ಮನೋರಂಜನೆ

ರಾತ್ರೋ ರಾತ್ರಿ ಸೂಪರ್ ಸ್ಟಾರ್ ಹೀರೋಯಿನ್ ಆದ ಈ ಹಳ್ಳಿ ಹುಡುಗಿಯ ಬಗ್ಗೆ ನಿಮಗೆಷ್ಟು ಗೊತ್ತು?

ಅವಕಾಶ ಮತ್ತು ಅದೃಷ್ಟ ಎನ್ನುವುದು ಕೈ ಹಿಡಿದರೆ ರಾತ್ರಿ-ಬೆಳಗಾಗುವುದರೊಳಗೆ ಜನಪ್ರಿಯವಾಗಬಹುದು ಎನ್ನುವುದಕ್ಕೆ ನಟಿ ರಿಂಕು ಒಂದು ಅದ್ಭುತ ಉದಾಹರಣೆ. ರಿಂಕೂ ಎಂಬ ಹೆಸರು ಕೇಳಿದ ಮಾತ್ರಕ್ಕೆ ಏಕೆ ಯಾರು ಅಂತ ಗೊತ್ತಾಗಲಿಲ್ಲ ಅಂದ್ರೆ ಒಮ್ಮೆ ಮರಾಠಿಯ ಸೂಪರ್ ಹಿಟ್ ಸಿನಿಮಾ ‘ಸೈರಾಟ್’ಅನ್ನು ನೆನಪು ಮಾಡ್ಕೊಳಿ.. ಕಳೆದ ವರ್ಷದ ತೆರೆಗೆ ಬಂದಿದ್ದ ಈ ಸಿನಿಮಾ ಮೂರು ಕೋಟಿ ಬಜೆಟ್ ನಲ್ಲಿ ತಯಾರಾಗಿ ನೂರಾ ಇಪ್ಪತ್ತು ಕೋಟಿಗೂ ಹೆಚ್ಚು ಹಣ ಸಮಪಡಿಸಿಕೊಂಡಿತ್ತು. ಈ ಚಿತ್ರದಲ್ಲಿ ನಾಯಕಿಯಾಗಿ ಪ್ರತ್ಯಕ್ಷವಾಗಿದ್ದವಳೇ ‘ರಿಂಕೂ’.

 

 

ಮೊದಲ ಸಿನಿಮಾದಲ್ಲೇ ಹತ್ತಾರು ಸಿನಿಮಾಗಳಲ್ಲಿ ನಟಿಯರನ್ನೂ ನಿವಾಳಿಸಿ ಬಿಸಾಕುವ ರೇಂಜಿಗೆ ನಟಿಸಿ ಪಡ್ಡೆ ಹುಡುಗರ ಎದೆಯಲ್ಲಿ ಕಚಗುಳಿಯಿಟ್ಟ ಹದಿಹರೆಯದ ಚೆಲುವೆ ‘ರಿಂಕೂ’. ಆ ಸಿನಿಮಾ ಮಾಡಿದ್ದಾಗ ಆಕೆಗಿನ್ನೂ ಹದಿನೈದು ವರ್ಷ ವಯಸ್ಸಾಗಿತ್ತು ಅಷ್ಟೇ, ಆದರೆ ಆಕೆಯ ನಟನೆ ಪ್ರಭುದ್ದತೆ ಎಂತವರನ್ನೂ ತಲೆಬಾಗುವಂತೆ ಮಾಡಿತ್ತು. ಅದಕ್ಕೆ ಇರಬೇಕು ಆ ಸಿನಿಮಾಗೆ ‘ರಿಂಕೂ’ ರಾಷ್ಟ್ರ ಪ್ರಶಸ್ತಿಯನ್ನು ಒಳಗೊಂಡಂತೆ ನಾನಾ ಅವಾರ್ಡುಗಳನ್ನು ಬಾಚಿಕೊಂಡಿದ್ದು. ಒಬ್ಬ ನಟಿಗೆ ಇರಬೇಕಾದ ಅಂದ ಚೆಂದ, ನಟನಾ ಕೌಶಲ್ಯ ಎಲ್ಲವೂ ಹೆಚ್ಚಾಗಿಯೇ ಇರುವ ಈ ಹಳ್ಳಿ ಹುಡುಗಿ ‘ರಿಂಕೂ’ ಬಗೆಗಿನ ಒಂದಷ್ಟು ಮಾಹಿತಿಗಳು ನಿಮಗಾಗಿ ಇಲ್ಲಿವೆ.

