾಜಕುಮಾರ್ ಸ್ಥಾಪಿಸಿದ್ದ ‘ಶಕ್ತಿಧಾಮ’ ಆಶ್ರಮದಲ್ಲಿ ಟಗರು’ ಸಿನಿಮಾ ಯಶಸ್ಸನ್ನು ಆಚರಣೆ ಮಾಡಲು ಮುಂದಾಗಿದ್ದಾರೆ.. ಆಗಸ್ಟ್ 12ರಂದು ಅಲ್ಲಿರುವ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿದ್ದು ಸಿಹಿಯನ್ನು ಹಂಚಲಾಗುತ್ತದೆ. ಅಷ್ಟೇ ಅಲ್ಲದೆ ಮೈಸೂರಿನ ಶಾಂತಲಾ ಚಿತ್ರಮಂದಿರದಲ್ಲಿ ಕೂಡ ಅಭಿಮಾನಿಗಳಿಗೆ ಸಿಹಿ ಹಂಚಿ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top