ಸಮಾಚಾರ

ಬ್ಯಾಚುಲರ್ ಸಲ್ಲು ಮನೆಯಲ್ಲಿ ಸದ್ಯದಲ್ಲೇ ನಡೆಯಲಿದೆ ಮದುವೆ

ಬಾಲಿವುಡ್ ಅಂಗಳದಲ್ಲಿ ಇನ್ನೂ ಬ್ಯಾಚುಲರ್ ಆಗಿಯೇ ಉಳಿದುಕೊಂಡಿರುವ ಸಲ್ಮಾನ್ ಖಾನ್. ಇದುವರೆಗೂ ಸಲ್ಲೂಗೆ ಯಾಕೆ ಮದುವೆಯಾಗಿಲ್ಲ ಎನ್ನುವುದೇ ಸದ್ಯಕ್ಕಿರುವ ಎಲ್ಲರ ಪ್ರಶ್ನೆಯು ಪ್ರಶ್ನೆಯಾಗಿಯೇ ಉಳಿದಿದೆ. ಆದರೆ ಸಲ್ಮಾನ್‌ ಖಾನ್‌ ಯಾಕೆ ಮದುವೆಯಾಗಿಲ್ಲ ಅಥವಾ ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ಅವರು ಉತ್ತರಿಸುವ ಗೋಜಿಗೆ ಹೋದವರಲ್ಲ.

ಈಗ ಸಲ್ಮಾನ್ ಮನೆಯಲ್ಲಿ ಮತ್ತೊಮ್ಮೆ ಮದುವೆ ಸಮಾರಂಭ ನಡೆಯಲಿದೆ. ಈಗಾಗಲೇ ಸಲ್ಮಾನ್ ಖಾನ್ ಮನೆಯಲ್ಲಿ ಮದುವೆಗೆ ಸಿದ್ಧತೆಗಳು ಭಲು ಜೋರಾಗಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಆದರೆ ಇದು ಸಲ್ಮಾನ್ ಖಾನ್ ಮದುವೆಗಾಗಿ ಅಲ್ಲ ಬದಲಾಗಿ ಅವರ ಸಹೋದರ ಅರ್ಬಾಜ್ ಖಾನ್ ಮದುವೆ. ಅರ್ಬಾಜ್ ಖಾನ್ ಈಗಾಗಲೇ ಮದುವೆ ಆಗಿದ್ದಾರೆ. ಆದರೆ ಈಗ ಎರಡನೇ ಮದುವೆಗೆ ಸಿದ್ದರಾಗಿದ್ದಾರೆ. ಅರ್ಬಾಜ್ ಅವರು ಮೊದಲ ಪತ್ನಿ ಮಲೈಕಾ ಅರೋರಾ ಅವರಿಗೆ ಎರಡು ವರ್ಷಗಳ ಹಿಂದೆ ವಿಚ್ಛೇದನ ನೀಡಿದ್ದಾರೆ ಎನ್ನಲಾಗಿದೆ.

 

 

 

ಮೂಲಗಳ ಮಾಹಿತಿ ಪ್ರಕಾರ ಅರ್ಬಾಜ್ ಖಾನ್ ಅವರು ಮಾಡೆಲ್ ಆಗಿರುವ ಗೊರ್ಜಿಯಾ ಆಂಡ್ರಿಯಾನಾ ಅವರನ್ನು ಮದುವೆ ಅಗಲಿದ್ದಾರೆ ಎಂದು ತಿಳಿದು ಬಂದಿದೆ. ಅಂದಹಾಗೆ ಅರ್ಬಾಜ್ ಖಾನ್ ಅವರು ಗೊರ್ಜಿಯಾ ಆಂಡ್ರಿಯಾನಾ ಜೊತೆಗೆ ಅನೇಕ ದಿನಗಳಿಂದ ಸುತ್ತಾಡುತ್ತಿದ್ದಾರೆ ಎಂದು ಈ ಹಿಂದೆಯೇ ಹಲವು ಮಾಧ್ಯಮಗಳು ವರದಿ ಮಾಡಿದ್ದರು.

ಅರ್ಬಾಜ್ ಖಾನ್ ಅವರು ಗೊರ್ಜಿಯಾ ಆಂಡ್ರಿಯಾನಾ ಕದ್ದು ಮುಚ್ಚಿ ಆಗಾಗ ಭೇಟಿ ಆಗುವುದೇ ಮೊದಲ ಪತ್ನಿಯ ಜೊತೆಗೆ ವಿಚ್ಛೇದನಕ್ಕೆ ಕಾರಣ ಆಯಿತು ಎನ್ನುವ ಮಾತುಗಳು ಕೇಳಿಬರುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top