ಸಮಾಚಾರ

ನಗ್ನ ಫೋಟೋ ವೈರಲ್ ಮಾಡಿದ ಮಾಡೆಲ್‍ಗೆ ಆಯಿತು ಸರಿಯಾದ ಪೂಜೆ

ದಕ್ಷಿಣ ಕೊರಿಯಾದಲ್ಲಿ ಕೆಲಸವಿಲ್ಲದ ಮಾಡೆಲ್ ಒಬ್ಬಳು ಮಾಡಿದ ಅವಾಂತರಿ ಕೆಲಸಕ್ಕೆ 10 ತಿಂಗಳು ಜೈಲು ಶಿಕ್ಷೆ ಅನುಭವಿಸುವ ಪರಿಸ್ಥಿತಿ ಬಂದಿದೆ. ಪುರುಷ ಮಾಡೆಲ್ ಒಬ್ಬರ ಬೆತ್ತಲೆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು ಇದರಿಂದ ಆ ಪುರುಷನ ಮಾನ ಮರ್ವಾದೆ ಹರಾಜಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಅವನನ್ನು ನೋಡಿ ಕೇಕೆ ಹಾಕಿ ನಕ್ಕಿದ್ದರು.

ರೂಪದರ್ಶಿ ಹೆಸರು ಅಹನ್ ಎಂದು ತಿಳಿದು ಬಂದಿದೆ. ಈಕೆಯ ವಿರುದ್ಧ ಪುರುಷ ಮಾಡೆಲ್ ದೂರು ನೀಡಿದ್ದು ಈಕೆಗೆ ಕೋರ್ಟ್ 10 ತಿಂಗಳ ಜೈಲು ಶಿಕ್ಷೆಯ ಜೊತೆಗೆ 40 ಗಂಟೆಗಳ ಕೌನ್ಸೆಲಿಂಗ್ ಶಿಕ್ಷೆಯನ್ನು ವಿಧಿಸಿದೆ. ತಾನು ಮಾಡಿದ ತಪ್ಪಿಗೆ ಈಗ ಕಂಬಿ ಎಣಿಸುತ್ತ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ತಿಳಿದು ಬಂದಿದೆ.

 

 

ಅಹನ್ ವೃತ್ತಿಯಲ್ಲಿ ಮಾಡೆಲ್ ಆಗಿದ್ದು, ಈಕೆ ಪುರುಷ ಮಾಡೆಲ್ ಒಬ್ಬನ ನಗ್ನ ಫೋಟೋ ತೆಗೆದು ಅದನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾಳೆ. ಆ ಫೋಟೋಗೆ ಅನೇಕರು ವಿಭಿನ್ನ ರೀತಿಯಲ್ಲಿ ಕಮೆಂಟ್ ಮಾಡಿದ್ದರು. ಇದನ್ನು ನೋಡಿದ ಮಾಡೆಲ್, ಅಹನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಇನ್ನು ದಕ್ಷಿಣ ದಕ್ಷಿಣ ಕೊರಿಯಾದಲ್ಲಿ ಸ್ಪೈ ಕ್ಯಾಮೆರಾ ಮೂಲಕ ನ್ಯೂಡ್ ಫೋಟೋ ಕ್ಲಿಕ್ ಮಾಡುವುದು ಅತಿಯಾಗಿದೆ. ಇದರಿಂದ ಅನೇಕ ಅಮಾಯಕ ಮಹಿಳೆಯರ ನ್ಯೂಡ್ ಫೋಟೋ ಕ್ಲಿಕ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಶಾಲೆ, ಟ್ರೈನ್, ಕಚೇರಿ, ಡ್ರೆಸ್ಸಿಂಗ್ ರೂಮ್ ಮತ್ತು ರಸ್ತೆಯಲ್ಲಿ ಸ್ಪೈ ಕ್ಯಾಮೆರಾ ಇಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಪುರುಷ ಮಾಡೆಲ್ ಬೆತ್ತಲೆ ಚಿತ್ರ ವೈರಲ್ ಆದ ಬೆನ್ನಲ್ಲೇ ಕೊರಿಯಾ ಪೊಲೀಸರು ಅಲರ್ಟ್ ಆಗಿದ್ದು ಇನ್ನು ಮುಂದೆ ಪ್ರಕರಣ ನಡೆಯದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top