ಮನೋರಂಜನೆ

ನಟ ಜೈಜಗದೀಶ್‌ ಕಾರು ಅಪಘಾತ- ತಲೆ, ಮುಖಕ್ಕೆ ತೀವ್ರ ಗಾಯ.

ಕನ್ನಡ ಚಿತ್ರರಂಗದ ಖ್ಯಾತ ನಟ ಜೈಜಗದೀಶ್​ ಅವರು ಕಾರು ಅಪಘಾತಕ್ಕೆ ತುತ್ತಾಗಿದ್ದು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯ ಕಂಟಕದಿಂದ ಬಚಾವಾಗಿದ್ದಾರೆ.. ಅಪಘಾತದಲ್ಲಿ ಜೈಜಗದೀಶ್ ಅವರಿಗೆ ಜಾಸ್ತಿ ಜಾಸ್ತಿ ಪೆಟ್ಟು ಬಿದ್ದಿದ್ದರೂ ಪ್ರಾಣಾಪಾಯವಾಗುವಂತ ಗಂಭೀರ ಗಾಯಗಳು ಸಂಭವಿಸಿಲ್ಲ. ಹಾಗಾಗಿ ಅವರು ಸ್ನೇಹಿತರು ಮತ್ತು ಹೈತೈಷಿಗಳು ಒಂದು ರೀತಿಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಹತ್ತಿರದ ನ್ಯಾಷನಲ್ ಹೈವೇಯಲ್ಲಿ ಈ ದುರ್ಘಟನೆ ಸಂಭವಿಸಿದ್ದು ಜೈಜಗದೀಶ್ ಅವರನ್ನು ನಗರದ ಜನಪ್ರಿಯ ಆಸ್ಪತ್ರೆಗೆ ಸೇರಿಸಲಾಗಿದೆ. ಸೋಮವಾರಪೇಟೆಯಿಂದ ಬೆಂಗಳೂರಿಗೆ ಹೊರಟಿದ್ದ ಜೈಜಗದೀಶ್ ತಾವೇ ಸ್ವತಃ ಕಾರು ಡ್ರೈವ್ ಮಾಡಿಕೊಂಡು ಬರುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.

ಜೈಜಗದೀಶ್ ಅವರ ಕಾರು ಮತ್ತು ವ್ಯಕ್ತಿಯೋರ್ವನ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು ಅಪಘಾತದಲ್ಲಿ ಜೈಜಗದೀಶ್ ಅವರ ತಲೆ ಮತ್ತು ಮುಖಕ್ಕೆ ಜಾಸ್ತಿ ಗಾಯವಾಗಿದೆ.. ಜೈಜಗದೀಶ್ ಕಾರು ಅತಿ ವೇಗದಲ್ಲಿತ್ತು. ಅದಕ್ಕಿಂತಲೂ ವೇಗವಾಗಿ ಬರುತ್ತಿದ್ದ ಬೈಕು ವಿರುದ್ಧ ದಿಕ್ಕಿನಿಂದ ಅಡ್ಡಾ ದಿಡ್ಡಿ ಬಂದು ಕಾರಿಗೆ ಡಿಕ್ಕಿ ಹೊಡೆದಿತ್ತು. ಆ ರಭಸಕ್ಕೆ ಇಬ್ಬರಿಗೂ ಗಾಯಗಳಾಗಿವೆ ಎಂದು ವರದಿಯಾಗಿದೆ. ಈ ಬಗ್ಗೆ ಖುದ್ದು ಜೈಜಗದೀಶ್ ಅವರೇ ಪ್ರತಿಕ್ರಿಯಿಸಿದ್ದು ತಮಗೆ ಯಾವ ರೀತಿಯ ಗಂಭೀರ ಗಾಯಗಳೇನು ಆಗಿಲ್ಲ ಎಂದು ಹೇಳಿ “ನಾನು ಚೆನ್ನಾಗಿದ್ದೇನೆ. ದಯವಿಟ್ಟು ಆಸ್ಪತ್ರೆಗೆ ಮಾಧ್ಯಮ ಮಿತ್ರರು ಬರಬೇಡಿ” ಎಂದು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಜೈಜಗದೀಶ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಸ್ಪತ್ರೆಗೆ ಮಾಧ್ಯಮದವರಿಗೆ ನಿರ್ಬಂಧ ಹೇರಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top