fbpx
ಮನೋರಂಜನೆ

ರವಿಮಾಮನ ಜೊತೆ ‘ಸ್ನೇಹ ‘ಫಿಲಂನಲ್ಲಿ ಡ್ಯೂಯೆಟ್ ಹಾಡಿದ್ದ ದುಂಡು ಚೆಲುವೆ ರಾಶಿ ಈಗ ಹೇಗಿದ್ದಾರೆ ಗೊತ್ತಾ

ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರಾದ ನಟಿ ರಾಶಿ ತಮಿಳು,ತೆಲುಗು,ಕನ್ನಡ ಮಲಯಾಳಂ ,ಹಿಂದಿ ಚಿತ್ರಗಳಲ್ಲೂ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ , ನಟಿ ಸೌಂದರ್ಯ ರೀತಿಯಾಗಿ ದುಂಡಾಗಿ ಕಾಣುತ್ತಿದ್ದ ರಾಶಿಗೆ ಫಿಲಂ ದುನಿಯಾಗೆ ಎಂಟ್ರಿ ಕೊಡಲು ಕಷ್ಟವಾಗಲಿಲ್ಲ , 83 ಚಿತ್ರಗಳಲ್ಲಿ ನಟನೆ ಮಾಡಿರುವ ರಾಶಿ ಮೊದಲು ಎಂಟ್ರಿ ಕೊಟ್ಟಿದ್ದು ಬಾಲ ನಟಿಯಾಗಿ , ಬಾಲನಟಿಯಾಗಿ ‘ಮಮತಲ ಕೋವೆಲ’ ಎಂಬ ಚಿತ್ರದಲ್ಲಿ 1986 ನೇ ಇಸವಿಯಲ್ಲಿ ನಟನೆ ಮಾಡಿದ್ದರು .ಆಕೆಯ ಮೂಲ ಹೆಸರು ‘ವಿಜಯ’ ಆದರೆ ತಮಿಳು ಚಿತ್ರರಂಗದಲ್ಲಿ ‘ಮಂತ್ರ’ ಎಂದು ಹಾಗೆಯೇ ತೆಲುಗು ಚಿತ್ರರಂಗದಲ್ಲಿ ಮತ್ತು ಇತರ ಚಿತ್ರರಂಗದಲ್ಲಿ ‘ರಾಶಿ’ ಎಂದು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದರು.

 

 

ರಾಜಶೇಖರ್ , ಸುಹಾಸಿನಿ ಜೋಡಿಯ ‘ಮಮತಲ ಕೋವೆಲ’ ಚಿತ್ರ ಆಗಿನ ಕಾಲಕ್ಕೆ ಸೂಪರ್ ಹಿಟ್ ಆಗಿತ್ತು ,ಈ ಚಿತ್ರದಲ್ಲಿ ರಾಶಿ ನಾಯಕ-ನಾಯಕಿಯ ಮಗಳಾಗಿ ಅಭಿನಯ ಮಾಡಿದ್ದರು ಆಗ ರಾಶಿಗೆ ಕೇವಲ 6 ವರ್ಷ ವಯಸ್ಸು , ಮುದ್ದು ಚೇಷ್ಟೆಗಳನ್ನು ಮಾಡುತ್ತಾ ಎಲ್ಲರ ಮನಗೆದ್ದಿದ್ದ ರಾಶಿ ಮುಂದೆ ‘ಬಾಲ ಗೋಪಾಲುಡು’, ‘ರಾವ್ ಗಾರಿ ಇಲ್ಲು’ ಹೀಗೆ ಅನೇಕ ತೆಲುಗು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ , ಬಾಲ ನಟಿಯಾಗಿದ್ದ ರಾಶಿಗೆ ಸಿನಿಮಾ ಆಫರ್ ಗಳು ಹೆಚ್ಚಾಗಿ ಬರತೊಡಗಿದ್ದವು ಆನಂತರ ತನ್ನ ವಯಸ್ಸಿಗೆ ತಕ್ಕನಾಗಿ ಹದಿಹರೆಯದ ಹುಡುಗಿಯ ಪಾತ್ರಗಳನ್ನೂ ಮಾಡಲು ಶುರು ಹಚ್ಚಿಕೊಂಡರು .

1996 ರಲ್ಲಿ ನಾಯಕಿಯಾಗಿ ಬಡ್ತಿ ಪಡೆದ ರಾಶಿ ಹೀರೋಯಿನ್ ಆಗಿ ಅಭಿನಯಿಸಿದ್ದು ಬಾಲಿವುಡ್ ನ ಅಭಿನಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿದ್ದ ಮಿಥುನ್ ಚಕ್ರವರ್ತಿಯವರ ಜೊತೆಗೆ , ಅಲ್ಲಿಂದ ದಶಕಗಳ ಕಾಲ ಆಕೆಯನ್ನು ಹಿಡಿಯಲು ಯಾರಿಂದಲೂ ಸಾಧ್ಯವಾಗಲಿಲ್ಲ , ರಂಗಬಾಜ್ (1996), ಸೂರಜ್ (1997) and ಜೋಡೀದಾರ್ (1997) ಹೀಗೆ ಮೂರು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ ಸೂಪರ್ ಹಿಟ್ ಎಂದೆನಿಸಿಕೊಂಡಿತ್ತು.