ಮಹಾರಾಷ್ಟ್ರದ ಅಕ್ಲುಜ್ ಎಂಬ ಗ್ರಾಮದಲ್ಲಿ ಹುಟ್ಟಿ ಬೆಳೆದ ಈಕೆಯ ಪೂರ್ತಿ ಹೆಸರು ರಿಂಕೂ ರಾಜಗುರು.. ಚಿಕ್ಕಂದಿನಿಂದಲೂ ಓದಿಗಿಂತ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೇ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದ ಈಕೆ ಮುಂದೊಂದು ದಿನ ಸಿನಿಮಾದಲ್ಲಿ ನಟಿಸಬೇಕು ಎಂದು ಕನಸು ಕಂಡಿದ್ದವಳು.. ತನ್ನ ಊರಿನ ಸರ್ಕಾರೀ ಶಾಲೆಯಲ್ಲಿಯೇ ವ್ಯಾಸಂಗ ಮಾಡಿದ್ದ ರಿಂಕೂ ತಾನು ಹೈಸ್ಕೂಲ್ ವ್ಯಾಸಂಗ ಮಾಡುತ್ತಿದ್ದಾಗ ಅದೃಷ್ಟವಶಾತ್ ಸೈರಾಟ್ ಸಿನಿಮಾ ನಿರ್ದೇಶಕ ಈಕೆಯ ಆಡಿಷನ್ ನೋಡಿ, ಕ್ಲೀನ್ ಬೋಲ್ಡ್ ಆಗಿ ಆಯ್ಕೆ ಮಾಡಿಕೊಂಡಿದ್ದರಂತೆ. ನಂತ್ರ ನಡೆದಿದ್ದೆಲ್ಲಾ ಇತಿಹಾಸ. ಚಿತ್ರಕ್ಕೆ ಆಯ್ಕೆಯಾಗಿದ್ದಾಗ ಆಕೆ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು, ಈ ಸಿನೆಮಾದಲ್ಲಿ ಅವಳು ‘ಆಚಿ’ ಎನ್ನುವ ಓರ್ವ ಹುಡುಗಿಯ ಪಾತ್ರವನ್ನು ಮಾಡಿದ್ದಳು. ಸಿನಿಮಾ ರಿಲೀಸ್ ಆಗಿ ಪಡೆದ ಅಭೂತ ಪೂರ್ವ ಯಶಸ್ಸು ಮತ್ತು ಈಕೆಗೆ ಸಿಕ್ಕಿರುವ ಸ್ಟಾರ್ ಡಮ್ ಕಂಡು ಎಷ್ಟೋ ಮಂದಿ ನಟಿಯರು ನೆಟಿಕೆ ಮುರಿದಿದ್ದೂ ಇದೆ.

ಮರಾಠಿಯಲ್ಲಿ ಭಾರೀ ಅಲೆಯನ್ನೇ ಸೃಷ್ಟಿಸಿ ಬಾಕ್ಸಾಫೀಸ್‌ನಲ್ಲಿಯೂ ಅಚ್ಚರಿಯ ದಾಖಲೆ ಮಾಡಿದ್ದ ಚಿತ್ರ ಸೈರಾಟ್. ಇದರೊಳಗಿನ ಸಹಜ ಸನ್ನಿವೇಶಗಳು, ಉತ್ಕಟವಾದ ಪ್ರೇಮ ಕಥೆಯನ್ನೊಳಗೊಂಡ ರೋಚಕ ನಿರೂಪಣೆ ದೇಶ ವಿದೇಶಗಳಲ್ಲಿಯೂ ಮನ ಗೆದ್ದಿತ್ತು. ನಂತರ ಈ ಚಿತ್ರ ಕನ್ನಡದಲ್ಲಿ ‘ಮನಸು ಮಲ್ಲಿಗೆ’ ಎಂಬ ಹೆಸರಿನಲ್ಲಿ ತೆರೆಕಂಡಿತ್ತು ಕನ್ನಡದಲ್ಲೂ ರಿಂಕೂ ಅವರೇ ನಾಯಕಿಯಾಗಿ ಅಭಿನಯಿಸಿದ್ದರು.

ಅಂದಹಾಗೆ ಈಕೆ ಕಳೆದ ವರ್ಷ ಹತ್ತನೇ ತರಗತಿಯ ಪರೀಕ್ಷೆಯನ್ನು ಬರೆದು ಉತ್ತೀರ್ಣವಾಗಿದ್ದು ಇದೀಗ ಆಕೆಯ ಮುಂದೆ ಸಾಕಷ್ಟು ಸಿನಿಮಾ ಆಫರ್ ಗಳು ಸಾಲುಗಟ್ಟಿ ನಿಂತಿವೆ.. ಒಬ್ಬ ಸಾದಾರಣ ಹಳ್ಳಿ ಹುಡುಗಿಯಾಗಿದ್ದ ಈಕೆಯ ಜೀವನ ಶೈಲಿ ಇದೀಗ ಸಂಪೂರ್ಣ ಬದಲಾಗಿದ್ದು ನಟಿಯಾಗಬೇಕು ಎನ್ನುವ ಆಕೆಯ ಕನಸು ಈಡೇರಿದ್ದಲ್ಲದೆ ಇಡೀ ದೇಶಾದ್ಯಂತ ಜನಪ್ರಿಯವಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top