ಮನೋರಂಜನೆ

ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ ತೆಲುಗಿನ ‘ಯೂಟರ್ನ್’ ಟ್ರೈಲರ್- ಸಮಂತಾಗೆ ಫಿದಾ ಆದ ಪ್ರೇಕ್ಷಕರು.

ಲಕ್ಕಿ ಚಾರ್ಮ್, ಕ್ಯೂಟ್ ಸುಂದರಿ ಸಮಂತ ಅಕ್ಕಿನೇನಿ ಕೆಲದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸೌತ್ ಇಂಡಷ್ಟ್ರಿಯಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳಲ್ಲಿ ಕಾಣಿಸುತ್ತಿರುವ ಸ್ಯಾಮ್ ಮದುವೆಯಾದ ನಂತರ ನಟನೆಗೆ ಗುಡ್‌ಬೈ ಹೇಳುತ್ತಾಳಾ ಅಂತೊಂದು ಆತಂಕ ಅಭಿಮಾನಿಗಳಲ್ಲಿತ್ತು. ಆದರೆ ಅದನ್ನು ದೂರ ಮಾಡಿರುವುದು ಕನ್ನಡದ ಯೂಟರ್ನ್ ಚಿತ್ರ.

 

 

ಪವನ್ ಕುಮಾರ್ ನಿರ್ದೇಶನದಲ್ಲಿ ಕನ್ನಡದಲ್ಲಿ ತೆರೆ ಕಂಡು ಗೆದ್ದಿದ್ದ ಚಿತ್ರ ಯೂ ಟರ್ನ್. ಈ ಚಿತ್ರ ಅದೇ ಹೆಸರಿನಲ್ಲಿ ತೆಲುಗಿಗೂ ರೀಮೇಕ್ ಆಗುತ್ತಿರೋದು ಗೊತ್ತಿರುವ ವಿಚಾರವೇ. ಈ ಚಿತ್ರದಲ್ಲಿ ಸಮಂತಾ ನಾಯಕಿಯಾಗಿ ನಟಿಸಿದ್ದಾಳೆ. ಮದುವೆಯಾದ ಬಳಿಕ ಈ ಚಿತ್ರದ ಮೂಲಕವೇ ಮತ್ತೆ ನಟನೆಯ ಎರಡನೇ ಇನ್ನಿಂಗ್ಸ್ ಆರಂಭಿಸಿರೋ ಸಮಂತಾ ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಿಕೊಟ್ಟಿದ್ದಾಳೆ..

ಸದ್ಯ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸದಾ ಗ್ಲಾಮರಸ್​ ಲುಕ್​ನಲ್ಲೇ ಮಿಂಚುತ್ತಿದ್ದ ಸಮಂತಾ ಮುಖದಲ್ಲಿ ಈಗ ಕೊಂಚ ಸೀರಿಯಸ್ ಲುಕ್ ಕಾಣುತ್ತಿದೆ.. ಅಂದಹಾಗೆ ಗೌರಿ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 13ರಂದು ಚಿತ್ರ ತೆರೆಗೆ ಬರುತ್ತಿದೆ.. ಚಿತ್ರ ತಮಿಳು ಮತ್ತು ತೆಲುಗು ಎರಡು ಭಾಷೆಯಲ್ಲೂ ಮೂಡಿಬರುತ್ತಿದ್ದು ಎರಡೂ ಭಾಷೆಯ ಟ್ರೈಲರ್ ಗಳು ಕೂಡ ಲಾಂಚ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿವೆ.

ಹೈವೇ ಒಂದರಲ್ಲಿ ನಡೆಯುವ ವಿಕ್ಷಿಪ್ತ ವಿದ್ಯಮಾನಗಳ ಸುತ್ತಲಿನ ಕಥಾ ಹಂದರ ಹೊಂದಿದ್ದ ಈ ಚಿತ್ರವನ್ನು ತೆಲುಗಿನ ನೇಟಿವಿಟಿಗೆ ತಕ್ಕಂತೆ ಕೊಂಚ ಬದಲಾವಣೆ ಮಾಡಿಕೊಂಡು ಈ ಚಿತ್ರವನ್ನು ರೀಮೇಕ್ ಮಾಡಲಾಗಹುತ್ತಿದೆಯಂತೆ. ಚುರುಕು ಸ್ವಭಾವದ ತನಿಖಾ ಪತ್ರಕರ್ತೆಯ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾಳಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top