ಮನೋರಂಜನೆ

ವೆಬ್ ಸೀರಿಸ್ ನಲ್ಲಿ ನಟಿಸಲಿರುವ ಕನ್ನಡದ ಮೊದಲ ಸೂಪರ್ ಸ್ಟಾರ್.

ಇತ್ತೀಚಿಗೆ ವೆಬ್‌ ಸೀರಿಸ್‌ ಎಂಬುದು ಒಂದು ರೀತಿಯ ಟ್ರೆಂಡ್ ಆಗಿ ಬದಲಾಗಿದೆ.. ಈಗಷ್ಟೇ ಆಕ್ಟಿಂಗ್ ಕಲಿಯೋದಕ್ಕೆ ಶುರುವಿಟ್ಟಿರುವವರಿಂದ ಹಿಡಿದು ಸಾಕಷ್ಟು ಖ್ಯಾತ ನಟ ನಟಿಯರು ವೆಬ್‌ಸೀರಿಸ್‌ನಲ್ಲಿ ಕಾಣಿಸಿಕೊಳ್ಳಲು ಹಾತೊರೆಯುತ್ತಿದ್ದಾರೆ. ಇತ್ತೀಚಿಗಷ್ಟೇ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಅವರು ‘ಹೇಟ್ ಯೂ ರೋಮಿಯೋ’ ಎಂಬ ವೆಬ್ ಸೀರಿಸ್ ಒಂದನ್ನು ನಿರ್ಮಾಣ ಮಾಡಲು ಮುಂದಾಗಿದ್ದರು. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಒಂದು ಹೆಜ್ಜೆ ಮುಂದುಹೋಗಿದ್ದು ವೆಬ್ ಸರಣಿಯೊಂದರಲ್ಲಿ ನಟಿಸಲಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ಉಪೇಂದ್ರ ಈಗ ವೆಬ್ ಸೀರಿಸ್ ಗಳ ಕಡೆ ಕೂಡ ಮುಖ ಮಾಡಿದ್ದು ಅದರ ಟ್ರೆಂಡ್ ಮುಂದುವರೆಯುತ್ತಿದೆ.

ಬಿಗ್ ಬಾಸ್ ಖ್ಯಾತಿಯ ವಿನಾಯಕ್‌ ಜೋಷಿ ಅವರು ‘ಜೋಷಿಲೆ’ ಎಂಬ ವೆಬ್‌ ಸೀರಿಸ್‌ ಒಂದನ್ನ ಮಾಡುವುತ್ತಿರುವುದಾಗಿ ಹೇಳಿಕೊಂಡಿದ್ದಾರಲ್ಲಾ ಅದರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕೂಡ ಅಭಿನಯ ಮಾಡ್ತಿದ್ದಾರೆ. ಈ ಮೂಲಕ ವೆಬ್‌ ಸೀರಿಸ್‌ನಲ್ಲಿ ನಟಿಸಿದ ಮೊದಲ ಕನ್ನಡದ ಸೂಪರ್ ಸ್ಟಾರ್ ಅನ್ನೋ ಹೆಗ್ಗಳಿಕೆಗೆ ಉಪೇಂದ್ರ ಪಾತ್ರವಾಗಲಿದ್ದಾರೆ. ಸಿನಿಮಾ ಮತ್ತು ನಾಟಕಗಳಲ್ಲಿ ಹಾಗೂ ರಿಯಾಲಿಟಿ ಶೋಗಳ ಮುಖಾಂತರ ಜನರ ಮುಂದೆ ಬಂದಿದ್ದ ವಿನಾಯಕ ಜೋಷಿ ಈಗ ಜೋಶಿಲೆ ವೆಬ್ ಸರಣಿಯ ನಿರ್ಮಾಣದ ಮೂಲಕ ಜನರ ಬಳಿ ಬರುತ್ತಿದ್ದಾರೆ.

ಅಂದಹಾಗೆ ‘ಜೋಷಿಲೆ’ ವೆಬ್​​ ಸೀರಿಸ್​​ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲವಾದರೂ ಇದೇ ಆಗಷ್ಟ್​​ 25ರಂದು ಪತ್ರಿಕಾಗೋಷ್ಠಿ ಮತ್ತು ಪ್ರೀಮಿಯರ್​​ ಶೋನ ಏರ್ಪಿಡಿಸಿ ‘ಜೋಷಿಲೆ’ ಸರಣಿ ಚಿತ್ರದ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದಾರಂತೆ. ಅಂದೇ ರಿಯಲ್ ಸ್ಟಾರ್ ಉಪೇಂದ್ರ ಯಾವ ರೀತಿಯ ಪಾತ್ರವನ್ನು ಮಾಡಲಿದ್ದಾರೆ ಎಂಬ ವಿವರಗಳನ್ನು ನೀಡಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top