ಫಾರ್ಮ್ ಹೌಸ್ ತುಂಬಾ ಕುದುರೆಗಳನ್ನ ಸಾಕಿಕೊಂಡು, ಹಸುಗಳ ಆರೈಕೆ ಮಾಡುತ್ತಾ ಪ್ರಾಣಿಪ್ರಿಯ ಅಂತಲೇ ಹೆಸರಾಗಿರುವವರು ಛಾಲೆಂಜಿಂಗ್ ಸ್ಟಾರ್ ದರ್ಶನ್. ಅವರಿಗೆ ಪ್ರಾಣಿಗಳ ಮೇಲೆ ಎಷ್ಟು ಪ್ರೀತಿ ಇದೆಯೋ ಅಷ್ಟೇ ಕ್ರೇಜ್ ಹೊಸಾ ಮಾಡೆಲ್ನ ಹೈಟೆಕ್ ಕಾರುಗಳ ಮೇಲೂ ಇದೆ. ದರ್ಶನ್ ಅವರ ಕಾರ್ ಕ್ರೇಜ್ನ ಬಗೆಗೂ ಹಲವಾರು ದಂತಕಥೆಗಳೇ ಇವೆ. ದರ್ಶನ್ ವರ್ಷದ ಹಿಂದಷ್ಟೇ ಆಡಿ ಆರ್-8 ಎಂಬ ಹೊಚ್ಚ ಹೊಸಾ ಕಾರನ್ನು ಖರೀದಿಸೋ ಮೂಲಕ ಕ್ರೇಜ್ ಹುಟ್ಟು ಹಾಕಿದ್ದರು. ಇತ್ತೀಚಿಗೆ ಇಡೀ ಭಾರತದಲ್ಲಿ ಕೆಲವೇ ಜನರ ಬಳಿಯಿರುವ ಲ್ಯಾಂಬೊರ್ಗಿನಿ ಕಾರನ್ನು ಖರೀಧಿಸಿ ಎಲ್ಲರು ಬೆರಗಾಗುವಂತೆ ಮಾಡಿದ್ದರು.
ದರ್ಶನ್ ತಮ್ಮ ಮೆಚ್ಚಿನ ಲ್ಯಾಂಬೋರ್ಗಿನಿ ಕಾರಿನಲ್ಲಿ ಜಾಲಿ ರೈಡ್ ಹೋಗಿದ್ದಾರೆ. ಈ ವಿಡಿಯೋವನ್ನು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ದರ್ಶನ್ ಕಾರಿನಲ್ಲಿ ಹೋಗುತ್ತಿದ್ದರೆ ರಸ್ತೆಯಲ್ಲಿದ್ದ ಜನರು ಕಾರನ್ನೇ ನೋಡುತ್ತಾ ಫೋಟೋ, ವಿಡಿಯೋ ಮಾಡಿಕೊಂಡಿದ್ದಾರೆ.. ರಸ್ತೆಯಲ್ಲಿ ಲ್ಯಾಂಬೊರ್ಗಿನಿ ಕಾರು ಹೋಗುತ್ತಿವುದನ್ನು ಕಂಡ ಜನರು ಇದು ದರ್ಶನ್ ಕಾರು ಎಂದು ಗುರುತು ಹಿಡಿದು ಫೋಟೋ, ಮತ್ತು ವಿಡಿಯೋಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಈ ನಡುವೆ ಟ್ರಾಫಿಕ್ ಪೊಲೀಸರು ದರ್ಶನ್ ಪಯಣಿಸುತ್ತಿದ್ದ ಲ್ಯಾಂಬೊರ್ಗಿನಿ ತಡೆಹಿಡಿದಿದ್ದಾರೆ. ಪೊಲೀಸರು ದರ್ಶನ್ ಅವರ ಬಳಿ ಡಾಕ್ಯೂಮೆಂಟ್ಸ್ ಇಲ್ವಾ ಅಂತ ಅನ್ಕೋಬೇಡಿ ಡಿ ಬಾಸ್ ಹತ್ರ ಕಾರಿಗೆ ಸಂಭಂದಿಸಿದಂತೆ ಎಲ್ಲಾ ದಾಖಲೆಗಳು ಸರಿಯಾಗಿಯೇ ಇವೆ. ಅಷ್ಟಕ್ಕೂ ಪೊಲೀಸರು ಯಾವುದೇ ದಾಖಲೆಗಳನ್ನು ಪರಿಶೀಲನೆ ಮಾಡುವುದಕ್ಕಾಗಿ ತಡೆಗಟ್ಟಲಿಲ್ಲ. ಅವರು ತಡೆಗಟ್ಟಲು ಇದ್ದ ಕಾರಣವೇ ಬೇರೆ! ಅದು ಏನು ಅಂತೀರಾ? ಮುಂದೆ ಓದಿ.
