ಸಮಾಚಾರ

ವ್ಯಂಗ್ಯ, “ಮೊಟ್ಟೆಗೆ ಕಾವು ಕೊಡೋದು ಹೇಗಂತಾ ಕೋಳಿಗೂ ಹೇಳಿಕೊಡ್ತಾರೆ ಕುಮಾರಸ್ವಾಮಿ” -ಈಶ್ವರಪ್ಪ

ಸದಾ ಒಂದಿಲ್ಲ ಒಂದೂ ವಿವಾದಿತ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಬಿಜೆಪಿ ಮುಖಂಡ ಈಶ್ವರಪ್ಪ ಈಗ ಮತ್ತೊಂದು ಕೇಳಿಕೆ ಮೂಲಕ ಸುದ್ದಿಯಲ್ಲಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಭತ್ತ ನಾಟಿ ಮಾಡಲು ಮಂಡ್ಯದ ಸೀತಾಪುರ ಗ್ರಾಮಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಶಿವಮೊಗ್ಗ ಶಾಸಕ ಕೆ.ಎಸ್​. ಈಶ್ವರಪ್ಪ ಕಿಡಿಕಾರಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಂ ಎಚ್‌.ಡಿ. ಕುಮಾರಸ್ವಾಮಿ ರವರು ಮಂಡ್ಯ ಜಿಲ್ಲೆಯಲ್ಲಿ ಆ.11ರಂದು ಭತ್ತ ನಾಟಿ ಮಾಡುವ ಮೂಲಕ ಮುಂಗಾರು ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡುತ್ತಿರುವುದು ಮೊಟ್ಟೆಗೆ ಕಾವು ಕೊಡುವುದನ್ನು ಕೋಳಿಗಳಿಗೆ ಹೇಳಿಕೊಟ್ಟಂತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಲೇವಡಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಮೊದಲು ರೈತರ ಸಾಲವನ್ನು ಮನ್ನಾ ಮಾಡಿ ಎಂದರೆ ಕಾರ್ಯಕ್ರಮದ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಅಲ್ಲದೇ ಮಂಡ್ಯ ಜನತೆ ದಡ್ಡರಲ್ಲ, ನೀವು ಮುಚ್ಚಿ ಹೋಗಿರುವ ಸಕ್ಕರೆ ಕಾರ್ಖಾನೆಗಳನ್ನು ತೆಗೆಸಿ, ಅದೂ ಬಿಟ್ಟು ನಾಟಿ ಮಾಡುವ ಕಾರ್ಯ ನಮಗೆ ಹೇಳಿ ಕೊಡಬೇಡಿ ಎಂದು ಜಿಲ್ಲೆಯ ಬಿಜೆಪಿಯ ಕೆಲ ಮುಖಂಡರು ವಾಗ್ದಾಳಿ ಮಾಡಿದ್ದಾರೆ.

ಇಂದು ಮಂಡ್ಯ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ಗದ್ದೆಯೊಂದರಲ್ಲಿ ಸಿಎಂ ಕುಮಾರಸ್ವಾಮಿ ನಾಟಿ ಮಾಡಿದ್ದಾರೆ. ಆಗಸ್ಟ್ 10ರಂದು ರಾತ್ರಿ ಮೈಸೂರಿಗೆ ತೆರಳಿ ವಾಸ್ತವ್ಯ ಮಾಡಿದ ಅವರು ಆಗಸ್ಟ್ 11ರಂದು ಬೆಳಗ್ಗೆ ಮೈಸೂರಿನ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ದರ್ಶನ ಪಡೆದು ಮಂಡ್ಯ ಗೆ ಭೇಟಿ ನೀಡಿ ಭತ್ತ ನಾಟಿ ಮಾಡಿದ್ದಾರೆ. ರೈತರಾದ ಮಹದೇವಮ್ಮ, ದೇವರಾಜು, ಮಹೇಶ, ಹೇಮಲತ, ಮಾಯಮ್ಮ ಅವರಿಗೆ ಸೇರಿದ ಭತ್ತದ ಗದ್ದೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನಾಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top