ಮನೋರಂಜನೆ

ಜೋಕೆ.. ಇದು ರಿಮಿಕ್ಸ್ ಸಾಂಗ್ ಅಲ್ಲ, ಫುಲ್ ಒರಿಜಿನಲ್.

ಪ್ರೇಕ್ಷಕರ ವಲಯದಲ್ಲಿ ಭಾರಿ ಕುತೂಹಲ ಹುಟ್ಟುಹಾಕಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಗ್ಗೆ ಯಶ್ ಅಭಿಮಾನಿಗಳು ಸೇರಿದಂತೆ ಸಿನಿರಸಿಕರೆಲ್ಲರಲ್ಲೂ ಭಯಂಕರ ನಿರೀಕ್ಷೆ ಮೂಡಿದೆ. ಅದ್ಧೂರಿ ಮೇಕಿಂಗ್, ಪೋಸ್ಟರ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವಂತಹ ಸ್ಟಿಲ್ಲುಗಳ ಮೂಲಕವೇ ಭಾರಿ ಸಂಚಲನ ಸೃಷ್ಟಿಸಿರುವ ಈ ಚಿತ್ರ ಎಬ್ಬಿಸಿರೋ ಅಲೆ ಕಂಡು ಬಹುತೇಕರು ಅಚ್ಚರಿಗೊಂಡಿದ್ದಾರೆ. ಯಶ್ ಅಭಿಮಾನಿಗಳ ಕುತೂಹಲವಂತೂ ಯಶ್ ಕೆಜಿಎಫ್‌ಗಾಗೇ ಬಿಟ್ಟಿರೋ ಉದ್ದ ಗಡ್ಡದ ಕೂದಲಂತೆಯೇ ದಿನೇ ದಿನೆ ಬೆಳೆದುಕೊಳ್ಳಲಾರಂಭಿಸಿದೆ!

 

 

ಇಂಥಾ ಕೆಜಿಎಫ್ ಚಿತ್ರದ ಐಟಂ ಸಾಂಗ್’ವೊಂದರಲ್ಲಿ ಸೌತ್ ಸುಂದರಿ ತಮನ್ನಾ ಹೆಜ್ಜೆ ಹಾಕಿರುವುದು ಎಲ್ಲರಿಗೂ ಗೊತ್ತಿರೋ ವಿಚಾರ. ಹಳೆಯ ಹಾಡು ‘ಜೋಕೆ ನಾನು ಬಳ್ಳಿಯ ಮಿಂಚು’ ಹಾಡಿಗೆ ತಮನ್ನಾ ಸೊಂಟ ಬಳುಕಿಸಿದ್ದಾರೆ. 1970ರ ‘ಪರೋಪಕಾರಿ’ ಸಿನಿಮಾದ ಹಾಡು ಇದು.. ಈ ಹಾಡನ್ನು ಕೆಜಿಎಫ್ ಚಿತ್ರದಲ್ಲಿ ರಿಮಿಕ್ಸ್ ಮಾಡಲಾಗಿದೆ, ರೀ ಕ್ರಿಯೇಟ್ ಮಾಡಲಾಗಿದೆ ಎಂಬಂತ ನಾನಾ ವದಂತಿಗಳು ಹಬ್ಬಿದ್ದವು. ಇದೀಗ ಆ ರೂಮರುಗಳಿಗೆಲ್ಲಾ ಚಿತ್ರತಂಡ ಥಂಡಾ ಹೊಡೆಯುವಂತೆ ಉತ್ತರಿಸಿದೆ.

ಅಂದಹಾಗೆ ಸಿನಿಮಾದಲ್ಲಿ ಬಳಸಿರುವ ಈ ಹಾಡನ್ನ ರಿಮಿಕ್ಸ್ ಆಗಲಿ ಅಥವಾ ರೀಕ್ರಿಯೇಟ್ ಆಗಲಿ​ ಮಾಡಿಲ್ಲ, ಆರ್​ಎನ್​ ಜನಯಗೋಪಾಲ್​ ಸಾಹಿತ್ಯ ಮತ್ತು ಉಪೇಂದ್ರ ಕುಮಾರ್​ ಸಂಗೀತ ಸಂಯೋಜನೆಯಲ್ಲಿ ಎಲ್​ಆರ್​ ಈಸ್ವರಿ ಅವರು ಹಾಡಿದ್ದ ಹಳೇ ಹಾಡನ್ನೇ ಯತಾವತ್ತಾಗಿ ಕೆಜಿಎಫ್ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆಯಂತೆ. ಅದೇ ಹಾಡಿಗೆ ತಮನ್ನಾ ಮತ್ತು ಯಶ್ ಜೊತೆಯಾಗಿ ಕುಣಿದಿದ್ದಾರಂತೆ.. ಎಲ್ಲರಿಗೂ ಗೊತ್ತಿರೋ ಹಾಗೆ ಕೆಜಿಎಫ್​ ಚಿತ್ರವು 70-80ರ ದಶಕದ ಕಥೆ ಕುರಿತದ್ದಾಗಿದ್ದು ಹಾಡುಗಳು ಕೂಡ ಅದೇ ಕಾಲಘಟ್ಟದ್ದಾಗಿರಬೇಕೆಂದು ‘ಜೋಕೆ’ ಒಂದು ಸ್ವಲ್ಪವೂ ಬದಲಯಿಸದೇ ಬಳಸಿಕೊಳ್ಳಲಾಗಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top