fbpx
ದೇವರು

ಮದುವೆ ಆಗದವರಿಗೆ ಕಂಕಣ ಭಾಗ್ಯ ನೀಡುವ ,ಬೇಡಿದ ವರ ನೀಡುವ ಶೀತಲಾಂಭ ದೇವಿಯ ಮಹಿಮೆ ಬಗ್ಗೆ ಗೊತ್ತಾದ್ರೆ ಖಂಡಿತಾ ಈ ತಾಯಿ ಮೇಲೆ ಭಕ್ತಿ ಜಾಸ್ತಿ ಆಗುತ್ತೆ.

ಶೀತಲಾಂಭ ದೇವಿಯ ಮಹಿಮೆಯನ್ನು ಒಮ್ಮೆ ತಿಳಿದುಕೊಳ್ಳಿ.

“ಒಂದೇ ಹಮ್ ಶೀತಲಾ ದೇವಿ ರಾಸಭಕ್ತಾದಿ ದಿಗಂಬರಂ
ಮಾರ್ಜನಿ ಕಲಶೋಪಿತಮ್ ಶೂರ್ಪಾ0ಲಂಕೃತ ಮಸ್ತಕಂ
ಶೀತಲಿತ್ವಂ ಜಗನ್ನಾಥ ಶೀತಲಿತ್ವಂ ಜಗತ್ತಿತ
ಶೀತಲಿತ್ವಂ ಜಗತ್ತಾದ್ರಿ ಶೀತಲಾಯೇ ನಮಃ”

 

 

 

ಇದು ವಾಮ ಕೇಶವ ಪುರಾಣ ಮತ್ತು ದೇವೀ ಭಾಗವತದಲ್ಲಿ ಹೇಳಿರುವಂತಹ ಸರ್ವ ಪೀಡಾ ಪರಿಹಾರ ಮಾಡುವ ಶೀತಲಾ ದೇವಿಯ ಮಹಾ ಮಂತ್ರ .ಶೀತಲ ದೇವಿಯು ಪಾವಗಡ ಕ್ಷೇತ್ರದಲ್ಲಿ ನೆಲೆಸಿದ್ದಾಳೆ. ಈ ಪಾವಗಡ ಕ್ಷೇತ್ರವು ಒಂದು ಪುಣ್ಯ ಪ್ರದೇಶವಾಗಿ, ಪ್ರಸಿದ್ಧ ಕ್ಷೇತ್ರವಾಗಿ ಬೆಳೆಯಲು ಈ ದೇವಿಯ ಮೂಲ ಕೃಪೆಯಿದೆ. ಹಿಂದೆ ಪಾವಗಡದಲ್ಲಿ ಹಲವಾರು ಬಾರಿ ಮಹಾಮಾರಿಯಂತಹ ಪ್ಲೇಗ್, ಕಾಲರಾ ಮತ್ತು ಮುಂತಾದ ಹಲವಾರು ರೋಗಗಳಿಂದ ಪೀಡಿತವಾಗಿತ್ತು.

ಇದರ ಪರಿಹಾರವಾಗಿ ಜನ ಊರಾಚೆಯ ಹೊರಭಾಗದಲ್ಲಿ ಶ್ರೀ ಶೀತಲಾಂಬ ಯಂತ್ರವನ್ನು ಗ್ರಾಮ ದೇವತೆಯಾಗಿ ಸ್ಥಾಪಿಸಿದರು. 1892 ರಲ್ಲಿ ಸ್ಥಾಪಿಸಲ್ಪಟ್ಟ, ಈ ಶೀತಲಾಂಭ ಯಂತ್ರವು ಒಂದು ಬೃಹದಾಕಾರದ ಕಲ್ಲಿನ ಯಂತ್ರ. ಸುಮಾರು ಐದು ಕಾಲು ಅಡಿ ಎತ್ತರ ಮತ್ತು ಎರಡು ಕಾಲು ಅಡಿ ಅಗಲದ ಕಲ್ಲಿನ ಶಿಲೆಯ ಮೇಲೆ ಬೀಜಾಕ್ಷರಗಳನ್ನು ಮೂಡಿಸಿ ಚತುಷ್ಕೋನದಲ್ಲಿ ಬಂದಿಸಲಾಗಿದೆ.
ಯಂತ್ರದ ಕೆಳಗೆ ಶ್ರೀ ಚಕ್ರ ಸಾಲಿಗ್ರಾಮವನ್ನು ಇಡಲಾಗಿದ್ದು, ವಿವಿಧ ಕೋಣ, ತ್ರಿಕೋಣ ಚತು ಸ್ತರಗಳಲ್ಲಿ ಬಂಧಿತವಾಗಿರುವ ಅಕ್ಷರಗಳನ್ನು ಉಚ್ಚರಿಸುವಾಗ ಉತ್ಪತ್ತಿಯಾಗುವ ನಾದ ವಿಶೇಷವಾದ ಶಕ್ತಿಯನ್ನು ಹೊಂದಿದ್ದು, ಜನರಿಗೆ ಸುಖ ಶಾಂತಿ ಲಭಿಸಿ, ಆಯಸ್ಸು, ಆರೋಗ್ಯ ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ .

ಈ ಅಪರೂಪದ ಶಿಲೆಯು ಈಗ ಪಾವಗಡದ ಶನೇಶ್ಚರನ ಗುಡಿಯ ಮಧ್ಯ ಭಾಗದಲ್ಲಿ ಇದೆ . ಶೀತಲಾಂಭ ದೇವಿಯ ಮಹತ್ವ ಎಂದರೆ ಈ ಯಂತ್ರಕ್ಕೆ ಪೂಜೆ ಮಾಡಿಸಿ ತಾಳಿಗಳನ್ನು ಕಟ್ಟಿ ಹರಕೆ ಹೊತ್ತಲ್ಲಿ ಕಂಕಣ ಭಾಗ್ಯ ಕೂಡಿ ಬರುತ್ತದೆ ಎಂಬ ದೃಢವಾದ ನಂಬಿಕೆ ಇದೆ. ಹೀಗಾಗಿ ಈ ಕ್ಷೇತ್ರಕ್ಕೆ ಬಹಳಷ್ಟು ಹೆಣ್ಣು ಮಕ್ಕಳು ಬಂದು ತಾಳಿಕಟ್ಟಿ ಹರಕೆಯನ್ನು ಸಲ್ಲಿಸುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top