ಮನೋರಂಜನೆ

ಕೈ ಮೂಳೆ ಮುರಿದಿದ್ದರೂ ಪ್ರವಾಹ ಸಂತ್ರಸ್ತರ ರಕ್ಷಣೆಗೆ ಮುಂದಾದ ‘ಹೆಬ್ಬುಲಿ ಹುಡುಗಿ’

ಕನ್ನಡ ಬ್ಲಾಕ್ ಬಸ್ಟರ್ ಹೆಬ್ಬುಲಿ ಚಿತ್ರದಲ್ಲಿ ಕಿಚ್ಚನ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿದ್ದ ಸೌತ್ ಸುಂದರಿ ಅಮಲಾ ಪಾಲ್ ಇಡೀ ಮನುಷ್ಯ ಕುಲವೇ ಮೆಚ್ಚುವಂತ ಕೆಲಸ ಮಾಡಿದ್ದಾಳೆ. ತಮಿಳು ಚಿತ್ರವೊಂದರ ಶೂಟಿಂಗ್ ಸಮಯದಲ್ಲಿ ಸಂಭವಿಸಿದ ಅವಘಡದಲ್ಲಿ ಅಮಲಾ ಪೌಲ್ ಕೈಗೆ ಪೆಟ್ಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಮಲಾ ಕೇರಳದ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ತಮಿಳು ಚಿತ್ರವೊಂದರ ಶೂಟಿಂಗ್ ಸಮಯದಲ್ಲಿ ಸಂಭವಿಸಿದ ಅವಘಡದಲ್ಲಿ ಅಮಲಾ ಪೌಲ್ ಕೈಗೆ ಪೆಟ್ಟಾಗಿ ಮೂಳೆ ಮುರಿದುಕೊಂಡಿದ್ದ ಅಮಲಾ ತನ್ನ ತಾಯ್ನಾಡು ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವ ಸಂತ್ರಸ್ತರ ನೆರವಿದೆ ದಾವಿಸಿದ್ದಾಳೆ. ಕೈ ಮುರಿದ ನೋವಿನ ನಡುವೆಯೂ ಮಳೆ ಪೀಡಿತ ಪ್ರದೇಶಗಳಲ್ಲಿಯೇ ಕುಟುಂಬದ ಇತರೆ ಸದಸ್ಯರೊಂದಿಗೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ನೀಡುತ್ತಿದ್ದಾರೆ.. ತನ್ನ ದೈಹಿಕ ನೋವಿನ ನಡುವೆಯೂ ತನ್ನ ರಾಜ್ಯದ ಜನರ ಸಮಸ್ಯೆಗೆ ಸ್ಪಂದಿಸಿರುವ ಅಮಲಾ ಇತರೆ ನಟಿಯರಿಗಿಂತ ಭಿನ್ನವಾಗಿ ನಿಂತು ಪ್ರಶಂಶೆಗೆ ಕಾರಣರಾಗುತ್ತಿದ್ದಾರೆ.

ಕೇರಳ ಪ್ರವಾಹ ಅಪ್ ಡೇಟ್:
ಕೇರಳದಲ್ಲಿ ಸುರಿಯುತ್ತಿರುವ ಮಹಾಮಳೆ ಕ್ಷಣ ಕ್ಷಣಕ್ಕೂ ತನ್ನ ರೌದ್ರಾವತಾರವನ್ನು ಹೆಚ್ಚಿಸುತ್ತಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ ಮಳೆಯಿಂದಾಗಿ ಬರೊಬ್ಬರಿ 106 ಮಂದಿ ಸಾವಿಗೀಡಾಗಿದ್ದು, ಇದರೊಂದಿಗೆ ಸವಾನಿ ಸಂಖ್ಯೆ 324ಕ್ಕೆ ಏರಿಕೆಯಾಗಿದೆ.ಸುಮಾರು 2 ಲಕ್ಷ ಮಂದಿ ಪ್ರವಾಹ ಸಂತ್ರಸ್ಥರ ಕ್ಯಾಂಪ್ ಗಳಲ್ಲಿದ್ದಾರೆ. ಕೇರಳದ 13 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಇಂದು ರಾಷ್ಟ್ರೀಯ ವಿಪತ್ತು ದಳದ 35 ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಲಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top