ಸಿನಿಮಾ

ಸೀತಾರಾಮ ಕಲ್ಯಾಣ ಟೀಸರ್ ನಲ್ಲಿ ತಾನು ಯಾಕೆ ಕಾಣಿಸಿಕೊಂಡಿಲ್ಲ ಎಂಬುವುದಕ್ಕೆ ಹೀಗೆ ಸ್ಪಷ್ಟನೆ ಕೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್

ಜಾಗ್ವಾರ್ ಸಿನಿಮಾ ಯಶಸ್ಸಿನ ಬಳಿಕ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರು ಕುರುಕ್ಷೇತ್ರ ಮಾಡಿದ್ದೂ ಈಗಾಗಲೇ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ. ಈಗ ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚಿಗೆ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿನಯದ ‘ಸೀತರಾಮ ಕಲ್ಯಾಣ’ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿತ್ತು. ಟೀಸರ್ ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿ ಮಿಂಚಿತ್ತು.

ಆದರೆ ಟೀಸರ್ ನಲ್ಲಿ ಸಿನಿಮಾ ನಾಯಕಿ ರಚಿತಾ ರಾಮ್ ಇಲ್ಲದೆ ಇರುವುದು ಹಲವು ಚರ್ಚೆಗಳಿಗೆ ಗ್ರಾಸವಾಗಿತ್ತು. ಸದ್ಯ ಈ ಬಗ್ಗೆ ಖುದ್ದು ರಚಿತಾ ರಾಮ ಸ್ಪಷ್ಟನೆ ನೀಡಿದ್ದು, ಟೀಸರ್ ನಲ್ಲಿ ತಾವು ಏಕೆ ಕಾಣಿಸಿಕೊಂಡಿಲ್ಲ ಎಂಬುದರ ಬಗ್ಗೆ ಮಾತನಾಡಿದ್ದಾರೆ ಹಾಗಾದರೆ ರಚಿತಾ ರಾಮ್ ಏನು ಹೇಳಿದರು. ಮುಂದೆ ಓದಿ.

 

 

ಟೀಸರ್ ನಲ್ಲಿ ತಾನು ಇಲ್ಲ ಎಂಬುದಕ್ಕೆ ರಚಿತಾ ಯಾವುದೇ ಬೇಸರ ಮಾಡಿಕೊಂಡಿಲ್ಲ, ನಗುಮುಖದಿಂದಲೇ ಮಾತನಾಡುತ್ತ ಟೀಸರ್ ನಲ್ಲಿ ಯಾರು ಕಾಣಿಸಿಕೊಂಡಿದ್ದಾರೆ ಎಂಬುದು ಮುಖ್ಯವಲ್ಲ. ಚಿತ್ರದಲ್ಲಿ ನಾನು ಅಭಿನಯ ಮಾಡಿದ್ದೇನೆ ಎಂಬುದು ಮುಖ್ಯ. ಚಿತ್ರದ ಟೀಸರ್ ಚೆನ್ನಾಗಿ ಮೂಡಿ ಬರಲಿ ಎಂದು ನಿಖಿಲ್ ಕುಮಾರ್ ಪಾತ್ರದ ಪರಿಚಯವನ್ನು ಅಲ್ಲಿ ತಿಳಿಸಲಾಗಿದೆ. ಟೀಸರ್ ಬಿಡುಗಡೆಯಾದಾಗ ಬಹಳ ಜನರು ನನ್ನನ್ನು ಈ ಪ್ರಶ್ನೆ ಕೇಳಿದ್ದರು ಎಂದು ಹೇಳಿದ್ದಾರೆ.

ಸೀತಾರಾಮಕಲ್ಯಾಣ ಪ್ರತಿಯೊಂದು ಶೂಟ್‍ನಲ್ಲಿ ಎಲ್ಲರಿಂದಲೂ ಕಲಿಯುವ ಅವಕಾಶ ಲಭಿಸಿದೆ. ಚಿತ್ರದಲ್ಲಿ ಅನೇಕ ಭಾಷೆಯ ಕಲಾವಿದರು ಇದ್ದಾರೆ. ಚಿತ್ರದ ಟೀಸರ್ ಅದ್ದೂರಿಯಾಗಿ ಬಿಡುಗಡೆಯಾಗಿದ್ದು ಅದನ್ನು ಯೂಟ್ಯೂಬ್ ಟಾಪ್ ಟ್ರೆಂಡಿಂಗ್ ನಲ್ಲಿ ತಂದ ಎಲ್ಲ ಅಭಿಮಾನಿಗಳಿಗೆ ರಚಿತಾ ಧನ್ಯವಾದ ತಿಳಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಆಗಲಿದೆ ಎನ್ನುವ ಸುಳಿವನ್ನು ಅವರು ನೀಡಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top