ಸಮಾಚಾರ

ಸೂರ್ಯ ಮುಳುಗಿದ ಮೇಲೆ ಈ ಕೋಟೆಗೆ ಹೋದವರು ಯಾರೂ ವಾಪಸ್ಸು ಬಂದಿಲ್ಲವಂತೆ,ಎದೆ ಝಲ್ ಎನಿಸುವ ಭಯಾನಕ ರಹಸ್ಯಗಳನ್ನು ಒಳಗೊಂಡಿದೆ ಈ ಕೋಟೆ!

ರಾಜಸ್ಥಾನ ರಾಜ್ಯದಲ್ಲಿ ಭಂಗಾರ್‌ ಕೋಟೆಯೂ ಭಂಗಾರ್‌ ಅರಾವಳಿ ಪರ್ವತ ಶ್ರೇಣಿಯಲ್ಲಿ ಜೈಪುರ ನಗರದಿಂದ 52 ಕಿಮೀ ದೂರದಲ್ಲಿದೆ. ಭಂಗಾರ್ ಕೋಟೆಯು ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನೆಲೆಸಿದೆ. ಇದು ಮಧ್ಯಕಾಲೀನ ಕಾಲದ ಕೋಟೆ ಆಗಿದೆ. ಈ ಕೋಟೆಯನ್ನು ಮೊಘಲರ ಪ್ರಸಿದ್ಧ ದಂಡನಾಯಕನಾಗಿದ್ದ ಮಾನ್ ಸಿಂಗ್ ಅಂಬೆರ್ ನ ಪುತ್ರ ಮಾಧೋ ಸಿಂಗ್ 1613 ನಲ್ಲಿ ನಿರ್ಮಾಣ ಮಾಡಿದರು.

ಇದನ್ನು ಭಾರತದ ದೆವ್ವಗಳ ಭಯಾನಕವಾಗಿರುವ ಸ್ಥಳ ಎಂದು ಕರೆಯಲಾಗುತ್ತದೆ. ಈ ಪ್ರದೇಶದಲ್ಲಿ ಸೂರ್ಯಾಸ್ತವಾದ ನಂತರ ಪಿಶಾಚಿಗಳಿಗೆ ವಾಸಸ್ಥಾನ ಆಗುವ ಕಾರಣದಿಂದ ಯಾರೂ ಕೂಡ ಇಲ್ಲಿಗೆ ಪ್ರವೇಶ ಮಾಡುವುದಿಲ್ಲ ಎಂದು ಹೇಳಲಾಗುತ್ತದೆ. ಸೂರ್ಯೋದಯದ ಪೂರ್ವದಲ್ಲಿ, ನಂತರ ಈ ಸ್ಥಳಕ್ಕೆ ಹೋಗಬಾರದು ಎಂದು ನಿರ್ಬಂಧವೂ ಕೂಡ ಇದೆ ಎಂದು ತಿಳಿದು ಬಂದಿದೆ. ಮೊಂಡು ಹಠವನ್ನು ಮಾಡಿ ಹೋದವರು ಯಾರೂ ಜೀವ ಸಹಿತ ಬಂದಿಲ್ಲ. ಬರುವುದಿಲ್ಲ ಎಂದೂ ಹೇಳಲಾಗುತ್ತದೆ. ಈ ಸ್ಥಳದ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಕೆಲವರು ಇದನ್ನು ಪಿಶಾಚಿಗಳ ಜಾಗ ಎನ್ನುತ್ತಾರೆ. ಜನರು ವಿಚಿತ್ರ ಶಬ್ದಗಳನ್ನು ಕೇಳುತ್ತಾರೆ. ಕಿರುಚುವ, ಮಹಿಳೆಯರು ಅಳುವ, ಅನೇಕ ವಿಲಕ್ಷಣ, ವಿರಳ ಘಟನೆಗಳು ನಡೆಯುತ್ತವೆ.

 

 

ವಿಚಿತ್ರವಾಗಿರುವ ವಾಸನೆ, ದೀಪಗಳು ಹಾಗು ಪ್ರೇತದ ನೆರಳು, ಸಂಗೀತ ಹಾಗು ನೃತ್ಯದ ಅಸಾಮಾನ್ಯ ಶಬ್ದ ಭಂಗಾರ್‌ ಕೋಟೆಯಿಂದ ಬರುವುದನ್ನು ಅಲ್ಲಿನ ಜನರು ನೋಡಿದ್ದೇವೆ ಎಂದು ಹೇಳುತ್ತಾರೆ. ಸೂರ್ಯಾಸ್ತದ ನಂತರ ಯಾರಾದರೂ ಕೋಟೆ ಪ್ರವೇಶ ಮಾಡಿದರೆ ಮತ್ತು ರಾತ್ರಿಯಲ್ಲಿ ಅಲ್ಲಿಯೇ ಇರುವಾಗ, ಅವರು ಕೋಟೆಯಿಂದ ಹಿಂತಿರುಗುವುದಿಲ್ಲ ಎಂದು ಹೇಳುತ್ತಾರೆ.

ಇತಿಹಾಸದ ಉಲ್ಲೇಖದ ಪ್ರಕಾರ, ಕೋಟೆಯಲ್ಲಿನ ಮನೆಗಳು ತನ್ನ ಮನೆಗಿಂತ ಕೆಲ ಮಟ್ಟದಲ್ಲಿ ಇರಬೇಕು ಎಂದು ಮಾಂತ್ರಿಕನೊಬ್ಬ ಆದೇಶಿಸಿದ್ದ. ಮಾಂತ್ರಿಕನ ಮನೆಗಿಂತ ಎತ್ತರದ ಮನೆಯ ನೆರಳು ಆತನ ಮನೆ ಮೇಲೆ ಬಿದ್ದಾಗ ಸಂಪೂರ್ಣ ನಗರ ನಾಶವಾಗಲಿದೆ ಎಂದು ಹೇಳಿದ್ದ. ಮಾಧೋ ಸಿಂಗ್ ನ ಮೊಮ್ಮಗ ಅಜಬ್ ಸಿಂಗ್ ಈ ಈ ಎಚ್ಚರಿಕೆ ಕಡೆಗಣಿಸಿದ ಮತ್ತು ಕೋಟೆಯನ್ನು ಎತ್ತರಿಸಿದ. ಅದರ ನೆರಳು ಮಾಂತ್ರಿಕನ ಮನೆ ಮೇಲೆ ಬಿದ್ದು ನಗರವು ನಾಶ ಆಗಿದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top