 

 

2002 ನೇ ಇಸವಿಯವರೆಗೂ ಎರಡನೇ ಸೌಂದರ್ಯ ಎಂದೇ ಖ್ಯಾತಿಯಾಗಿದ್ದ ರಾಶಿ ವರ್ಷಕ್ಕೆ ಮಾಡುತ್ತಿದ್ದ ಸಿನಿಮಾಗಳು 10 ಕ್ಕಿಂತಲೂ ಹೆಚ್ಚು , ಆಕೆ ಆಗಲೇ ಟಾಪ್ ಹೀರೋಯಿನ್ ಪಟ್ಟಕ್ಕೆ ಏರಿಬಿಟ್ಟಿದ್ದಳು , ಎಲ್ಲ ಸುಂದರಿ ಚೆಲುವೀಯರನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸುವ ರವಿಮಾಮ ರಾಶಿಯನ್ನು ಸಹ ಸ್ಯಾಂಡಲ್ ವುಡ್ ಗೆ 1999 ರಲ್ಲಿ ತಮ್ಮ ‘ಸ್ನೇಹ’ ಚಿತ್ರದ ಮೂಲಕ ಪರಿಚಯ ಮಾಡಿಸಿದರು ಮುಂದೆ ‘ನಿನ್ನೆ ಪ್ರೀತಿಸುವೆ’ ,’ಜಮೀನ್ದಾರರು’, ‘ರಾಜ ನರಸಿಂಹ’ ಚಿತ್ರಗಳಲ್ಲಿ ಮಿಂಚಿದ್ದರು ರಾಶಿ .

2003 ರ ನಂತ್ರ ಆಕೆ ತನ್ನ ದೇಹದ ತೂಕ ಹೆಚ್ಚಿಸಿಕೊಂಡ ಕಾರಣಕ್ಕೆ ಆಕೆಗೆ ಸಿನಿಮಾ ಆಫರ್ ಗಳು ಕಡಿಮೆಯಾಗತೊಡಗಿದವು ,ತಮಿಳಿನ ಖ್ಯಾತ ನಿರ್ದೇಶಕ ಶ್ರೀನಿವಾಸ್ ಅವರನ್ನು ಮದುವೆಯಾದ ನಂತರ ನಾಯಕಿ ರಾಶಿ ಚಲನಚಿತ್ರಗಳನ್ನು ತೊರೆದು ಚೆನ್ನೈ ಗೆ ಹೋಗಿ ಸೆಟ್ಲ್ ಆದರು. ಆಕೆಯ ಪತಿ ಶ್ರೀನಿವಾಸ್ ನಿರ್ದೇಶಕರಾಗಿ ತೆಗೆದ ‘ಮಹಾರಾಜಶ್ರೀ’ ಚಿತ್ರಕ್ಕೆ ಬಂಡವಾಳ ಹಾಕಿದ್ದರು ,ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತು ಸುಣ್ಣವಾಯಿತು ಆರ್ಥಿಕವಾಗಿ ಬಹಳ ನಷ್ಟ ಅನುಭವಿದ ರಾಶಿ ಮನೆ ಮಾರಬೇಕಾಯಿತು.

 

 

2017 ಜನವರಿಯಲ್ಲಿ ರಾಶಿ ದಂಪತಿಗಳಿಗೆ ಮುದ್ದಾದ ಹೆಣ್ಣುಮಗುವೊಂದು ಜನಿಸಿದೆ , ಆಕೆ ನಾಯಕಿಯಾಗಿದ್ದ ಅಷ್ಟು ದಿನ ಒಂದಲ್ಲ ಒಂದು ವಿವಾದ ತಲೆ ಮೇಲೆ ಹೊತ್ತಿಕೊಂಡಿದ್ದರು ರಾಶಿ ಆಕೆ ಮೊದಲು ತಮಿಳಿನ ‘ಪ್ರಿಯಂ’ ಎಂಬ ಸಿನಿಮಾದಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಳು ಆಗ ಆ ಚಿತ್ರದ ನಿರ್ಮಾಪಕ ಅಶೋಕ್ ಸಾಮ್ರಾಜ್ ಜೊತೆಗೆ ಪ್ರೀತಿಯಲ್ಲಿ ಬಿದ್ದು ಮದುವೆ ಕೂಡ ಮಾಡಿಕೊಂಡಿದ್ದಳು ಎಂಬ ಮಾತುಗಳಿವೆ, ಆ ನಂತ್ರ ನಿರ್ದೇಶಕ ಸುರೇಶ್ ವರ್ಮಾ ಅವರನ್ನು ಮದುವೆಯಾಗಿದ್ದರು ಎಂಬ ಮಾತುಗಳಿವೆ , ಏನೇ ಆಗಲಿ ಆಕೆ ಮತ್ತೆ ‘ಲಂಕಾ ‘ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಆಕೆಯ ಅಭಿಮಾನಿಗಳಿಗೆ ಮತ್ತಷ್ಟು ಖುಷಿಕೊಟ್ಟಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top