ಸಿನಿಮಾ

ಡೈರೆಕ್ಟರ್ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಮಾಡಿ ನಟರಾದ ಟಾಪ್ 10 ನಿರ್ದೇಶಕರು ಇವರೇ ನೋಡಿ

ಕನ್ನಡ ಚಿತ್ರರಂಗದಲ್ಲಿ ಅನೇಕ ನಿರ್ದೇಶರು ನಟರಾಗಿ ಅಭಿನಯ ಮಾಡಿದ್ದಾರೆ ಹಾಗಾದರೆ ಯಾವ ಯಾವ ನಿರ್ದೇಶಕರು ನಾಯಕರಾಗಿದ್ದಾರೆ ನೋಡೋಣ ಬನ್ನಿ.

 

ಉಪೇಂದ್ರ

ಉಪೇಂದ್ರ ಕನ್ನಡ ಚಲನಚಿತ್ರ ನಿರ್ದೇಶಕ ಹಾಗು ನಟ. 1992ರಲ್ಲಿ ಬಿಡುಗಡೆಯಾದ ತರ್ಲೆ ನನ್ಮಗ ಚಿತ್ರದ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ. ಇದಕ್ಕೂ ಮೊದಲು ಕಾಶೀನಾಥ್ ಜತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ನಾಯಕನಟರಾಗಿ ಇವರ ಮೊದಲ ಚಿತ್ರ 1998ರಲ್ಲಿ ಬಿಡುಗಡೆಯಾದ ಏ.

 

ಕಾಶೀನಾಥ್

ಕಾಶಿನಾಥ್ ಒಬ್ಬ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದು, 80ರ ದಶಕದ ಸ್ಯಾಂಡಲ್‍ವುಡ್‍ನ ಜನಪ್ರಿಯ ನಟ ಹಾಗೂ ನಿರ್ದೇಶಕರಾಗಿದ್ದರು. ಮೂರು ದಶಕಗಳವರೆಗೆ ವೃತ್ತಿಜೀವನದಲ್ಲಿ, ಕಾಶಿನಾಥ್ 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ನಟ ಉಪೇಂದ್ರ, ನಟಿ ಉಮಾಶ್ರೀ ಸಂಗೀತಗಾರ ವಿ. ಮನೋಹರ್ ಮತ್ತು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸೇರಿದಂತೆ ಹಲವು ಪ್ರತಿಭೆಗಳನ್ನು ಕನ್ನಡ ಚಲನಚಿತ್ರೋದ್ಯಮದಲ್ಲಿ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹಾಸ್ಯ ಚಿತ್ರ ಅಪರೂಪದ ಅತಿಥಿಗಳು (1976) ಮೂಲಕ ನಿರ್ದೇಶಕರಾಗಿ ತಮ್ಮ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ‘ಅನುಭವ’ (1984) ಎಂಬ ಯಶಸ್ವೀ ಚಲನಚಿತ್ರದ ಮೂಲಕ ನಟನಾಗಿ ಚಿತ್ರದಲ್ಲಿ ಅಭಿನಯಿಸಿದರು

 

 

 

ಪ್ರೇಮ್

ಪ್ರೇಮ್ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲೊಬ್ಬರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಕರಿಯ ಚಿತ್ರದ ಮೂಲಕ ನಿರ್ದೇಶನ ಪ್ರಾರಂಭಿಸಿದ ಪ್ರೇಮ್, ನಂತರ ಎಕ್ಸ್‍ಕ್ಯೂಸ್ ಮಿ ಮತ್ತು ಶಿವರಾಜ್ ಕುಮಾರ್ ಜೊತೆಜೋಗಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಮೂರೂ ಚಿತ್ರಗಳು ಶತದಿನೋತ್ಸವದ ಯಶಸ್ಸನ್ನು ಕಂಡಿರುವುದು ಗಮನಾರ್ಹ. ಇವರ ನಿರ್ದೇಶನದ ನಾಲ್ಕನೆ ಚಿತ್ರ ‘ಪ್ರೀತಿ ಏಕೆ ಭೂಮಿ ಮೇಲಿದೆ’. ಈ ಚಿತ್ರದಲ್ಲಿ ಪ್ರೇಮ್ ನಾಯಕನಟನಾಗಿ ನಟಿಸಿದ್ದಾರೆ

 

ಎಸ್ ನಾರಾಯಣ್

ಎಸ್. ನಾರಾಯಣ್ ಕನ್ನಡ ಚಿತ್ರರಂಗದ, ನಿರ್ದೇಶಕ, ನಿರ್ಮಾಪಕ, ನಟ ಹಾಗೂ ಚಿತ್ರ ಸಾಹಿತಿ. ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಚಿತ್ರರಂಗದಲ್ಲಿ ಚಿತ್ರರಂಗದಲ್ಲಿ ಗಣನೀಯ ಸಾಧನೆ ಮಾಡಿದವರು. 1981ರ ವರ್ಷದಲ್ಲಿ ನಟನಾಗಬೇಕು ಎಂದುಕೊಂಡು ಬೆಂಗಳೂರಿಗೆ ಬಂದ ನಾರಾಯಣ್, ಅಂದು ಜನಪ್ರಿಯ ನಿರ್ದೇಶಕರಾಗಿದ್ದ ಭಾರ್ಗವ, ಎ.ಟಿ. ರಘು, ರಾಜ್‌ಕಿಶೋರ್ ಮುಂತಾದವರ ಬಳಿ ಸಹಾಯಕರಾಗಿ ಸೇರಿಕೊಂಡರು.

