ಸಮಾಚಾರ

ಈ ನಟಿ ವಿಜಯ್ ದೇವರಕೊಂಡ ಜತೆ ನಟಿಸಲು ಕೇಳಿದ್ದು ಎಷ್ಟು ಕೋಟಿ ಅಂತೇ ಗೊತ್ತಾ

ತೆಲುಗು ಸಿನಿಮಾ ರಂಗದ ಅರ್ಜುನ್ ರೆಡ್ಡಿ ಖ್ಯಾತಿಯ ನಟ ವಿಜಯ್ ದೇವರಕೊಂಡ ಹಾಗು ಕಿರಿಕ್ ಪಾರ್ಟಿ ಖ್ಯಾತಿಯ ಕನ್ನಡತಿ ರಶ್ಮಿಕಾ ಮಂದಣ್ಣ ಅಭಿನಯದ ಗೀತ ಗೋವಿಂದಂ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸುವ ಮೂಲಕ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಹೆಚ್ಚು ಸುದ್ದಿಯಾಗಿದ್ದರು. ಈಗ ಚಿತ್ರದ ಬಗ್ಗೆ ಇನ್ನೊಂದು ಕುತೂಹಲಕಾರಿ ಮಾಹಿತಿ ಹೊರಬಿದ್ದಿದ್ದೆ.

ಮೂಲಗಳ ಪ್ರಕಾರ ರಶ್ಮಿಕಾ ಗಿಂತ ಮೊದಲು ಈ ಚಿತ್ರಕ್ಕೆ ಲಾವಣ್ಯ ತ್ರಿಪಾಟಿ ಅವರನ್ನು ಹಾಕಿಕೊಳ್ಳಲು ಪ್ಲಾನ್ ಮಾಡಿದ್ದರು ಎಂಬ ವಿಷ್ಯ ಈಗ ಹೊರಬಿದ್ದಿದ್ದೆ. ಆದರೆ ಯಾವುದೊ ಕಾರಣಕ್ಕೆ ಇವರನ್ನು ಡ್ರಾಪ್ ಮಾಡಿದ್ದರು ಆ ಬಳಿಕ ನಟಿ ರಾಶಿ ಖನ್ನಾಗೆ ಆಫರ್ ನೀಡಲು ಮುಂದಾಗಿದ್ದರು.  ಈ ನಟಿ ಇಟ್ಟ ಬೇಡಿಕೆ ಮೊತ್ತಕ್ಕೆ ನಿರ್ಮಾಪಕರು ಕಂಗಾಲಾಗಿದ್ದರು.

 

 

ಸಿನಿಮಾ ಸ್ಕ್ರಿಪ್ಟ್​ ಕೇಳಿ ಅಭಿನಯ ಮಾಡಲು ಒಪ್ಪಿಕೊಂಡಿದ್ದ ರಾಶಿ, ವಿಜಯ್ ಜತೆ ನಟಿಸಲು ಒಂದು ಕೋಟಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇಷ್ಟು ಹಣ ಕೊಡಲು ಚಿತ್ರತಂಡ ಒಪ್ಪದ ಕಾರಣವಾಗಿ ಕೊನೆಗೆ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿದರು ಎಂದು ತಿಳಿದು ಬಂದಿದೆ. ಇನ್ನೊಂದು ಮೂಲಗಳ ಮೂಲದ ಪ್ರಕಾರ ‘ಗೀತ ಗೋವಿಂದ’ ಸಿನೆಮಾವನ್ನು ಟಾಪ್ ಹೀರೋಯಿನ್ ಸೇರಿದಂತೆ 25 ನಟಿಯರು ರಿಜೆಕ್ಟ್​ ಮಾಡಿದ್ದರು ಎನ್ನಲಾಗಿದೆ.

ಈ ಚಿತ್ರವನ್ನು ಗೀತಾ ಆರ್ಟ್ಸ್ 2 ಬ್ಯಾನರ್‌ ಅಡಿ ಬನ್ನಿ ವಾಸ್‌ ನಿರ್ಮಿಸಿದ್ದು, ಗೋಪಿ ಸುಂದರ್ ಸಂಗೀತ ಚಿತ್ರಕ್ಕಿದೆ. ಸಿನಿಮಾ ಆಗಸ್ಟ್‌ 15 ರಂದು ರಿಲೀಸ್ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top