ಮನೋರಂಜನೆ

‘ದಿ ವಿಲನ್’ ಸಿನಿಮಾ ಕುರಿತಾಗಿ ಕನ್ನಡಿಗರಲ್ಲಿ ವಿಶೇಷ ಮನವಿ ಮಾಡಿಕೊಂಡ ಜಗ್ಗೇಶ್.

‘ದಿ ವಿಲನ್’ ಸದ್ಯ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಹವಾ ಎಬ್ಬಿಸಿರೋ ಸಿನಿಮಾ., ಆರು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿರುವ ಪ್ರೇಮ್ ‘ದಿ ವಿಲನ್’ ಸಿನಿಮಾ ಮೇಲಿನ ನಿರೀಕ್ಷೆಯನ್ನು ದಿನೇ ದಿನೇ ದಿನೇ ದಿನೇ ಹೆಚ್ಚಿಸುತ್ತಲೇ ಇದ್ದಾರೆ.. ಈಗಾಗಲೇ ಬಿಡುಗಡೆಯಾಗಿರೋ ಟೀಸರ್ ಮತ್ತು ಹಾಡುಗಳ ಅಬ್ಬರ ಕಂಡು ಅನೇಕರು ಬೆಚ್ಚಿಬಿದ್ದಿದ್ದಾರೆ.. ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುವ ವಿಲನ್ ಚಿತ್ರಕ್ಕಾಗಿ ಅಭಿಮಾನಿಗಳು ಕಾದು ಕಾದು ಸುಸ್ತೇದ್ದಿದ್ದಾರೆ.. ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗದ ಸೆಲೆಬ್ರೆಟಿಗಳು ಕೂಡ ಚಿತ್ರದ ಬಗ್ಗೆ ತಲೆಕೆಡಿಸಿಕೊಂಡು ಕೂತಿದ್ದಾರೆ..

ಇದೀಗ ಇಂಥಾ ಮಹತ್ವಾಕಾಂಕ್ಷೆಯ ಸಿನಿಮಾವಾಗಿರುವ ದಿ ವಿಲನ್ ಕುರಿತು ನವರಸನಾಯಕ ಕನ್ನಡಿಗರಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.. ಇದೇ ಭಾನುವಾರ ನಡೆಯುತ್ತಿರುವ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಶುಭಕೋರಿ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರೋ ಜಗ್ಗೇಶ್ ಈ ಕೆಳಗಿನಂತೆ ಬರೆದುಕೊಂಡಿದ್ದಾರೆ.
“ನನ್ನ ಮೂವರು ಸಹೋದರರು #ಕಿಚ್ಚಸುದೀಪ #ಶಿವರಾಜಕುಮಾರ #ಜೋಗಿಪ್ರೇಮ್ ಸೇರಿ ಕನ್ನಡ ಚಿತ್ರರಂಗಕ್ಕೆ ಅದ್ದೂರಿ ಚಿತ್ರ #ವಿಲನ್ ತಯಾರಿಸಿ ಭಾರತೀಯ ಚಿತ್ರರಂಗ ಕರ್ನಾಟಕದ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ..ಕನ್ನಡಿಗರು ಒಮ್ಮತದಿಂದ ಹುಗೆ ಎಂದು ಹಾರೈಸಿ ಹರಸಿ.. ಭಾನುವಾರದ ದ್ವನಿಸುರಳಿ ಬಿಡುಗಡೆಗೆ ನನ್ನ ಶುಭಹಾರೈಕೆ..ಧೂಳ್ ಎಬ್ಬಿಸಿ ಸಹೋದರರೆ..”

 

 

ದಿ ಚಿತ್ರದ ಆಡಿಯೋ ಆಗಸ್ಟ್ 19ರಂದು ಭಾನುವಾರ ಬೆಂಗಳೂರಿನ ಹೆಬ್ಬಾಳ ಬಳಿಯ ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ‘ವೈಟ್ ಆರ್ಕೆಡ್’ನಲ್ಲಿ ಭಾನುವಾರ ಸಂಜೆ 6 ಗಂಟೆಗೆ ನಡೆಯಲಿರೋ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ. ಉಳಿದಂತೆ ಸೆಪ್ಟೆಂಬರ್ 13ರಂದು ಗೌರಿಗಣೇಶ ಹಬ್ಬದ ಪ್ರಯುಕ್ತ ಚಿತ್ರ ತೆರೆಕಾಣುವ ಸಾಧ್ಯತೆಯಿದೆ ಎನ್ನಲಾಗಿದೆ. ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಾಗಿ ತೆರೆ ಹಂಚಿಕೊಂಡಿರುವುದರಿಂದ ಚಿತ್ರದ ಸೌಂಡು ಗಗನ ಮುಟ್ಟುತ್ತಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top