ಮನೋರಂಜನೆ

ನಿರ್ಮಾಪಕಿಯಾದ ಶಿವರಾಜಕುಮಾರ್ ಪುತ್ರಿ ನಿವೇದಿತಾ.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಶಿವರಾಜ್ ಕುಮಾರ್ ಅವರ ‘ಅಂಡಮಾನ್’ ಎಂಬ ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದ ಶಿವರಾಜ್ ಕುಮಾರ್ ಅವರ ಕಿರಿಯ ಪುತ್ರಿ ನಿವೇದಿತಾ ಈಗ ನಿರ್ಮಾಪಕಿಯಾಗಿ ಬ್ಯುಸಿಯಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವೆಬ್‌ ಸೀರಿಸ್‌ ಅನ್ನೋದು ಒಂದು ರೀತಿಯ ಟ್ರೆಂಡ್ ಆಗಿ ಪರಿಣಮಿಸಿದೆ.. ಈಗಷ್ಟೇ ಆಕ್ಟಿಂಗ್ ಕಲಿಯೋದಕ್ಕೆ ಶುರುವಿಟ್ಟಿರುವವರಿಂದ ಹಿಡಿದು ಸಾಕಷ್ಟು ಖ್ಯಾತ ನಟ ನಟಿಯರು ಈಗ ವೆಬ್‌ಸೀರಿಸ್‌ನಲ್ಲಿ ಕಾಣಿಸಿಕೊಳ್ಳಲು ಹಾತೊರೆಯುತ್ತಿದ್ದಾರೆ ಆ ಸಾಲಿಗೆ ಶಿವರಾಜ್‌ಕುಮಾರ್‌ ಪುತ್ರಿ ಕೂಡ ಸಹ ಸೇರಿಕೊಂಡಿದ್ದಾರೆ. ..

 

 

ಅಷ್ಟಕ್ಕೂ ಶಿವಣ್ಣನ ಮಗಳು ವೆಬ್ ಸೀರಿಸ್ ಗಳಲ್ಲಿ ಅಭಿನಯಿಸುತ್ತಿಲ್ಲ ಬದಲಾಗಿ ನಿರ್ಮಾಣ ಮಾಡುತ್ತಿದ್ದಾರೆ.. ಇತ್ತೀಚೆಗೆ ಶ್ರೀಮುತ್ತು ಸಿನಿ ಸರ್ವೀಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಶಿವಣ್ಣ ಆರಂಭಿಸಿದ್ದರಲ್ಲಾ, ಆ ಸಂಸ್ಥೆ ಮೂಲಕ ನಿರ್ಮಾಣ ಕಾರ್ಯಗಳು ಆರಂಭವಾಗುತ್ತಿದ್ದು ಈ ಹಿಂದೆ ‘ಮಾನಸಸರೋವರ’ ಎಂಬ ಧಾರಾವಾಹಿಯನ್ನು ಪ್ರೊಡ್ಯೂಸ್ ಮಾಡಿದ್ದರು. ಈಗ ಅದೇ ಸಂಸ್ಥೆಯಿಂದ ವೆಬ್‌ಸೀರಿಸ್‌ನ್ನು ನಿರ್ಮಾಣ ಮುಂದಾಗಿದ್ದು ನಿವೇದಿತಾ ನಿರ್ಮಾಣದಲ್ಲಿ ತಯಾರಾಗಲಿರುವ ‘ಹೇಟ್ ಯು ರೋಮಿಯೋ’ ವೆಬ್ ಸೀರಿಸ್ ಬಗ್ಗೆ ಒಂದಷ್ಟು ಮಾಹಿತಿಗಳು ಬಹಿರಂಗವಾಗಿವೆ.

ಆರ್ ಜೆ ಪ್ರದೀಪ್ ಅವರ ಸಖತ್ ಸ್ಟುಡಿಯೋ ಮತ್ತು ಶಿವಣ್ಣನ ಶ್ರೀಮುತ್ತು ಪ್ರೊಡಕ್ಷನ್ಸ್ ಎರಡೂ ಸೇರಿ ‘ಹೇಟ್ ಯೂ ರೋಮಿಯೋ’ ವೆಬ್ ಸೀರಿಸ್ ಅನ್ನು ನಿರ್ಮಾಣ ಮಾಡುತ್ತಿದೆ. ಕಿರಿಕ್ ಪಾರ್ಟಿಯಲ್ಲಿ ಕಾಣಿಸಿಕೊಂಡಿರುವ ಅರವಿಂದ್ ಅಯ್ಯರ್ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದು ಅವರಿಗೆ ದಿಶಾ ಮದನ್ ಸಾಥ್ ಕೊಡಲಿದ್ದಾರೆ. ‘ಹೇಟ್ ಯು ರೋಮಿಯೋ’ ವೆಬ್ ಸೀರೀಸ್’ನ ಶೇ. 90 ರಷ್ಡು ಚಿತ್ರೀಕರಣ ಭಾಗ ವಿಯೆಟ್ನಾಂನಲ್ಲಿ ನಡೆಯಲಿದೆ. ಶಿವಣ್ಣನ ಪುತ್ರಿಯೇ ಈ ವೆಬ್ ಸೀರೀಸ್ ನ ಪ್ರೊಡ್ಯೂಸರ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top