ಸಮಾಚಾರ

ಈಗ ಕಾಸ್ಟಿಂಗ್ ಕೌಚ್ ಆರೋಪ ಕುರಿತು ಉಲ್ಟಾ ಹೊಡೆದ ನಟಿ

ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಡುವ ಆಮಿಷವೊಡ್ಡಿ ನಟಿಯರನ್ನು ಮಂಚಕ್ಕೆ ಆಹ್ವಾನಿಸುವ ಕಾಯಿಲೆ ಎಲ್ಲ ಚಿತ್ರರಂಗಗಳಿಗೂ ಸಾಂಕ್ರಾಮಿಕವಾಗಿ ಹರಡಿರೋ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇಂಥ ಕಾಸ್ಟ್ ಕೌಚಿಂಗ್‌ನ ಸರಣಿ ಇದೀಗ ಎಲ್ಲೆಲ್ಲಿಯೋ ಬಿಚ್ಚಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ದೇಶವ್ಯಾಪಿ ಭಾರಿ ಚರ್ಚೆಯನ್ನು ಹುಟ್ಟುಹಾಕಿರುವ ಇಂತಹ ಅನಿಷ್ಟ ಪಿಡುಗಿನ ವಿರುದ್ಧ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಪ್ರಸಿದ್ಧ ಯುವ ನಟಿಯರನೇಕರು ತಾವೇ ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಡುತ್ತಿದ್ದಾರೆ.

 

 

 

ಕೆಲವು ದಿನಗಳ ಹಿಂದೆ ಡೈರೆಕ್ಟರ್ ಒಬ್ಬರ ಮೇಲೆ ಮೇಲೆ ಬಿಗ್​ಬಾಸ್​ ಖ್ಯಾತಿಯ ಜಯಶ್ರೀ ಅವರು ಕಾಸ್ಟಿಂಗ್​ಕೌಚ್​ ಆರೋಪ ಹೊರಸಿದ್ದರು. ಸಿನಿಮಾಗೆ ನನ್ನನ್ನೇ ಹೀರೋಯಿನ್ ಆಗಿ​ ಆಯ್ಕೆ ಮಾಡಿಕೊಂಡು ಆ ನಂತರ ತೆಗೆದುಬಿಟ್ರು. ಅದಕ್ಕೆ ಕಾರಣ ನನ್ನನ್ನು ಲಾಂಗ್​ ಡ್ರೈವ್​, ನೈಟ್​ ಪಾರ್ಟಿ ಅಂತಾ ಕರೆದಿದ್ರು, ನಾನು ಒಪ್ಪದೇ ಇದ್ದದ್ದಕ್ಕೆ ನನ್ನನ್ನು ಸಿನಿಮಾದಿಂದ ಕೈ ಬಿಡಲಾಗಿದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದರು. ಅಲ್ಲದೇ ಆ ನಿರ್ದೇಶಕರ ಮೇಲೆ ವಾಣಿಜ್ಯ ಮಂಡಳಿಗೆ ದೂರು ಕೂಡ ನೀಡಿದ್ದರು. ಆದರೆ ಈಗ ಉಲ್ಟಾ ಹೊಡೆದಿದೆ ಎಂದು ತಿಳಿದು ಬಂದಿದ್ದೆ. ಹಾಗಾದರೆ ಜಯಶ್ರೀ ಎಂದು ಹೇಳಿದ್ದಾರೆ ನೋಡೋಣ ಬನ್ನಿ.

ಮಾಜಿ ಬಿಗ್ ಬಾಸ್ ಸ್ಪರ್ಧಿ, ನಟಿ ಜಯಶ್ರೀ ಈಗ ಉಲ್ಟಾ ಹೊಡೆದಿದ್ದು, ತಾನು ಮಾಡಿದ್ದ ಆರೋಪ ಸುಳ್ಳು ಎಂದು ಫಿಲ್ಮ್ ಚೇಂಬರ್ ನಲ್ಲಿ ಕ್ಷಮೆ ಯಾಚಿದ್ದಾರೆ ಎಂದು ತಿಳಿದು ಬಂದಿದೆ. ನಟಿ ಮಾಡಿದ್ದ ಆರೋಪ ಗಂಭೀರವಾಗುತ್ತಿದ್ದಂತೆಯೇ ಫಿಲ್ಮ್ ಛೇಂಬರ್ ಗೆ ಆಗಮಿಸಿದ ನಟಿ ಜಯಶ್ರೀ ಈಗ ತಾನು ನಿರ್ದೇಶಕರ ವಿರುದ್ಧ ಮಾಡಿದ್ದ ಆರೋಪ ಸುಳ್ಳು ಎಂದು ಕ್ಷಮೆ ಯಾಚಿಸಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top