ಲ್ಯಾಂಬೊರ್ಗಿನಿ ಕಾರು ರಸ್ತೆಯಲ್ಲಿ ಬರುತ್ತಿದ್ದಂತೆ ಇದು ದರ್ಶನ್ ಅವರ ಕಾರ್ ಎಂದು ಸುಲಭವಾಗಿ ಗುರುತು ಹಿಡಿದ ಪೊಲೀಸರು ಅವರ ಜೊತೆ ಒಂದು ಫೋಟೋವನ್ನು ಕ್ಲಿಕ್ಕಿಸಿಕೊಳ್ಳಲು ಅವರ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಅಪರೂಪದ ಹೊಸ ಐಷಾರಾಮಿ ಕಾರಿನ ಜೊತೆ ದರ್ಶನ್ ಅವರೊಟ್ಟಿಗೆ ಫೋಟೋ ತೆಗೆಸಿಕೊಳ್ಳುವ ಆಸರೆಯಿಂದ ಕಾರನ್ನು ನಿಲ್ಲಿಸಿ ತಮ್ಮ ಆಸೆಯನ್ನು ಪೂರೈಸಿಕೊಂಡಿದ್ದಾರೆ.
ಬಾಸ್ ಆಫ್ ಸ್ಯಾಂಡಲ್ ವುಡ್ ಚಾಲೆಂಜಿಂಗ್ 🌟 @dasadarshan ಬಾಸ್ ರವರ @Lamborghini ಕಾರ್ ಕಂಡ ಕ್ಷಣ ನಡು ರಸ್ತೆಯಲ್ಲೇ ಈ ಯುಗದ ಬಂಗಾರದ ಮನುಷ್ಯನ ಜೊತೆ ಸೆಲ್ಫಿ ಗಿಟ್ಟಿಸಿಕೊಂಡ ಟ್ರಾಫಿಕ್ ಪೊಲೀಸ್ ನವರು 👌👌@vijayaananth2 @Dcompany171 @thoogudeepateam @Kkbdfa @sharadasrinidhi @DTSOYOfficial @DharmaKirthiraj pic.twitter.com/2CsFtWU20q
— CHALLENGING ‘D’ TEAM – ® (@DTEAM7999) August 11, 2018
ನಟರನೇಕರಿಗೆ ದರ್ಶನ್ ಅವರಿಗಿರುವಂಥಾದ್ದೇ ಕಾರಿನ ಕ್ರೇಜ್ ಇರುತ್ತೆ. ಬಾಲಿವುಡ್ ನಟರಿಗಂತೂ ಇಂಥಾ ಕ್ರೇಜ್ ತುಸು ಹೆಚ್ಚೇ ಇರುತ್ತೆ. ಅಚ್ಚರಿಯ ಸಂಗತಿಯೆಂದರೆ, ಬಾಲಿವುಡ್ ನಟರ ಬಳಿಯೂ ಲ್ಯಾಂಬೊರ್ಗಿನಿ ಕಾರಿಲ್ಲ. ಬಾಲಿವುಡ್ಡೇ ಯಾಕೆ? ಬೇರೆ ಯಾವ ಭಾಷೆಗಳ ನಟರಲ್ಲಿಯೂ ಈ ಕಾರಿಲ್ಲ. ಈ ಮೂಲಕ ಈ ದುಬಾರಿ ಕಾರು ಖರೀದಿಸಿರೋ ಭಾರತದ ಏಕೈಕ ನಟನಾಗಿಯೂ ದರ್ಶನ್ ಹೊರ ಹೊಮ್ಮಿದ್ದಾರೆ!
ಭಾರತದಲ್ಲಿ ಕೆಲವೇ ಕೆಲ ಮಂದಿಯ ಬಳಿ ಮಾತ್ರವೇ ಇರುವ ದುಬಾರಿ ಕಾರುಗಳನ್ನು ಖರೀದಿಸೋದು ದರ್ಶನ್ ಅವರಿಗಿರುವ ಪ್ರಧಾನ ಆಸಕ್ತಿ. ಇತ್ತೀಚೆಗಷ್ಟೇ ಹತ್ತು ಕೋಟಿ ಮೊತ್ತದ ಲ್ಯಾಂಬೊರ್ಗಿನಿ ಕಾರನ್ನು ದರ್ಶನ್ ಖರೀದಿಸಿದ್ದ ವಿಚಾರ ಭಾರೀ ಸುದ್ದಿ ಮಾಡಿತ್ತು. ಅದರಲ್ಲಿ ಮಾಮೂಲಿನಂತೆ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಗೆ ದರ್ಶನ್ ಅವರೇ ಸ್ವತಃ ಹೋಗಿಬಂದಿದ್ದರು. ಲ್ಯಾಂಬೋರ್ಗಿನಿ ಸದ್ಯ ದರ್ಶನ್ ಅವರ ಕಾರಿನ ಸಾಮ್ರಾಜ್ಯದಲ್ಲಿ ಹಾಯಾಗಿದೆ!
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