 

ಪವನ್ ಒಡೆಯರ್

ಇವರು “ಗೊಂವಿಂದಾಯ ನಮಃ” ಸಿನೆಮಾಗೆ ಮೊದಲ ನಿರ್ದೇಶನ ನೀಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಪವನ್ ಕೇವಲ ನಿರ್ದೇಶನ ಮಾಡದೆ ನಿರ್ಮಾಪಕ, ನಟರಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

 

 

 

ಟಿ. ಎಸ್. ನಾಗಾಭರಣ
ಟಿ. ಎಸ್. ನಾಗಾಭರಣ ಕನ್ನಡ ಚಿತ್ರರಂಗದ ಪ್ರಮುಖ ಚಿತ್ರ ನಿರ್ದೇಶಕರಲ್ಲೊಬ್ಬರು. ಇವರು ತಮ್ಮ 26 ವರ್ಷಗಳ ವೃತ್ತಿಜೀವನದಲ್ಲಿ ನಿರ್ದೇಶಿಸಿದ 30 ಕನ್ನಡ ಚಿತ್ರಗಳಲ್ಲಿ 20 ಚಿತ್ರಗಳಿಗೆ ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಹಾಗು ಇತರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅನೇಕ ಸಿನಿಮಾಗಲ್ಲಿ ಅಭಿನಯವನ್ನು ಕೂಡ ಮಾಡಿದ್ದಾರೆ.

 

ಓಂ ಪ್ರಕಾಶ್ ರಾವ್
ಓಂ ಪ್ರಕಾಶ್ ರಾವ್ ರವರು ಕನ್ನಡದ ಜನಪ್ರಿಯ ನಿರ್ದೇಶಕ. 50ಕ್ಕೂ ಹಚ್ಚು ಸಿನಿಮಾಗಳನ್ನ ನಿರ್ದೇಶಿಸಿ, 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

 

 

 

ಮಹೇಂದರ್

ರಮೆಶ್ ನಾಯಕನಾಗಿದ್ದ ಪ್ರಣಯದ ಪಕ್ಶಿಗಳು ಎ೦ಬ ಚಲನಚಿತ್ರ ವನ್ನು ನಿರ್ದೇಶನ ಮಾಡಿದರು ಆ ನಂತರ ರಘುವಿರ್ ನಾಯಕ ನಟ ನಾಗಿ ನಟಿಸಿದ ಶೃಂಗಾರ ಕಾವ್ಯ ನಿರ್ದೆಸಿದರು ಇದು ಸುಪಾರ್ ಡೂಪರ್ ಹಿಟ್ ಅಯಿತು. ಬಳಿಕ ಅಭಿನಯದಲ್ಲೂ ಮಿಂಚಿ ಖ್ಯಾತಿ ಪಡೆದರು.

 

ಯೋಗರಾಜ್ ಭಟ್

ಮೊದಲು ದೂರದರ್ಶನದಲ್ಲಿ ಧಾರವಾಹಿಗಳನ್ನು ನಿರ್ದೇಶಿಸಿದರು. “ಮಣಿ” ಅವರ ಮೊದಲ ನಿರ್ದೇಶನದ ಚಿತ್ರವಾಗಿದ್ದು ಮುಂಗಾರು ಮಳೆ ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಇವರ ನ೦ತರದ ಚಲನಚಿತ್ರಗಳು, ಗಾಳಿಪಟ, ಮನಸಾರೆ, ಪಂಚರಂಗಿ, ಪರಮಾತ್ಮ, ಡ್ರಾಮಾ, ಇತ್ಯಾದಿ ನಿರ್ದೇಶನ ಮಾಡಿದ್ದಾರೆ. ಕೆಲವು ಸಿನೆಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ.

 

ಪವನ್ ಕುಮಾರ್
ಪವನ್ ಕುಮಾರ್ ಅವರು ಕನ್ನಡ ಚಲನಚಿತ್ರ ರಂಗದಲ್ಲಿ ನಿರ್ದೇಶಕರಾಗಿ , ನಟರಾಗಿ ಹಾಗೂ ಚಿತ್ರಕಥೆ ಬರಹಗಾರರಾಗಿ ಪ್ರಸಿದ್ದಿಯಾಗಿದ್ದಾರೆ. ರಂಗಭೂಮಿಯಿಂದ ಬಂದಿರುವ ಇವರು ನಿರ್ದೇಶಕರಾದ ಯೋಗರಾಜ್ ಭಟ್ ರೊಂದಿಗೆ ಸಹಾಯ ನಿರ್ದೇಶಕರಾಗಿದ್ದರು. ನಿರ್ದೇಶಕರಾಗಿ ಮೊದಲ ಬಾರಿಗೆ ಲೈಫು ಇಷ್ಟೇನೇ ಸಿನಿಮಾ ಮಾಡಿದ್ದಾರೆ. ನಟರಾಗಿ ಮಿ.ಗರಗಸ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top