ಸಮಾಚಾರ

ಕನ್ನಡಿಗ ಅನಿಲ್ ಕುಂಬ್ಳೆ ದಾಖಲೆಯನ್ನೇ ಅಳಿಸಿಹಾಕಿದ ಇಂಗ್ಲೆಂಡಿನ ಜೇಮ್ಸ್ ಆಂಡರ್​ಸನ್​.

ಕ್ರಿಕೆಟ್ ಕಾಶಿ ಎಂದೇ ಕರೆಸಿಕೊಳ್ಳುವ ಇಂಗ್ಲೆಂಡಿನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ಮತ್ತು ಭಾರತ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಸ್ಪಿನ್ ಮಾಂತ್ರಿಕ ಕನ್ನಡಿಗ ಅನಿಲ್​ ಕುಂಬ್ಳೆ ಅವರ ಅಪರೂಪದ ದಾಖಲೆಯೊಂದು ಮುರಿದು ಬಿದ್ದಿದೆ.

ಕೇವಲ 20 ರನ್ ನೀಡಿ 5 ವಿಕೆಟ್ ಪಡೆದು ಭಾರತ ತಂಡದ ಮೇಲೆ ಸವಾರಿ ನಡೆಸಿದ ಇಂಗ್ಲೆಂಡ್​ನ ಫಾಸ್ಟ್ ಬೌಲರ್ ಜೇಮ್ಸ್​ ಆಂಡರ್​ಸನ್ ಅವರು ತವರು ನೆಲದಲ್ಲಿ ಒಟ್ಟು 355 ವಿಕೆಟ್​ ಕಬಳಿಸುವ ಮೂಲಕ ತವರು ದೇಶದಲ್ಲಿ ಇಲ್ಲಿಯವರೆಗೂ ಕುಂಬ್ಳೆ ಅವರ ಹೆಸರಿನಲ್ಲಿದ್ದ ಈ ದಾಖಲೆಯನ್ನು ಅಂಡರ್ಸ್ಯಾನ್ ಅಳಿಸಿಹಾಕಿದ್ದಾರೆ. ಅಲ್ಲದೆ ತಮ್ಮ ವೃತ್ತಿ ಬದುಕಿನ 550ನೇ ವಿಕೆಟ್ ಅನ್ನು ಕೂಡ ಇದೆ ಪಂದ್ಯದಲ್ಲಿ ಜೇಮ್ಸ್ ಆಂಡರ್ ಸನ್ ಗಳಿಸಿಕೊಂಡಿದ್ದಾರೆ.

ಅಂದಹಾಗೆ ಅನಿಲ್ ಕುಂಬ್ಳೆ ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯಗಳಿಂದ ಒಟ್ಟಾರೆ 350ವಿಕೆಟ್​ಗಳನ್ನು ಕಬಳಿಸಿ ಇದುವರೆಗೂ ಈ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದರು. ಶ್ರೀಲಂಕಾದ ಆಫ್ ಸ್ಪಿನ್ನರ್​ ಮುತ್ತಯ್ಯ ಮುರಳಿಧರನ್​ ಅವರು ಶ್ರೀಲಂಕಾದ ನೆಲದಲ್ಲಿ ಒಟ್ಟಾರೆ 493 ವಿಕೆಟ್​ಗಳನ್ನು ಪಡೆಯುವ ಮೂಲಕ ತವರು ನೆಲದಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್’ಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top