ಸಮಾಚಾರ

ಕೊನೆಗೂ ತನ್ನ ಎರಡನೇ ಮದುವೆಯ ಗುಟ್ಟು ರಟ್ಟು ಮಾಡಿದ ಆಮೀರ್

ಬಾಲಿವುಡ್ ನಟ ಅಮಿರ್ ಖಾನ್ ಯಾರಿಗೆ ಗೊತ್ತಿಲ್ಲ ಹೇಳಿ ತಮ್ಮ ಅಮೋಘ ಅಭಿನಯದ ಮೂಲಕ ಸಿನಿರಸಿಕರ ಮನಸಿನಲ್ಲಿ ಮನೆಮಾಡಿದ್ದಾರೆ. ಆದರೆ ಅಮಿರ್ ಖಾನ್ ತಮ್ಮ ವೈಯಕ್ತಿಕ ಜೀವನದಲ್ಲಿ ಏರುಪೇರು ಕಂಡಿದ್ದಾರೆ. 1986ರಲ್ಲಿ ಅಮೀರ್ ರೀನಾ ದತ್ ಅವರನ್ನು ಮದುವೆ ಆಗಿದ್ದರು. ಆದರೆ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ವಿಚ್ಛೇದನ ಪಡೆದರು ಎಂದು ತಿಳಿದು ಬಂದಿದೆ. ಇವರಿಗೆ ಜುನೈದ್ ಮತ್ತು ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ, 2002 ರಲ್ಲಿ ವಿಚ್ಛೇದನ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿತು.

ಈಗ ಅಮಿರ್ ಖಾನ್ ಅವರು ಎರಡನೇ ಪತ್ನಿ ಕಿರಣ್ ಜೊತೆ ಪ್ರೀತಿಗೆ ಬಿದ್ದ ಕತೆಯನ್ನು ಬಿಚ್ಚಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚಿಗೆ ಚೀನಾ ದೇಶಕ್ಕೆ ಭೇಟಿ ನೀಡಿದ ಅವರು ಕಿರಣ್ ರಾವ್ ತಮ್ಮ ಜೀವನದಲ್ಲಿ ಬಂದಿದ್ದು ಹೇಗೆ ಅನ್ನೋ ವಿಚಾರವನ್ನು ಯಾವುದೇ ಮುಚ್ಚುಮರೆ ಇಲ್ಲದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

 

 

ಕಿರಣ್ ರಾವ್ ಅವರು ಅಮಿರ್ ಖಾನ ಅಭಿನಯದ ಲಗನ್ ಸಿನಿಮಾದಲ್ಲಿ ಸಹನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದರು. ಆಗ ನಾವಿಬ್ಬರು ತುಂಬಾ ದೊಡ್ಡ ಸ್ನೇಹಿತರೇನು ಅಲ್ಲ. ಅವರು ಚಿತ್ರೀಕರಣ ಸೆಟ್ ನಲ್ಲಿ ಒಬ್ಬರಾಗಿದ್ದರು ಅಷ್ಟೇ. ಆದರೆ, ನಾನು ಮತ್ತು ರೀನಾ ದೂರವಾಗಿ ತುಂಬಾ ದಿನಗಳಾದ ಬಳಿಕ ಕಿರಣ್ ಮತ್ತು ನಾನು ಭೇಟಿಯಾದೆವು. ಹೀಗೆ ಶುರುವಾದ ಪರಿಚಯ ಇನ್ನಷ್ಟು ಗಾಢವಾಯ್ತು ಆ ಬಳಿಕ ಆಮೀರ್ ಮೊದಲ ಪತ್ನಿ ರೀನಾ ದತ್ ಅವರಿಂದ ವಿಚ್ಚೇದನ ಪಡೆದ ನಂತರದಲ್ಲಿ ಆಮೀರ್, ಕಿರಣ್ ರಾವ್ ಅವರನ್ನ ಭೇಟಿ ಮಾಡಿದರು.

ಆಮೇಲೆ ಇಬ್ಬರು ಫೋನ್ ನಲ್ಲಿ ಮಾತನಾಡುತ್ತಿದ್ದರು. ಅಮಿರ್ ಆಗತಾನೆ ವಿಚ್ಛೇದನ ಪಡೆದಿದ್ದರು. ಇದರಿಂದ ಅವರ ಜೀವನದಲ್ಲಿ ಒಂಟಿತನ ಕಾಡುತ್ತಿತ್ತು. ಇಬ್ಬರು ದಿನಾಲೂ ಫೋನ್ ನಲ್ಲಿ ಮಾತನಾಡುತ್ತ ಬಳಿಕ ಡೇಟಿಂಗ್ ಮಾಡಲು ಶುರು ಮಾಡಿದರು ಬಳಿಕ 2005 ರಲ್ಲಿ ಮದುವೆ ಆದರು ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top