ಸಮಾಚಾರ

90% ಹುಡುಗಿಯರು ತಾವು ಪ್ರೀತಿ ಮಾಡಿದ ಹುಡುಗನ ಜೊತೆ ಮದ್ವೆ ಆಗಲ್ವಂತೆ,ಅದಕ್ಕೆ ಕಾರಣ ಏನ್ ಅಂತೇ ಗೊತ್ತಾ

ಪ್ರೀತಿ ಭಾವನೆಗಳಿಗೆ ಸಂಭಂದಿಸಿದ್ದು ಮದುವೆ ಬಾಂಧವ್ಯಕ್ಕೆ ಸೇತುವೆ. ಪ್ರೀತಿ ಎರಡು ಮನಸ್ಸನ್ನು ಒಂದು ಮಾಡಿದರೆ ಮದುವೆ 2 ಮನೆ, ಮನೆತನ ವನ್ನು ಒಂದಾಗಿ ಮಾಡುತ್ತದೆ. ಯಾವುದೇ ಧರ್ಮವನ್ನು ತೆಗೆದುಕೊಂಡರೂ ಮದುವೆಗೆ ಅದರದ್ದೇ ಆಗಿರುವ ಅರ್ಥ ಇದೆ, ಮಹತ್ವ ಇದೆ. ವಿವಾಹ ಬಾಂಧವ್ಯದ ಸಂಕೇತವಾಗಿದೆ. ಒಬ್ಬಂಟಿಯಾಗಿ ಸಾಗುವ ಹಾದಿಯಲ್ಲಿ ಮತ್ತೊಬ್ಬರನ್ನು ಜಂಟಿಯಾಗಿ ಮಾಡುವ ಕ್ಷಣವದು. ಪ್ರೀತಿ ಮತ್ತು ಮದುವೆ ಒಂದೇ ನಾಣ್ಯದ ಎರಡು ಮುಖ ಎಂದು ಕೂಡ ಹೇಳಲಾಗುತ್ತದೆ. ಅದ್ರಲ್ಲಿ ಪ್ರೀತಿ ಮೊದಲು ಹುಟ್ಟಿ ಆಮೇಲೆ ವಿವಾಹವಾಗಿ ಪರಿವರ್ತನೆಯಾಗಬಹುದು ಅಥವಾ ಮದುವೆಯ ನಂತರ ಪ್ರೀತಿ ಹುಟ್ಟಬಹುದು.

 

 

ಆದರೆ 90% ಹುಡುಗಿಯರು ತಾವು ಪ್ರೀತಿ ಮಾಡಿದ ಹುಡುಗನ ಜೊತೆ ಮದುವೆ ಆಗೋದಿಲ್ಲವಂತೆ.. ಮುಂದೆ ಓದಿ

ಹುಡುಗಿಯರು ಎಷ್ಟೇ ಆಳವಾದ ಪ್ರೀತಿಯಲ್ಲಿ ಇದ್ದರು ಕೂಡ ಅವರ ತಂದೆ ತಾಯಿ ಬಗ್ಗೆ ಅವರಿಗೆ ಸಾಕಷ್ಟು ಭಯ ಇರುತ್ತದೆ, ಕೆಲವೊಮ್ಮೆ ತಂದೆ ತಾಯಿ ಒತ್ತಡಕ್ಕೆ ಮಣಿದು ತಾನು ಪ್ರೀತಿಸಿದ ಹುಡುಗನನ್ನು ಒಲ್ಲದ ಮನಸ್ಸಿನಿಂದಲೇ ದೂರ ಮಾಡುವ ಅನಿವಾರ್ಯತೆ ಅವಳಿಗೆ ಎದುರಾಗುತ್ತದೆ.

ಇದು ಎಲ್ಲ ಹುಡುಗಿಯರಿಗೆ ಅನ್ವಯ ಆಗಲ್ಲ ಆದರೂ ಕೆಲವು ಹುಡುಗಿಯರು ತಾನು ಪ್ರೀತಿಸುವ ಹುಡುಗನ ಆರ್ಥಿಕ ಸ್ಥಿತಿಗತಿಗಳನ್ನು ಲೆಕ್ಕ ಹಾಕಿರುತ್ತಾರೆ. ಭವಿಷ್ಯದಲ್ಲಿ ಹುಡುಗನಿಗೆ ಆರ್ಥಿಕ ಸಮಸ್ಯೆ ಎದುರಾಗಬಹುದು ಎಂಬ ಸುಳಿವು ಸಿಕ್ಕ ಕೂಡಲೇ ದೂರ ಆಗುತ್ತಾರೆ.

ಮನೆಯವರ ಒಪ್ಪಿಗೆ ಇಲ್ಲದೆ ನಿರ್ಧಾರ ತೆಗೆದುಕೊಂಡು ಮದುವೆ ಆದರೆ ಮುಂದೆ ನಮ್ಮ ಕಷ್ಟಕ್ಕೆ ಮನೆಯವರು ಬರೋಲ್ಲ ಎಂಬ ಭೀತಿ ಕೂಡ ಹುಡುಗಿಯರಿಗೆ ಇರುತ್ತೆ. ಈ ಕಾರಣಕ್ಕೂ ಕೂಡ ಹುಡುಗಿಯರು ದೂರ ಆಗ್ತಾರೆ.

ಶುರುವಾತಿನಲ್ಲಿ ಹುಡುಗನ ಬಣ್ಣ ಬಣ್ಣ ಮಾತಿಗೆ ಹುಡುಗಿ ಮರುಳಾಗುತ್ತಾಳೆ, ಹುಡುಗ ಏನಾದರು ಸುಳ್ಳು ಹೇಳಿರುವ ಬಗ್ಗೆ ಗೊತ್ತಾದರೆ ಆಕೆ ಅವನಿಂದ ದೂರವಾಗುತ್ತಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top