fbpx
ಸಮಾಚಾರ

ಮೊನ್ನೆ ರಾಷ್ಟ್ರಧ್ವಜವನ್ನು ಕೆಳಕ್ಕೆ ಬೀಳಿಸಿದ್ದ ಅಮಿತ್ ಷಾ ವಾಜಪೇಯಿ ಅಂತ್ಯಕ್ರಿಯೆಯಲ್ಲಿ ಕಾಲು ಮೇಲೆ ಕಾಲು ಹಾಕಿ ಕುಳಿತು ದರ್ಪ ತೋರಿದರೇ?

ಮೊನ್ನೆ ತಾನೇ ಸ್ವತಂತ್ರ ದಿನಾಚರಣೆಯಂದು ರಾಷ್ಟ್ರದ್ವವನ್ನು ಹಾರಿಸಲು ಹೋಗಿ ಕೆಳಕ್ಕೆ ಬೀಳಿಸಿ ದೇಶದ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇದೀಗ ಮತ್ತೊಮ್ಮೆ ಟೀಕೆಗೆ ಗುರಿಯಾಗುತ್ತಿದ್ದಾರೆ. ನೆನ್ನೆ ಮಾಜಿ ಪ್ರಧಾನಿ ವಾಜಪೇಯಿ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಅಮಿತ್ ಷಾ ನೆರೆದಿದ್ದ ಗಣ್ಯರೊಂದಿಗೆ ಮುಂದಿನ ಸಾಲಿನಲ್ಲೇ ಕುಳಿತಿದ್ದರು. ಈ ವೇಳೆ ಅವರು ಕಾಲಿನ ಮೇಲೆ ಕಾಲು ಹಾಕಿ ಕುಳಿತಿದ್ದರು, ಅವರ ಈ ವರ್ತನೆಗೆ ಬೇರೆಯವರಿರಲೀ ಬಿಜೆಪಿ ಬೆಂಬಲಿಗರೇ ಕಿಡಿಕಾರುತ್ತಿದ್ದಾರೆ..

 

 

ಸ್ವತಂತ್ರ ದಿನಾಚರಣೆಯಂದು ಬಿಜೆಪಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣ ಮಾಡುವ ವೇಳೆ ತಿಣುಕಾಡಿದ ಅಮಿತ್ ಷಾ ರಾಷ್ಟ್ರ ಧ್ವಜವನ್ನು ಕೆಳಕ್ಕೆ ಕೆಡವಿದ್ದರು.. ರಾಷ್ಟ್ರಧ್ವಜಕ್ಕೆ ಅಮಿತ್ ಷಾ ಅವಮಾನ ಮಾಡಿದ್ದಾರೆ, ರಾಷ್ಟ್ರದ ಧ್ವಜವನ್ನು ನಿಭಾಯಿಸಲು ಆಗದವರು ಅದ್ಹೇಗೆ ದೇಶವನ್ನು ನಿಭಾಯಿಸುತ್ತಾರೆ. ಎಂಬ ಮೂದಲಿಕೆಯ ಮಾತುಗಳು ಕೇಳಿಬಂದಿದ್ದವು.. ಆ ಘಟನೆ ನಡೆದು ಎರಡು ದಿನ ಕಳೆಯುವಷ್ಟರಲ್ಲೇ ಅಮಿತ್ ಷಾ ಮತ್ತೊಮ್ಮೆ ವಾಜಪೇಯಿ ಅಂತ್ಯಕ್ರಿಯೆಯಲ್ಲಿ ಕಾಲು ಮೇಲೆ ಕಾಲು ಹಾಕಿ ಕುಳಿತು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ..

ಬೇರೆಯವರಿಗೆ ಸಂಸ್ಕೃತಿಯ ಬಗ್ಗೆ ಮಾತನಾಡುವ ಅಮಿತ್ ಷಾ ಅವರೇ ಈ ರೀತಿ ಮಾಡಿರುವುದು ವಿಪರ್ಯಾಸವಾಗಿದೆ. “ಸಾವಿನ ಮನೆಯಲ್ಲಿಯೂ ಕಾಲ್ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಸ್ಟೇಟಸ್ ಬೇಕಾ? ಶ್ರೇಷ್ಠ ಪ್ರಧಾನಿಗಳ ಅಂತ್ಯಕ್ರಿಯೆಯಲ್ಲಿ ಕಾಲ್ ಮೇಲೆ ಕಾಲು ಹಾಕಿ ಕೂತಿರುವ ಇವರೇನು ಸುಸಂಸ್ಕೃತರಾ? ಇದೇನಾ ಸಂಸ್ಕೃತಿ? ” ಎಂಬಂತ ಆಕ್ರೋಶದ ಮಾತುಗಳು ಅಮಿತ್ ಷಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ.. ಅಂದಹಾಗೆ ಅಮಿತ್ ಷಾ ಕಾಲು ಮೇಲೆ ಹಾಕಿದ್ದ ವೇಳೆ ಈಗಿನ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಮಾನಾಥ್ ಕೊವಿಂದ್ ಪಕ್ಕದಲ್ಲೇ ಕುಳಿತಿದ್ದು ದುರಂತ.. ದೇಶದ ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ಗೌರವ ಕೊಡುವುದು ಹೀಗೆನಾ? ಅವರಿಗಿಂತ ಅಮಿತ್ ಷಾ ದೊಡ್ಡವರಾದರೇ? ಎಂಬ ಪ್ರಶ್ನೆಗಳು ಪ್ರಜ್ಞಾವಂತ ಮನಸುಗಳಲ್ಲಿ ಕಾಡುತ್ತಿದೆ.

ಅದೇನೇ ಇರಲಿ ಅಮಿತ್ ಷಾ ಅವರ ಇತ್ತೀಚಿನ ಈ ಎರಡು ವರ್ತನೆಗಳ ವಿರುದ್ಧ ದೇಶದ ಜನರಲ್ಲಿ ಒಂದು ರೀತಿಯ ಬೇಸರ ಮೂಡಿರುವುದಂತೂ ಸತ್ಯ. ಅವರ ಈ ನಡೆಗಳು ಉದ್ದೇಶಪೂರ್ವಕಲ್ಲವಾದರೂ ಆಡಳಿತ ಪಕ್ಷದ ಅಧ್ಯಕ್ಷರಾಗಿ ಗೌರವದಿಂದ ಮತ್ತು ಅತ್ಯಂತ ಎಚ್ಚರವಾಗಿ ವರ್ತಿಸಬೇಕು ಎಂಬುದು ದೇಶದ ಜನರ ಬಯಕೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top