ಹೆಚ್ಚಿನ

ಶಿವನು ಭೂಲೋಕ ಸಂಚಾರ ಮಾಡುವ ಈ 3 ಸಮಯಗಳಲ್ಲಿ ಶಿವನನ್ನು ಪೂಜಿಸಿದರೆ ಸಾವಿರ ಜನ್ಮಗಳ ಪುಣ್ಯ ಪ್ರಾಪ್ತಿಯಾಗಿ ನಿಮ್ಮ ಎಲ್ಲ ಕಷ್ಟಗಳು ಪರಿಹಾರವಾಗುತ್ತದೆ.

ನಾವು ಏನನ್ನಾದರೂ ಕೇಳಿಕೊಂಡರೆ ಅದನ್ನು ಪೂರೈಸುವವನು ಶಿವ. ಕೋರಿದ ಕೋರಿಕೆಗಳನ್ನು ತಕ್ಷಣವೇ ಆದಷ್ಟು ಬೇಗನೆ ಈಡೇರಿಸುವನು ಶಿವ. ಒಂದು ದಿನದಲ್ಲಿ ಈ ಮೂರು ಸಮಯದಲ್ಲಿ ಏನನ್ನಾದರು ಕೇಳಿಕೊಂಡರೆ ಅತಿ ಶೀಘ್ರವಾಗಿ ಪೂರೈಸುತ್ತಾನೆ ಶಿವ ಎಂದು ಪಂಡಿತರು ಹೇಳುತ್ತಾರೆ. ಈಗ ಆ ಸಮಯದ ಬಗ್ಗೆ ನಾವು ತಿಳಿದುಕೊಳ್ಳೋಣ.

 

 

 

ಮೊದಲನೆಯದಾಗಿ ಉದಯ ಸಂಧ್ಯಾಸಮಯ.
ಅಂದರೆ ಯಾವಾಗ ಸೂರ್ಯನು ಉದಯಿಸುವಾಗ ಸೂರ್ಯೋದಯದ ಸಮಯದಲ್ಲಿ ಸೂರ್ಯನ ಕಿರಣಗಳು ಭೂಮಿಯ ಮೇಲೆ ಬೀಳುವಾಗ ಶಿವನನ್ನು ಪೂಜಿಸುವುದರಿಂದ ಯಾವುದೇ ಕೋರಿಕೆಗಳಾದರೂ ಸಹ ನೆರವೇರುತ್ತವೆ .ಏಕೆಂದರೆ ಇದು ಶಿವನಿಗೆ ತುಂಬಾ ಇಷ್ಟವಾದ ಸಮಯವಾಗಿದೆ.

ಎರಡನೆಯದಾಗಿ ಮಧ್ಯಾಹ್ನದ ಸಮಯ.

ಈ ಮಧ್ಯಾಹ್ನದ ಸಮಯದಲ್ಲಿ ಸೂರ್ಯನು ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನತ್ತ ಸಂಚಾರ ಮಾಡುವ ಸಮಯವಾಗಿದೆ. ಅಂದರೆ ಮಧ್ಯಾಹ್ನ ಹನ್ನೆರಡು ಗಂಟೆಗೆ.
ಮೂರನೆಯದಾಗಿ ಸಂಜೆ ಸಂಧ್ಯಾಸಮಯ.

ಇದು ತುಂಬಾ ಮುಖ್ಯವಾದದ್ದು ಅದುವೇ ಗೋದೂಳಿ ಸಮಯ . ಈ ಸಮಯದಲ್ಲಿ ಗೋವುಗಳು ಮನೆಗೆ ಬರುವ ಸಮಯವಾಗಿದೆ.ಆದ್ದರಿಂದಲೇ ಇದನ್ನು ಗೋಧೂಳಿ ಸಮಯ ಎಂದು ಕರೆಯಲಾಗಿದೆ. ಈ ಸಮಯ ಶಿವನಿಗೆ ತುಂಬಾ ವಿಶೇಷವಾದದ್ದು ಮತ್ತು ಪ್ರಿಯಕರವಾದದ್ದು .

ಈ ಮೂರು ಸಮಯದಲ್ಲಿ ಶಿವನಿಗೆ ಏನನ್ನಾದರೂ ಕೋರಿಕೊಂಡರೆ ,ಪೂಜಿಸಿ,ಪ್ರಾರ್ಥಿಸಿ, ಆರಾಧಿಸಿದರೆ, ಅದು ನಿಮ್ಮ ಸ್ವಂತವಾಗುತ್ತದೆ ಆದರೆ ನಿಮ್ಮ ಬೇಡಿಕೆಗಳು ಇಷ್ಟಾರ್ಥಗಳು ನೆರವೇರುತ್ತವೆ. ಸಾಯಂಕಾಲ ಸೂರ್ಯಾಸ್ತದ ಸಮಯದಲ್ಲಿ ಸೂರ್ಯಾಸ್ತದ ನಂತರ ಶಿವನನ್ನು ಪೂಜಿಸುವುದರಿಂದ ಸುಖ ಸಂತೋಷ ನಿಮ್ಮದಾಗುತ್ತದೆ.
ಸೂರ್ಯನ ಕಿರಣಗಳು ಯಾವ ಸಮಯದಲ್ಲಾದರೂ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನತ್ತ ಬದಲಾಗುತ್ತ ಇರುತ್ತವೆ . ಆ ಸಮಯದಲ್ಲಿ ಶಿವನು ನಂದಿಯ ಜೊತೆ ಕೈಲಾಸವನ್ನು ಬಿಟ್ಟು ಭೂಲೋಕ ಸಂಚಾರ ಮಾಡುತ್ತಾರೆ ಎಂದು ಶಾಸ್ತ್ರಗಳು ಹೇಳುತ್ತವೆ. ಅಂದರೆ ಬೆಳಗ್ಗೆ ಸಂಧ್ಯಾ ಸಮಯ, ಮಧ್ಯಾಹ್ನದ ಸಮಯ, ಸಾಯಂಕಾಲ ಸಂಧ್ಯಾಸಮಯ ಆದ್ದರಿಂದ ಈ ಮೂರು ಸಮಯಗಳಲ್ಲಿ ಶಿವನನ್ನು ಪೂಜಿಸಿದರೆ ನಿಮ್ಮ ಕೋರಿಕೆಗಳನ್ನು ಬೇಗನೇ ಪೂರೈಸಿಕೊಳ್ಳಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top