ಸಮಾಚಾರ

ಕನ್ನಡದಲ್ಲಿ 150 ಕೋಟಿ ಬಜೆಟ್​ನ ಸಿನಿಮಾ- 250 ಕೋಟಿ ಗಳಿಕೆ ನಿರೀಕ್ಷೆ

ಶಿವಣ್ಣ ಅಭಿನಯದ ಸೂಪರ್ ಹಿಟ್ ಟಗರು ಸಿನಿಮಾ ಹೊರತು ಪಡಿಸಿ ಈ ಆಷಾಡ ಮಾಸದವರೆಗೂ ಸ್ಯಾಂಡಲ್ವುಡ್ ಸ್ಟಾರ್ ನಟರ ಸಿನೆಮಾಗಳು ರಿಲೀಸ್ ಆಗಿರಲಿಲ್ಲ ಇದರಿಂದ ಸಿನಿರಸಿಕರು ಯಾವಾಗ ಸ್ಟಾರ್ ನಟರ ಸಿನಿಮಾ ರಿಲೀಸ್ ಆಗುತ್ತವೆ ಎಂದು ನೋಡಲು ಕಾದು ಕುಳಿತಿದ್ದರು. ಈಗ ಆಷಾಡ ಮಾಸ ಶುರು ವಾಗಿದೆ ಇನ್ನು ಸಾಲು ಸಾಲು ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗಲಿವೆ. ಸಿನಿರಸಿಕರಿಗೆ ಈ ತಿಂಗಳು ಹಾಗು ನಂತರ ಮನರಂಜನೆಯ ಹಬ್ಬವಾಗಿದೆ.

ಬಹುತೇಕ ಸ್ಟಾರ್‌ ನಟರ ಸಿನಿಮಾಗಳು ಈ ವರ್ಷದ ದ್ವಿತೀಯಾರ್ಧದಲ್ಲಿ ಬಿಡುಗಡೆ ಆಗುತ್ತಿವೆ ಎಂದು ತಿಳಿದು ಬಂದಿದೆ. ಅವರು ಅಭಿನಯ ಮಾಡುತ್ತಿರುವ ಎಲ್ಲ ಸಿನಿಮಾಗಳು ಅಂದಾಜು 150 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಆಗಿದ್ದು, ಇವುಗಳಿಂದ 250 ಕೋಟಿ ರೂ. ಗಳಿಕೆಯ ನಿರೀಕ್ಷೆ. ಅಲ್ಲದೇ, ಶ್ರಾವಣದಲ್ಲಿ ಹಾಗೂ ತದ ನಂತರ ಪರಭಾಷೆಯ ಸ್ಟಾರ್‌ ನಟರ ಸಿನೆಮಾಗಳುಕೂಡ ಹೆಚ್ಚಾಗಿ ಬಿಡುಗಡೆ ಆಗುವುದರಿಂದ ಅವುಗಳೊಂದಿಗೆ ಪೈಪೋಟಿ ನಡೆಸುವ ಅನಿವಾರ್ಯತೆಯೂ ಈ ಚಿತ್ರಗಳಿಗಿದೆ.

 

 

 

ಯಶ ಅಭಿನಯದ ‘ಕೆಜಿಎಫ್‌’ ಸಿನಿಮಾ, ದರ್ಶನ ಅಭಿನಯದ ಕುರುಕ್ಷೇತ್ರ ಸಿನಿಮಾ, ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾ, ಸುದೀಪ್ ಹಾಗು ರೆಬೆಲ್ ಸ್ಟಾರ್ ಅಂಬರೀಷ್ ಒಟ್ಟಾಗಿ ಅಭಿನಯ ಮಾಡುತ್ತಿರುವ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾ, ಶಿವಣ್ಣ ಹಾಗು ಸುದೀಪ್ ಒಟ್ಟಾಗಿ ಅಭಿನಯ ಮಾಡಿರುವ ದಿ ವಿಲನ್ ಸಿನಿಮಾ, ಗಣೇಶ್ ಅಭಿನಯ ಮಾಡಿರುವ ಓರೆಂಜ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿವೆ ಎಂದು ತಿಳಿದು ಬಂದಿದೆ.

ಇವೆಲ್ಲ ಸಿನೆಮಾ ಒಟ್ಟು ಅಂದಾಜು ಬಜೆಟ್ 150 ಕೋಟಿ ಇದ್ದು ಒಟ್ಟು 250 ಕೋಟಿ ಬಾಕ್ಸ್ ಆಫೀಸ್ ಕಲ್ಲೆಕ್ಷನ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top